ಶರಣ್ ಯಶಸ್ಸಿನ ಹಿಂದೆ ಇದೆ ಬಾಲ್ಯದಿಂದಲೂ ಸಿಕ್ಕ ಈ ನಂಬರ್!

Published : Nov 11, 2018, 10:38 PM IST
ಶರಣ್ ಯಶಸ್ಸಿನ ಹಿಂದೆ ಇದೆ ಬಾಲ್ಯದಿಂದಲೂ ಸಿಕ್ಕ ಈ ನಂಬರ್!

ಸಾರಾಂಶ

ಬಿಗ್ ಬಾಸ್ ಮನೆಗೆ ಶರಣ್ ಎಂಟ್ರಿ ಕೊಟ್ಟಿದ್ದರು. ಮನೆ ಒಳಗಿರುವವರ ವಿವಿಧ ಕಲಾ ಪ್ರದರ್ಶನ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದರು. ನಂತರ ಹೊರಬಂದದು ತಮ್ಮ ವಿಕ್ಟರಿ-2 ಸಿನಿಮಾ ಬಗ್ಗೆ ಮಾತನಾಡಿದ್ದಲ್ಲದೆ ಗಾಯನ ಮಾಡಿ ರಂಜಿಸಿದರು.

ಶರಣ್ ಅವರು ಸಹ ಸುದೀಪ್ ಅವರ ಪ್ರಶ್ನೆಗಳಿಗೆ ಒಂದಾದ ಮೇಲೆ ಒಂದು ಉತ್ತರ ನೀಡುತ್ತ ಹೋದರು. ರ್ಯಾಂಬೋ 2, ವಿಕ್ಟರಿ 2, ಅಧ್ಯಕ್ಷ 2 ಹೀಗೆ ಎಲ್ಲ ಸಿನಿಮಾಗಳಲ್ಲೂ ಭಾಗ 2 ನ್ನು ಮಾಡುತ್ತಿದ್ದೀರಲ್ಲಾ? ಏನಿದರ ರಹಸ್ಯ ಎಂದು ಸುದೀಪ್ ಪ್ರಶ್ನೆ ಮಾಡಿದರು.

ನನಗೆ ಎರಡು ಅದು ಯಾವ ಕಾರಣಕ್ಕೆ ಅದೃಷ್ಟ ತಂದು ಕೊಟ್ಟಿದೆಯೋ ಗೊತ್ತಿಲ್ಲ. ಎರಡನೇ ಪ್ರಯತ್ನದಲ್ಲಿಯೇ ಯಶಸ್ಸು ಕಾಣುತ್ತಿದ್ದೇನೆ. ನನಗೆ ಇಬ್ಬರು ತಾಯಂದಿರು. ನಮ್ಮ ನಿಜವಾದ ತಾಯಿ ಯಾರೂ ಎಂಬುದೂ ಇಂದಿಗೂ ಗೊತ್ತಿಲ್ಲ. ಇಬ್ಬರಿಂದಲೂ ಒಂದೇ ಸಮನಾದ ಮಮತೆ, ಪ್ರೀತಿ ದೊರೆಯುತ್ತಿದೆ, ದೊರೆಯುತ್ತಲೇ ಬಂದಿದೆ ಎಂದು ಹೇಳಿದರು. ಸುದೀಪ್ ಮದುವೆ ವಿಚಾರ ಇಟ್ಟುಕೊಂಡು ೀ ಸಂದರ್ಭ ಸಖತ್ತಾಗಿ ಕಾಲೆಳೆದರು.

ಸಿನಿಮಾ ಗೀತೆಯೊಂದೇ ಅಲ್ಲದೇ ಕ್ಲಾಸಿಕಲ್ ಗೀತೆಯನ್ನು ಶರಣ್ ಹಾಡಿದರು. ಇದಕ್ಕೆ ಸುದೀಪ್ ಮೆಚ್ಚಿದ್ದಲ್ಲದೇ ಈ ವೇದಿಕೆಯಲ್ಲಿ ಇಂಥ ಗಾಐನ ಕೇಳಿಲ್ಲ ಎಂದು ಹೊಗಳಿಕೆಯ ಸರಮಾಲೆಯನ್ನೇ ನೀಡಿದರು.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ
ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!