
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಶರಣ್ ಅವರನ್ನು ಸ್ಪರ್ಧಿಗಳು ಬರಮಾಡಿಕೊಂಡರು. ಆತ್ಮೀಯವಾಗಿ ಸ್ವಾಗತ ಕೋರಿ ಎಲ್ಲರೂ ಶರಣ್ ಜತೆ ಕುಶಲೋಪರಿ ನಡೆಸಿದರು. ರಶ್ಮಿ ನಿರೂಪಣೆಯಲ್ಲಿ ಶರಣ್ ಮುಂದೆ ಸ್ಪರ್ಧಿಗಳ ಪ್ರತಿಭಾ ಪ್ರದರ್ಶನ ನಡೆಯಿತು. ಬಾಡಿ ಬಿಲ್ಡರ್ ಎವಿ ರವಿ ತಮ್ಮ ದೇಹದಾರ್ಢ್ಯ ಪ್ರದರ್ಶಿಸಿದರು.
ನಂತರ ನವೀನ್, ನಯನಾ ಅವರ ಸಾಂಗ್, ಧನಂಜಯ್, ರಾಕೇಶ್, ಅಕ್ಷತಾ ಸಂದೇಶ ಸಾರುವ ಪ್ರದರ್ಶನ ನೀಡಿದರು. ಆಡಮ್ ಪಾಷಾ ಮತ್ತು ಶಶಿ ಜಂಟಿಯಾಗಿ ನಡೆಸಿದ ಸಾಲ್ಸಾ ಮಿಶ್ರಿತ ನೃತ್ಯಕ್ಕೆ ಶರಣ್ ಹೊಗಳಿಕೆಗಳ ಮಹಾಪೂರ ಹರಿಸಿದರು. ಆಡಮ್, ಶಶಿ ಗೆದ್ದಿದ್ದಾರೆ ಎಂದು ಶರಣ್ ಘೋಷಿಸಿ ಇಬ್ಬರಿಗೂ ಪ್ರಶಸ್ತಿ ನೀಡಿ ಹೊರಬಂದರು.
ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ನೇಹಾ ಅವರ ಜತೆಯೂ ಸುದೀಪ್ ಮಾತನಾಡಿದರು. ಸ್ನೇಹ ಹೇಳುವ ಪ್ರಕಾರ ಮುಂದಿನ ವಾರ ಮುರುಳಿ ಎಲಿಮಿನೇಟ್ ಆಗಲಿದ್ದಾರಂತೆ. ನಾನೇಕೆ ಹೊರಬಂತೆ ಎನ್ನುವುದೆ ಗೊತ್ತಾಗುತ್ತಿಲ್ಲ ಎಂದಾಗ ಸುದೀಪ್, ವೂಟ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನೋಡಿ ಎಂದು ಹೇಳಿ ಕಳುಹಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.