ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ನವರಸ ನಾಯಕ ಜಗ್ಗೇಶ್ ಸುದೀಪ್ ರೊಂದಿಗೆ ಮಾತಿನ ಮಂಟಪವನ್ನೇ ಕಟ್ಟಿದರು. ತಮ್ಮ ಜೀವನದ ಘಟನೆಗಳನ್ನು ತಮ್ಮದೆ ಶೈಲಿಯಲ್ಲಿ ಹೇಳುತ್ತ ಬಂದ ಜಗ್ಗೇಶ್ ಸುದೀಪ್ ಅವರನ್ನು ಹಾಡಿ ಹೊಗಳಿದರು. ಸುದೀಪ್ ಹೇಳಿದ ಟೈಟಲ್ ಗಳಿಗೆ ಚಿತ್ರರಂಗದಲ್ಲಿ ಯಾರೂ ಸೂಟ್ ಆಗುತ್ತಾರೆ ಎಂದು ಜಗ್ಗೇಶ್ ತಿಳಿಸಿದರು.
ಜಗ್ಗೇಶ್ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ಕೇಳಿದ ಸುದೀಪ್ ಅವರಿಗೆ ಸಿಕ್ಕಿದ್ದು ಮಾತ್ರ ಸಖತ್ ಉತ್ತರ. ಜಗ್ಗೇಶ್ ಪ್ರಕಾರ ತರ್ಲೆ ನನ್ನ ಮಗ ಯಾರು? ಭಂಡ ಅಲ್ಲ ಬಹದ್ದೂರ್ ಯಾರು? ಮುಂದೆ ಓದಿ.. ಹಾ. ತರ್ಲೆ ನನ್ನಮಗ ಚಿತ್ರ ಕೊಟ್ಟ ಉಪೇಂದ್ರ ಅವರಿಗೆ ಧನ್ಯವಾದ ಹೇಳಲು ಜಗ್ಗೇಶ್ ಮರೆಯಲಿಲ್ಲ. ಜಗ್ಗೇಶ್ ಪ್ರಕಾರ ...
ರಾಯರ ಮಗ-ಜಗ್ಗೇಶ್
ತರ್ಲೆ ನನ್ನ ಮಗ- ಚಿಕ್ಕಣ್ಣ
ಭಂಡ ಅಲ್ಲ ಬಹದ್ದೂರ್-ಪುನೀತ್
ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ- ರಮೇಶ್ ಅರವಿಂದ್
ರೂಪಾಯಿ ರಾಜ-ಟೆನ್ನಿಸ್ ಕೃಷ್ಣ
ಬಲ್ ನನ್ಮಗ-ಮುರಳಿ
8ಎಂಎಂ-ಜಗ್ಗೇಶ್
ಬೆಸ್ಟ್ ಕಾಮಿಡಿಯನ್ ಚಿಕ್ಕಣ್ಣ, ನರಸಿಂಹರಾಜು