ರಶ್ಮಿ ಹಾರ್ಟ್ ನೀಡಿದ್ದು ಯಾರಿಗೆ? ಧನರಾಜ್ ಕಿಮ್ಮತ್ತು 100 ರೂ.!

Published : Nov 13, 2018, 10:38 PM IST
ರಶ್ಮಿ ಹಾರ್ಟ್ ನೀಡಿದ್ದು ಯಾರಿಗೆ? ಧನರಾಜ್ ಕಿಮ್ಮತ್ತು 100 ರೂ.!

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಕಾಂಚಾಣ ಸದ್ದು ಮಾಡಿತು. ಐಪಿಎಲ್ ರೀತಿಯಲ್ಲೇ ಬಿಡ್ಡಿಂಗ್ ಮಾಡಲಾಯಿತು. ಎರಡು ತಂಡಗಳ ನಾಯಕರು ತಮಗೆ ಬೇಕಾದವರನ್ನು ಬಿಗ್ ಬಾಸ್ ನೀಡಿದ ಹಣದಲ್ಲಿ ಖರೀದಿ ಮಾಡಿದರು.

ನಾಲ್ಕನೇ ವಾರದ ಲಗ್ಜುರಿ ಬಜೆಟ್  ಆಗಿ ‘ಗೊಂಬೆ ಆಟವಯ್ಯಾ’ ಟಾಸ್ಕ್ ನೀಡಲಾಯಿತು. ಎರಡು ತಂಡಗಳನ್ನಾಗಿ ಮಾಡಿ ಒಂದೊಂದು ತಂಡವೂ ಗೊಂಬೆ ತಯಾರಿಸಬೇಕು. ಬಳಿಕ ಅದನ್ನು ಮಾರಾಟ ಮಾಡಬೇಕು ಎಂಬ ನಿಯಮ ಬಿಗ್ ಬಾಸ್ ಮನೆಯಲ್ಲಿ ಜಾರಿಯಾಯಿತು. ಇನ್ನೊಂದು ಕಡೆ ಗೊಂಬೆ ಕಳ್ಳರು ತಲೆ ಎತ್ತಿದರು.

ರಶ್ಮಿ ನಾನು ಆ್ಯಂಡಿಗೆ ಹಾರ್ಟ್ ನೀಡಿದ್ದೇನೆ. ಹಾಗಾಗಿ ಬಿಡ್ ಮಾಡಲೇಬೇಕಿಲ್ಲ ಆದರೂ ಬಿಗ್  ಬಾಸ್ ನಿಯಮದಂತೆ ಬಿಡ್ ಮಾಡುತ್ತಿದ್ದೇವೆ ಎಂದು ಹೇಳಿದರು. ಕೊನೆಯದಾಗಿ ಆ್ಯಂಡಿ  16050 ರೂ.ಗೆ ರಶ್ಮಿ ಗುಂಪಿಗೆ ಸೇರಿಕೊಂಡರು. ನವೀನ್ 17750ಕ್ಕೆ ಅಕ್ಷತಾ ಗುಂಪಿಗೆ ಸೇರಿದರು. ರಾಕೇಶ್ ಗೆ ರಶ್ಮಿ ನೀಡಿದ್ದು ಒಂದು ಸೀರೆ ಒಂದು ಬ್ಲೌಸ್ ಪೀಸ್... ಕೊನೆಗೆ ರಾಕೇಶ್ 5100ಕ್ಕೆ ಅಕ್ಷತಾ ರಾಕೇಶ್ ಅವರನ್ನು ಖರೀದಿ ಮಾಡಿದರು.

ಧನರಾಜ್ ಗೆ 100 ರೂ. ಬೆಲೆ ಕಟ್ಟಲಾಯಿತು. ಕನಿಷ್ಠ 1000 ರೂ. ಎಂದು ಧನರಾಜ್ ಹೇಳಿದರು.  ಶಶಿ ಸಹ ಅತಿ ಹೆಚ್ಚಿನ ಬೆಲೆಗೆ ಮಾರಾಟವಾದರು. ಮೊದಲ ಸುತ್ತಿನಲ್ಲಿ ಬಿಗ್ ಬಾಸ್ 20 ಗೊಂಬೆಗಳಿಗೆ ಬೇಡಿಕೆ ನೀಡಿದರು. ಗೊಂಬೆಯಾಟದಲ್ಲಿ ಒಬ್ಬೊಬ್ಬರು ಹೊಸ ಹೊಸ ತಂತ್ರ ಶುರುಮಾಡಿದರು. ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಗೊಂಬೆ ಕಳ್ಳರು ಕಾಣಿಸಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?