
ನವೀನ್ ಅವರು ಈಗಾಗಲೇ ನೇರವಾಗಿ ಬಿಗ್ ಬಾಸ್ ಫೈನಲ್‌ಗೆ ತಲುಪಿದ್ದು ಉಳಿದದವರು ಯಾವ ಕಾರಣಕ್ಕೆ ಬಿಗ್ ಬಾಸ್ ಕೊನೆ ವಾರಕ್ಕೆ ತಲುಪಬೇಕು ಎಂಬುದನ್ನು ಸಮರ್ಥನೆ ಮಾಡಲು ಕೇಳಿಕೊಳ್ಳಲಾಯಿತು. ಎಲ್ಲರೂ ಟಾಸ್ಕ್ ಸುದ್ದಿಯನ್ನೇ ತಿರುಗಾ-ಮುರುಗಾ ಹೇಳಿದರು.
ನಾಮಿನೇಶನ್ ಪ್ರಕ್ರಿಯೆ ಸಹ ಈ ವಾರ ಡಿಫರೆಂಟಾಗಿತ್ತು. ಧನರಾಜ್ ಒಬ್ಬರನ್ನು ಹೊರತು ಪಡಿಸಿ ಆ್ಯಂಡಿ, ಕವಿತಾ, ರಾಕೇಶ್, ರಶ್ಮಿ, ಶಶಿ ಅವರನ್ನು ನಾಮಿನೇಟ್ ಮಾಡಲಾಯಿತು.
ಅಕ್ಷತಾ ಪ್ರಕಾರ ಬಿಗ್‌ಬಾಸ್ ಟಾಪ್ 2, ಮನೆಯೊಳಗಿನ ಹೆಮ್ಮಾರಿ ಯಾರು?
ಕ್ಯಾಂಡಲ್ ಲೈಟ್ ಡಿನ್ನರ್‌ವೊಂದನ್ನು ಆಯೋಜನೆ ಮಾಡಲಾಯಿತು. ಕವಿತಾ ಗೌಡ ಮತ್ತು ಶಶಿ ನಡುವೆ ರೋಮ್ಯಾಂಟಿಕ್ ಡಿನ್ನರ್ ಆಯೋಜನೆ ಮಾಡಲಾಗಿತ್ತು. ಇದೊಂದು ಟಾಸ್ಕ್ ಆಗಿತ್ತು. ಕವಿತಾ ಗೌಡ ಕಿವಿಯಲ್ಲಿ ಒಂದು ಮೈಕ್ರೋ ಫೋನ್ ಇಟ್ಟಿದ್ದು ಪ್ರಥಮ್ ಕವಿತಾ ಗೌಡಗೆ ನಿರ್ದೇಶನ ನೀಡುತ್ತಿದ್ದರು. ಈ ಎಲ್ಲ ಆಟವನ್ನು ಹಾಸಿಗೆ ಮುಚ್ಚಿಕೊಂಡು ಆ್ಯಂಡಿ ಗಮನಿಸುತ್ತಿದ್ದರು. ಕವಿತಾ ಗೌಡ ಪ್ರಥಮ್ ನಿರ್ದೇಶನದಂತೆ ಶಶಿ ಅವರನ್ನು ಸಖತ್ತಾಗೆ ಕಾಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.