
ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ಮುಗಿದಿದೆ. ಟಿಕೆಟ್ ಹರಿಯುವುದು ಮಾತ್ರ ನನ್ನ ಕೆಲಸವಾ? ನನಗೂ ಎಲ್ಲ ಗೊತ್ತಿದೆ ಎಂದು ಆನಂದ್ ಹೇಳಿದರೆ, ಆ್ಯಂಡಿ ಜತೆ ಗೆಳೆತನ ಮಾಡಬೇಡ ಎಂದು ಮುರಳಿ ಹೇಳಿದರು.
ಮನೆಯವರೆ ನೀಡಿದ ಬಿರುದುಗಳು ಮಾತ್ರ ಒಂದಕ್ಕಿಂತ ವಿಚಿತ್ರವಾಗಿದ್ದು ಬೋರ್ಡ್ ನ್ನು ಹಾಕಿಕೊಂಡೆ ಸುಸ್ತಾದ ಸ್ಪರ್ಧಿಗಳು ನಿದ್ರೆಗೆ ಜಾರಿದರು.
ಮೂರ್ಖ -ಕಂಡಕ್ಟರ್ ಆನಂದ್
ಅಳುಮುಂಜಿ-ರೀಮಾ
ವಿಷಸರ್ಪ-ರಶ್ಮಿ
ಸಮಯಸಾಧಕ, ಮಿತ್ರದ್ರೋಹಿ- ಆ್ಯಂಡಿ
ದಂಡಪಿಂಡ-ಮುರಳಿ
ಸ್ವಾರ್ಥಿ- ನವೀನ್
ನಕಲಿ-ಸ್ನೇಹಾ
ಕುತಂತ್ರಿ- ಶಶಿ, ರಶ್ಮಿ
ಡ್ರಾಮಾ ಕ್ವೀನ್ - ಸ್ನೇಹಾ
ಸೋಮಾರಿ- ನಯನಾ
ಗೋಮುಖವ್ಯಾಘ್ರ-ರಶ್ಮಿ
ಕಿರಿಕಿರಿ-ಆ್ಯಂಡಿ
ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ - ರಶ್ಮಿ
ನಿರುತ್ಸಾಹಿ- ಮುರಳಿ
ಗುಳ್ಳೆನರಿ-ಆ್ಯಂಡಿ ಮತ್ತು ರಶ್ಮಿ
ವಿಕೃತ ಮನಸ್ಸು-ಆ್ಯಂಡಿ
ಮುಂಗೋಪಿ- ರವಿ
ತನಗೆ ಇಷ್ಟು ಬಿರುದುಗಳು ಸಿಕ್ಕಿರುವ ಬಗ್ಗೆ ರಶ್ಮಿ ಇಡೀ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್ ನ್ನೇ ನನ್ನ ಕೊರಳಿಗೆ ಹಾಕಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು. ರಶ್ಮಿ ಮತ್ತು ಆ್ಯಂಡಿ ಮನೆಮಂದಿಯಿಂದ ಅತಿ ಹೆಚ್ಚು ಬಿರುದು ಪಡೆದುಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.