ಸ್ಪರ್ಧಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಬಿಗ್‌ ಬಾಸ್‌, ವಿಚಿತ್ರ ಮ್ಯಾನರಿಸಂ ವ್ಯಕ್ತಿ ಹೊರಕ್ಕೆ

Published : Dec 01, 2018, 10:11 PM ISTUpdated : Dec 01, 2018, 10:28 PM IST
ಸ್ಪರ್ಧಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಬಿಗ್‌ ಬಾಸ್‌, ವಿಚಿತ್ರ ಮ್ಯಾನರಿಸಂ ವ್ಯಕ್ತಿ ಹೊರಕ್ಕೆ

ಸಾರಾಂಶ

ಬಿಗ್ ಬಾಸ್ ಮನೆಯಿಂದ ಸಾಮಾನ್ಯ ಸ್ಪರ್ಧಿಯೊಬ್ಬರು ಹೊರನಡೆದಿದ್ದಾರೆ. ನವೀನ್, ರಾಕೇಶ್, ಕವಿತಾ, ಜಯಶ್ರೀ, ಆನಂದ್, ಸೋನು ನಾಮಿನೇಟ್ ಆಗಿದ್ದರು. ಕಳೆದ ವಾರ ಜಿಮ್‌ ರವಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು. ಈ ಬಾರಿ ಆನಂದ್ ಸರದಿ.

ಬಿಎಂಟಿಸಿ ಚಾಲಕರಾಗಿ ಮನೆ ಪ್ರವೇಶ ಪಡೆದಿದ್ದ ಆನಂದ್ ತಮ್ಮ ವಿಭಿನ್ನ ಮ್ಯಾನರಿಸಂನಿಂದ ಗುರುತಿಸಿಕೊಂಡಿದ್ದರು. ಮಸಿ ಬಳಿಯುವ ಟಾಸ್ಕ್ ನಲ್ಲಿ ದೊಡ್ಡ ನಾಮಿನೇಶನ್‌ನಿಂದ ಪಾರಾದ ಆ್ಯಂಡಿ ಮುಂದಿನ ವಾರಕ್ಕೆ ತಮ್ಮ ಆಟ ಕಾಯ್ದುಕೊಂಡರು.

ವಾರದ ಕತೆ ಕಿಚ್ಚನ ಜತೆಯಲ್ಲಿ ಈ ವಾರ ಮತ್ತು ಕಳೇದ ವಾರದ ಕೆಲವು ಘಟನಾವಳಿಗಳ ಚರ್ಚೆ ಮತ್ತು ಪರಾಮರ್ಶೆ ಆದವು.  ಗಂಡ ಹೆಂಡತಿ ಹೇಳಿಕೆ, ಆ್ಯಂಡಿ ಪಾಯಸಕ್ಕೆ ಮೆಣಸಿನ ಪುಡಿ ಹಾಕಿದ್ದು ಎಲ್ಲವನ್ನು ಸುದೀಪ್ ನಿಭಾಯಿಸಿದರು.

ಇಲ್ಲಿಗೆ ಬಿಗ್‌ ಬಾಸ್ ಮನೆ 41 ದಿನ ಮುಗಿಸಿದೆ. ಕನ್ನಡಿಗರನ್ನು ಅಂಬರೀಶ್ ಅಗಲಿದ ವಿಚಾರ ಮನೆ ಒಳಗಿನ ಮಂದಿಗೆ ಗೊತ್ತಿರಲಿಲ್ಲ. ಆದರೆ ಬಿಗ್ ಬಾಸ್ ಇಂದು ಆ ವಿಚಾರ ತಿಳಿಸಿದರು.  ಮನೆ ಮಂದಿಯೆಲ್ಲ ಭಾವುಕರಾದರು.

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ