
ಕೆಲವು ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಸಬ್‌ಸ್ಕ್ರೈಬರ್‌ಗಳಿಗಾಗಿ ದೇಹ ಪ್ರದರ್ಶನ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ತಪ್ಪು ದಾರಿ ತೋರಿಸುತ್ತಿದೆ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟ ರಜಿತ್ ಕುಮಾರ್ ಆರೋಪಿಸಿದ್ದಾರೆ. 'ಹೀಗೆ ಮಾಡುವುದರಿಂದ ಯಾವುದೇ ಶ್ರಮವಿಲ್ಲದೆ ತಿಂಗಳಿಗೆ 50-60 ಲಕ್ಷ ಸಂಪಾದಿಸಬಹುದು ಅನ್ನೋದು ಮಕ್ಕಳಲ್ಲಿ ಓದುವ ಆಸಕ್ತಿಯನ್ನೇ ಕಡಿಮೆ ಮಾಡುತ್ತಿದೆ' ಎಂದು ರಜಿತ್ ಕುಮಾರ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಯಾರೋ ಕೆಲವರು ಹತ್ತು, ಇಪ್ಪತ್ತು ಸಾವಿರ ಸಬ್‌ಸ್ಕ್ರಿಪ್ಷನ್‌ಗಳಿಂದ ತಿಂಗಳಿಗೆ ನಲವತ್ತು, ಐವತ್ತು, ಅರವತ್ತು ಲಕ್ಷ ಸಂಪಾದಿಸುತ್ತಿದ್ದಾರೆ. ಈ ಆದಾಯವು ಹೊಸ ಪೀಳಿಗೆಯ ಮಕ್ಕಳಿಗೆ, ದೇಹ ದಂಡಿಸದೆ, ಶಾರ್ಟ್‌ಕಟ್ ಮೂಲಕ ಹಣ ಗಳಿಸಲು ಪ್ರೋತ್ಸಾಹ ನೀಡಬಹುದು. ಜೊತೆಗೆ, ಅವರಿಗೆ ಓದಿನಲ್ಲಿ ಆಸಕ್ತಿಯೂ ಕಡಿಮೆಯಾಗಬಹುದು. ಒಳ್ಳೆಯ ವಿಷಯಗಳೆಲ್ಲಾ ಬೇಕು, ಆದರೆ ಕೆಟ್ಟ ವಿಷಯಗಳು ಹೆಚ್ಚಾಗುತ್ತಿವೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವದವರೆಗೆ 'ಎಕ್ಸ್‌ಕ್ಲೂಸಿವ್ ಕಂಟೆಂಟ್' ಕೊಡುವ ಜನರಿದ್ದಾರೆ. ಅವರು ದೇಹದ ಭಾಗಗಳನ್ನು ಪ್ರದರ್ಶಿಸಿ ಹಣ ಮಾಡುತ್ತಿದ್ದಾರೆ. ಇದು ಸಿನಿಮಾ ಅಥವಾ ಸೀರಿಯಲ್‌ಗಳಲ್ಲಿ ಪಾತ್ರವಾಗಿ ನಟಿಸಿದಂತೆ ಅಲ್ಲ. ಅದಕ್ಕೊಂದು ಘನತೆ ಇದೆ. 'ಪಿಕೆ' ಚಿತ್ರದಲ್ಲಿ ಅಮೀರ್ ಖಾನ್ ನಟಿಸಿದ್ದು ಕೂಡ ಒಂದು ಪಾತ್ರದ ಭಾಗವಾಗಿ. ಆದರೆ ಈಗ, ರಾತ್ರಿ ಹೊತ್ತಲ್ಲಿ ನಮ್ಮ ಮಕ್ಕಳು ಓದುವ ಕೋಣೆಗೆ ಹೋದಾಗ, ಹಣದಾಸೆಗೆ ಬಿದ್ದ ಈ ಸಬ್‌ಸ್ಕ್ರಿಪ್ಷನ್ ಪಾರ್ಟಿಗಳು ಅವರ ಬೆನ್ನತ್ತಿವೆ' ಎಂದು ರಜಿತ್ ಕುಮಾರ್ ಹೇಳಿದ್ದಾರೆ.
'ಹೇಗಾದರೂ ಮಾಡಿ ಹಣ ಸಂಪಾದಿಸುವುದೇ ಕೆಲವರ ಗುರಿಯಾಗಿದೆ. ಹಣವೇ ಮುಖ್ಯ, ಹಣವಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬುದು ಕೇವಲ ತಪ್ಪು ಕಲ್ಪನೆ. ಸಮಾಜ ನಿಮ್ಮನ್ನು ಗಮನಿಸುತ್ತಿದೆ. ಸ್ವಲ್ಪ ಸಮಯದ ನಂತರ ಸಮಾಜದಲ್ಲಿ ನಿಮಗೆ ಯಾವುದೇ ಬೆಲೆ ಇರುವುದಿಲ್ಲ. ಈ ಸಬ್‌ಸ್ಕ್ರಿಪ್ಷನ್ ಪಾರ್ಟಿಗಳಿಗೆ ಮಕ್ಕಳಿದ್ದರೆ, ಆ ಮಕ್ಕಳ ಜೊತೆ ಓದುವ ಬೇರೆ ಮಕ್ಕಳ ಬಗ್ಗೆ ಯೋಚಿಸಿ. ಅವರು ನಿಮ್ಮ ಮಕ್ಕಳನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ, ಏನೆಲ್ಲಾ ಹೇಳಿ ಆಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ಹೊಸ ಪೀಳಿಗೆಯನ್ನು ದಾರಿ ತಪ್ಪಿಸುತ್ತದೆ, ಅವರ ಆಲೋಚನಾ ಕ್ರಮವನ್ನು ಬದಲಾಯಿಸುತ್ತದೆ ಮತ್ತು ಅವರ ಓದನ್ನು ಹಾಳುಮಾಡುತ್ತದೆ. ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಹೊಸ ಪೀಳಿಗೆಯು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು ಮಾತ್ರವಲ್ಲ, ಅವರ ಜೀವನವೇ ಹಾಳಾಗುತ್ತದೆ," ಎಂದು ರಜಿತ್ ಕುಮಾರ್ ಎಚ್ಚರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.