ಬಿಗ್ ಬಾಸ್ ವಿನ್ನರ್ ಶಶಿಗೆ ‘ಕಲ್ಯಾಣ’!

Published : Mar 19, 2019, 01:46 PM IST
ಬಿಗ್ ಬಾಸ್ ವಿನ್ನರ್ ಶಶಿಗೆ ‘ಕಲ್ಯಾಣ’!

ಸಾರಾಂಶ

  ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅರೇ! ಇಷ್ಟು ಬೇಗ ಮದುವೇನಾ ಎಂದು ಕೇಳಬೇಡಿ. ಇದು ರಿಯಲ್ ಲೈಫ್ ಮದುವೆ ಅಲ್ಲ ರೀಲ್ ಲೈಫ್ ಮದುವೆ!

ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿ ಕುಮಾರ್ ಸಿನಿಮಾ ಮಾಡುವುದಾಗಿ ಕೆಲ ದಿನಗಳ ಹಿಂದೆ ಹೇಳಿದ್ದರು. ಆದರೆ ಅದ್ಯಾವ ಸಿನಿಮಾ? ನಾಯಕಿ ಯಾರು? ಎಂಬುದರ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಈಗ ಶಶಿ ‘ಕೌಸಲ್ಯ ಕಲ್ಯಾಣ’ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

 

’ಕೌಸಲ್ಯ ಕಲ್ಯಾಣ’ ಒಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಇದಕ್ಕೆ ನವೀನ್ ಕುಮಾರ್ ಹಾಗೂ ಗಿರೀಶ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ರಾಘವಿ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ವಿಶೇಷವೇನೆಂದರೆ ಈ ಚಿತ್ರ ಕಥೆ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ಇನ್ನು ಚಿತ್ರದ ಟ್ರೈಲರ್ ರೆಡಿ ಆಗಿದ್ದು ಸಮಯ ನೋಡಿ ರಿಲೀಸ್ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯಶ್ ಬೆನ್ನಿಗೆ ನಿಂತ ಧುರಂಧರ್ ನಿರ್ದೇಶಕ; ಟಾಕ್ಸಿಕ್ ಟೀಕಿಸೋರಿಗೆ ಆದಿತ್ಯ ಧರ್ ಪೋಸ್ಟ್ ಮೂಲಕ ಖಡಕ್ ಉತ್ತರ
Yash Toxicಗೆ 0.5 ರೇಟಿಂಗ್ ಕೊಟ್ಟ ಮಹೇಶ್ ಬಾಬು ಪುತ್ರ ಗೌತಮ್: ಶುರುವಾಯ್ತು ಭಾರೀ ಚರ್ಚೆ!