ಪೋಲಿಯೋ ಹಾಕಿಸಬೇಡಿ: ಸುದ್ದಿ ಹಿಂದಿನ ಸುಳ್ಳಿನ ಕತೆ

By Web DeskFirst Published Oct 4, 2018, 6:02 PM IST
Highlights

ಒಂದು ಕಡೆ ಭಾರತದಲ್ಲಿಯೇ ತಯಾರಾದ ಪೋಲಿಯೋ ಲಸಿಕೆಯಲ್ಲಿ ಮಾರಕ ವೈರಸ್ ಪತ್ತೆಯಾಗಿದೆ ಎಂಬ ಸುದ್ದಿ ಬಹಿರಂಗವಾಗಿದೆ. ಇದರ ಜತೆಗೆ ಫೇಕ್ ನ್ಯೂಸ್ ಫ್ಯಾಕ್ಟರಿಯೂ ಕೆಲಸ ಆರಂಭಿಸಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹಾಕಿಸಬೇಡಿ ಎಂಬ ಸುದ್ದಿಯೂ ಓಡಾಡುತ್ತಿದೆ.  ಹಾಗಾದರೆ ನಿಜಕ್ಕೂ ಆಗುತ್ತಿರುವುದೇನು? ಒಂದು ನೋಟ ಇಲ್ಲಿದೆ.

ನವದೆಹಲಿ[ಅ.4]  ಘಾಜಿಯಾಬಾದ್‌ ಮೂಲದ ಖಾಸಗಿ ಔಷಧಿ ತಯಾರಿಕ ಕಂಪನಿ ಬಯೋ ಮೆಡ್  ತಯಾರಿಸಿದ್ದ 1.5 ಲಕ್ಷ ಪೋಲಿಯೋ ಲಸಿಕೆಯ ವೈಯಲ್ಸ್‌ನಲ್ಲಿ (vials) ನಲ್ಲಿ ವೈರಸ್ ಟೈಪ್‌ 2 ಪತ್ತೆಯಾಗಿದ್ದು ದೃಢೀಕರಣವಾಗುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಂಪನಿಯನ್ನೇ ಬ್ಯಾನ್ ಮಾಡಿದೆ. ಜತೆಗೆ ಎಲ್ಲ ಇಲಾಖೆಗಳಿಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.

ಆದರೆ ವಾಟ್ಸಪ್ ಸೇರಿದಂತೆ ಕೆಲ ಸಾಮಾಜಿಕ ತಾಣಗಳಲ್ಲಿ ಫೇಕ್ ಸುದ್ದಿ ಹರಿದಾಡುತ್ತಿದೆ. ಪ್ರತಿಯೊಬ್ಬರಿಗೂ ತಿಳಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ.. ದಯವಿಟ್ಟು 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಡಿ.. ಎಂಬ ಸಂದೇಶ ಓಡಾಡುತ್ತಿದೆ.

ವೈರಸ್ ಕಂಡು ಬಂದ ಲಸಿಕೆ ಮತ್ತು ತಯಾರು ಮಾಡಿದ್ದ ಕಂಪನಿಗೆ ಈಗಾಗಲೇ ನಿಷೇಧ ಹೇರಲಾಗಿದೆ. ಜತೆಗೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ದು  ನಾಗರಿಕರು ನಿರ್ಭೀತಿಯಿಂದ ಲಸಿಕೆ ಹಾಕಿಸಬಹುದು.

click me!