
ಮಾಜಿ ವಿಶ್ವಸುಂದರಿ, ಬಾಲಿವುಡ್ ಬೆಡಗಿ ಕನ್ನಡತಿ ಐಶ್ವರ್ಯಾ ರೈ ಬಚ್ಚನ್ ಹೆಸರು ಯಾರು ಕೇಳಿಲ್ಲ ಹೇಳಿ. ಸೌಂದರ್ಯಕ್ಕೆ ಇನ್ನೊಂದು ಹೆಸರೇ ಐಶ್ವರ್ಯಾ ರೈ ಎಂಬುವಷ್ಟರ ಮಟ್ಟಿಗೆ ಈಕೆ ತನ್ನ ಸೌಂದರ್ಯದಿಂದ ಎಲ್ಲರನ್ನೂ ಮೋಡಿ ಮಾಡಿದ್ದಾರೆ. ಹಾಲಿವುಡ್'ನಲ್ಲೂ ತನ್ನ ಪ್ರತಿಭೆ ತೋರಿಸಿದವರು. ಇದೇ ಕಾರಣಕ್ಕಾಗಿ ಐಶ್ವರ್ಯಾ ರೈ ಏನೇ ಮಾಡಿದರೂ ಆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತದೆ.
ಇದೀಗ ಐಶ್ವರ್ಯಾ ರೈ ಅವರ ಕುರಿತಾಗಿ ಒಂದು ಸುದ್ದಿ ಓಡಾಡುತ್ತಿದೆ. ಅದೇನೆಂದರೆ ರೈ ಅವರು ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ ಬಂದು ಮುಡಿ ಕೊಟ್ಟಿರುವ ಫೋಟೋ ವಾಟ್ಸಾಪ್'ನಲ್ಲಿ ಭಾರಿ ವೈರಲ್ ಆಗಿದೆ. ಹೆಣ್ಣಿನ ಸೌಂದರ್ಯ ಹೆಚ್ಚಿಸುವುದೇ ಆಕೆಯ ಕೇಶರಾಶಿ. ಅದೇ ಕೇಶರಾಶಿಯನ್ನು ಐಶ್ವರ್ಯಾ ರೈ ಅವರು ದೇವರಿಗೆ ಅರ್ಪಿಸಿದ್ದಾರೆ. ‘ಬೋಳು ತಲೆಯಲ್ಲಿ ಮಾಜಿ ವಿಶ್ವಸುಂದರಿ ಸಾಮಾನ್ಯ ಹುಡುಗಿಯಂತೆ ಕಾಣುತ್ತಿದ್ದಾರೆ’ ಎಂಬ ಸಂದೇಶವುಳ್ಳ ಚಿತ್ರ ವಾಟ್ಸಾಪ್‌ನಲ್ಲಿ ಓಡಾಡುತ್ತಿದೆ. ಆದರೆ, ಫೋಟೋ ವೈರಲ್ ಆಗುತ್ತಿದ್ದಂತೆ ಇದರ ಬೆನ್ನು ಹತ್ತಿದಾಗ ತಿಳಿದು ಬಂದ ಸತ್ಯವೇ ಬೇರೆಯಾಗಿತ್ತು.
ಐಶ್ವರ್ಯಾ ರೈ ಅವರು ಚಿತ್ರಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದವರು. ಹೀಗಾಗಿ ಅವರು ಸಾರ್ವಜನಿಕವಾಗಿ ಎಲ್ಲಿಯೇ ಕಾಣಿಸಿಕೊಂಡರೂ ಅದು ಸುದ್ದಿಯಾಗುತ್ತದೆ. ಅದರಲ್ಲೂ ಅವರು ತಿರುಪತಿಗೆ ಬಂದು ಮುಡಿ ಕೊಟ್ಟ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೇ ಆಗುತ್ತಿತ್ತು. ಆದರೆ, ಈ ವಿಷಯ ಯಾವುದೇ ಮಾಧ್ಯಮಗಳಲ್ಲಿ ಸುದ್ದಿಯಾಗಿಲ್ಲ. ಅಲ್ಲಿಗೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಚಿತ್ರ ಫೋಟೋಶಾಪ್'ನಲ್ಲಿ ಎಡಿಟ್ ಮಾಡಿರುವ ಚಿತ್ರ ಎಂದು ಸ್ಪಷ್ಟವಾಗಿ ಹೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.