ಅನುಷ್ಕ ಚಿತ್ರದ ಶೂಟಿಂಗ್ ವೇಳೆ ವಿದ್ಯುತ್ ಸ್ಪರ್ಶಿಸಿ ತಂತ್ರಜ್ಞ ಸಾವು

Published : Aug 31, 2017, 12:50 AM ISTUpdated : Apr 11, 2018, 12:57 PM IST
ಅನುಷ್ಕ ಚಿತ್ರದ ಶೂಟಿಂಗ್ ವೇಳೆ ವಿದ್ಯುತ್ ಸ್ಪರ್ಶಿಸಿ ತಂತ್ರಜ್ಞ ಸಾವು

ಸಾರಾಂಶ

ಲೆದರ್ ಕಾಂಪ್ಲೆಕ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೊಲ್‌ಬೆರಿಯಾ ಎಂಬಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಸಾವಿಗೀಡಾದ ತಂತ್ರಜ್ಞನನ್ನು ಶಾ ಅಲಂ(28) ಎಂದು ಗುರುತಿಸಲಾಗಿದೆ.

ಕೋಲ್ಕತ್ತಾ(ಆ.31): ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರು ನಾಯಕಿಯಾಗಿ ಅಭಿನಯಿಸುತ್ತಿರುವ ‘ಪಾರಿ’ ಚಿತ್ರದ ಶೂಟಿಂಗ್ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಿವುಡ್ ತಂತ್ರಜ್ಞರೊಬ್ಬರು ಮೃತಪಟ್ಟಿರುವ ದುರ್ಘಟನೆ ಪಶ್ಚಿಮ ಬಂಗಾಳದ ಸೌತ್ 24 ಪರಗಣಸ್ ಜಿಲ್ಲೆಯಲ್ಲಿ ನಡೆದಿದೆ.

ಲೆದರ್ ಕಾಂಪ್ಲೆಕ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೊಲ್‌ಬೆರಿಯಾ ಎಂಬಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಸಾವಿಗೀಡಾದ ತಂತ್ರಜ್ಞನನ್ನು ಶಾ ಅಲಂ(28) ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ವಿದ್ಯುತ್ ತಗುಲಿ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ. ಅತ್ಯಾಕರ್ಷಕವಾಗಿ ಕಾಣಲಿ ಎಂಬ ಕಾರಣಕ್ಕಾಗಿ ಬಿದುರುಗಳಿಗೆ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಈ ವೇಳೆ ವಿದ್ಯುತ್ ಪ್ರವಹಿಸುತ್ತಿದ್ದ ವೈರ್ ಅನ್ನು ಮುಟ್ಟಿದ ಪರಿಣಾಮ ಶಾ ಅಲಂ ಮೃತಪಟ್ಟಿದ್ದಾನೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚಳಿಗಾಲದ ಟೈಮಲ್ಲೇ ಹಾಟ್‌ಬ್ಯೂಟಿ ಆದ ರಾಧಾಮಿಸ್‌!
ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಸೀರಿಯಲ್‌ ತಾರೆಯರು!