Cocktail 2- Rashmika Mandanna: ರಶ್ಮಿಕಾ ಮಂದಣ್ಣರ 'ಕಾಕ್‌ಟೇಲ್ 2' ಮ್ಯಾಜಿಕ್.. ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್!

Published : Jun 19, 2026, 04:45 PM IST
Cocktail 2

ಸಾರಾಂಶ

ಮೇಕಿಂಗ್ ಮತ್ತು ಸಂಗೀತದ ವಿಚಾರದಲ್ಲಿಯೂ ಶ್ರೀಮಂತವಾಗಿದೆ 'ಕಾಕ್‌ಟೇಲ್ 2' ಚಿತ್ರ. ಈ ಚಿತ್ರವು ಸೀಕ್ವೆಲ್ ಆಗಿ ಮಾತ್ರವಲ್ಲದೆ, ಸ್ವತಂತ್ರವಾಗಿ ಒಂದು ಅದ್ಭುತ ಮನರಂಜನಾತ್ಮಕ ಚಿತ್ರವಾಗಿ ಹೊರಹೊಮ್ಮಿದೆ. ಆಕ್ಷನ್ ಸಿನಿಮಾಗಳ ನಡುವೆ ಒಂದು ರಿಫ್ರೆಶಿಂಗ್ ಪ್ರೇಮಕಥೆ ನೋಡಬಯಸುವವರಿಗೆ 'ಕಾಕ್‌ಟೇಲ್ 2' ಪರ್ಫೆಕ್ಟ್ ಚಾಯ್ಸ್!'

ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ 'ಕಾಕ್‌ಟೇಲ್ 2' ನಶೆ! ಶಾಹಿದ್ ಕೆಮಿಸ್ಟ್ರಿ, ಕೃತಿ ನಟನೆಗೆ ಫ್ಯಾನ್ಸ್ ಫಿದಾ; ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಸಿಕ್ತಾ ಫುಲ್ ಮಾರ್ಕ್ಸ್?"

ಸರಿ ಸುಮಾರು 14 ವರ್ಷಗಳ ಹಿಂದೆ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅಭಿನಯದ 'ಕಾಕ್‌ಟೇಲ್' ಸಿನಿಮಾ ಯುವಜನತೆಯ ಮನ ಗೆದ್ದಿತ್ತು. ಆಧುನಿಕ ಪ್ರೇಮಕಥೆಗಳಿಗೆ ಹೊಸ ಭಾಷ್ಯ ಬರೆದಿದ್ದ ಆ ಚಿತ್ರದ ಸೀಕ್ವೆಲ್ ಯಾವಾಗ ಬರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.

ಈಗ ನಿರ್ದೇಶಕ ಹೋಮಿ ಅದಾಜಾನಿಯಾ 'ಕಾಕ್‌ಟೇಲ್ 2' ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ಕನ್ನಡತಿ, ತೆಲುಗುನಾಡಿನ ಸೊಸೆ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಜೂನ್ 19 ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ದಿನವೇ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ, ಬಾಲಿವುಡ್‌ನಲ್ಲಿ ಮತ್ತೊಂದು ಸೂಪರ್ ಹಿಟ್ ಸಿನಿಮಾ ಹುಟ್ಟಿಕೊಂಡಂತಿದೆ!

ಟ್ವಿಟರ್‌ನಲ್ಲಿ 'ಕಾಕ್‌ಟೇಲ್ 2' ಹವಾ!

ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ. "ಬಹಳ ದಿನಗಳ ನಂತರ ಬಾಲಿವುಡ್‌ನಲ್ಲಿ ಒಂದು ಕಲರ್‌ಫುಲ್ ಮತ್ತು ಎಂಟರ್‌ಟೈನಿಂಗ್ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಬಂದಿದೆ" ಎನ್ನುತ್ತಿದ್ದಾರೆ ನೆಟ್ಟಿಗರು. ಕೇವಲ ಪ್ರೇಮಕಥೆಯಷ್ಟೇ ಅಲ್ಲದೆ, ಇಂದಿನ ಜನರೇಷನ್‌ನ ಸಂಕೀರ್ಣ ಸಂಬಂಧಗಳು, ಗೆಳೆತನ ಮತ್ತು ಭಾವನೆಗಳನ್ನು ಚಿತ್ರದಲ್ಲಿ ಅತ್ಯಂತ ನೈಜವಾಗಿ ತೋರಿಸಲಾಗಿದೆ. ಕೆಲವರಂತೂ ಈ ಚಿತ್ರಕ್ಕೆ 5 ಕ್ಕೆ 4.5 ರೇಟಿಂಗ್ ನೀಡಿ, ಈ ವಾರಾಂತ್ಯಕ್ಕೆ ಇದೇ ಬೆಸ್ಟ್ ಸಿನಿಮಾ ಎಂದು ಘೋಷಿಸಿದ್ದಾರೆ.

ನಟನೆಯಲ್ಲಿ ಕೃತಿ 'ಕ್ವೀನ್'.. ಕೆಮಿಸ್ಟ್ರಿಯಲ್ಲಿ ರಶ್ಮಿಕಾ 'ಕಿಂಗ್'!

ಚಿತ್ರದ ಹೈಲೈಟ್ ಅಂದರೆ ಅದು ಕಲಾವಿದರ ಪರ್ಫಾರ್ಮೆನ್ಸ್. ಕೃತಿ ಸನೋನ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಎಮೋಷನಲ್ ದೃಶ್ಯಗಳಲ್ಲಿನ ಅವರ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. "ಕೃತಿ ಈ ಚಿತ್ರದ ನಿಜವಾದ ಆಕ್ಟಿಂಗ್ ಕ್ವೀನ್" ಎಂಬ ಕಾಮೆಂಟ್‌ಗಳು ಹರಿದುಬರುತ್ತಿವೆ. ಇನ್ನು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಪಾತ್ರ ಮತ್ತು ಶಾಹಿದ್ ಕಪೂರ್ ಜೊತೆಗಿನ ಅವರ ಕೆಮಿಸ್ಟ್ರಿ ಬೆಳ್ಳಿತೆರೆಯ ಮೇಲೆ ಕಿಚ್ಚು ಹಚ್ಚಿದೆ. ಶಾಹಿದ್ ಕಪೂರ್ ಸದಾ ವಿಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುವಲ್ಲಿ ನಿಸ್ಸೀಮರು, ಈ ಬಾರಿಯೂ ಅವರು ತಮ್ಮ ಚಾರ್ಮ್ ಮೂಲಕ ಹೆಣ್ಣುಮಕ್ಕಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಬೋಲ್ಡ್ ಕಥೆಗೆ 'A' ಸರ್ಟಿಫಿಕೇಟ್!

ಒಂದು ವಿಶೇಷ ಸಂಗತಿ ಎಂದರೆ, 'ಕಾಕ್‌ಟೇಲ್ 2' ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯಾವುದೇ ಕಟ್ಸ್ ನೀಡದೆ 'A' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಿದೆ. ಲವ್ ರಂಜನ್ ಅವರ ಬರಹದಲ್ಲಿ ಮೂಡಿಬಂದಿರುವ ಈ ಚಿತ್ರವು ಸಾಕಷ್ಟು ಬೋಲ್ಡ್ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಹೊಂದಿದೆ ಎನ್ನಲಾಗಿದೆ. ಇದು ಕೃತಿ ಸನೋನ್ ಕೆರಿಯರ್‌ನಲ್ಲಿ 'A' ಪ್ರಮಾಣಪತ್ರ ಪಡೆದ ಮೊದಲ ಚಿತ್ರವಾಗಿದ್ದರೆ, ರಶ್ಮಿಕಾ ಅವರಿಗೆ 'ಅನಿಮಲ್' ನಂತರ ಇದು ಎರಡನೇ ಚಿತ್ರವಾಗಿದೆ.

ನಿರ್ದೇಶನದ ಮೋಡಿ

'ಹೋಮಿ ಅದಾಜಾನಿಯಾ ಅವರ ನಿರ್ದೇಶನವು ಚಿತ್ರಕ್ಕೆ ದೊಡ್ಡ ಬಲ ನೀಡಿದೆ. ಮ್ಯಾಡಾಕ್ ಫಿಲ್ಮ್ಸ್ ಮತ್ತು ಲವ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಮೇಕಿಂಗ್ ಮತ್ತು ಸಂಗೀತದ ವಿಚಾರದಲ್ಲಿಯೂ ಶ್ರೀಮಂತವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, 'ಕಾಕ್‌ಟೇಲ್ 2' ಕೇವಲ ಸೀಕ್ವೆಲ್ ಆಗಿ ಮಾತ್ರವಲ್ಲದೆ, ಸ್ವತಂತ್ರವಾಗಿ ಒಂದು ಅದ್ಭುತ ಮನರಂಜನಾತ್ಮಕ ಚಿತ್ರವಾಗಿ ಹೊರಹೊಮ್ಮಿದೆ. ಆಕ್ಷನ್ ಸಿನಿಮಾಗಳ ನಡುವೆ ಒಂದು ರಿಫ್ರೆಶಿಂಗ್ ಪ್ರೇಮಕಥೆ ನೋಡಬಯಸುವವರಿಗೆ 'ಕಾಕ್‌ಟೇಲ್ 2' ಪರ್ಫೆಕ್ಟ್ ಚಾಯ್ಸ್!'.. ಎಂಬುದು ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ನೀಡುತ್ತಿರುವ ವಿಮರ್ಶೆಯಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Upendra: ಒಂದೇ ವರ್ಷದಲ್ಲಿ ಎರಡನೇ ತಮಿಳು ಸಿನಿಮಾ: ‘ಕೂಲಿ’ ಬಳಿಕ ಉಪೇಂದ್ರಗೆ ಮತ್ತೊಂದು ಬಿಗ್ ಆಫರ್!
Rachita Ram: ಮದುವೆ, ಪ್ರೀತಿ, ಡೈವೋರ್ಸ್ ಬಗ್ಗೆ ರಚಿತಾ ನೇರ ಮಾತು: 14 ವರ್ಷದ ಸಿನಿ ಪಯಣದ ಅನುಭವ ಹಂಚಿಕೆ