
ಪಾಟ್ನಾ (ಸೆ.20) ನಟಿ ಕಾಜಲ್ ರಾಘವಾನಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಗುಂಪಿನ ನಡುವೆ ಕೆಲ ಉದ್ರಿಕ್ತರು ದಾಳಿ ಮಾಡಿದ್ದಾರೆ. ನಟಿ ಕಾಜಲ್ ರಾಘವಾನಿ ಕಾರಿನ ಮೇಲೆ ದಾಳಿ ಮಾಡಲಾಗಿದೆ. ನಟಿಯ ಫಾರ್ಚುನರ್ ಕಾರಿನ ಗಾಜುಗಳು ಪುಡಿ ಪುಡಿಯಾಗಿದೆ. ಅದೃಷ್ಠವಶಾತ್ ನಟಿ ಕಾಜಲ್ ರಾಘವಾನಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ವಿಡಿಯೋ ಮಾಡಿರುವ ಕಾಜಲ್ ರಾಘವಾನಿ ಸುರಕ್ಷಿತವಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಭೋಜಪುರಿ ನಟಿ ಕಾಜಲ್ ರಾಘವಾನಿಯನ್ನು ಬಿಹಾರಗ ಜ್ಯೂವೆಲ್ಲರಿ ಶೋರೂಂ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆಹ್ವಾನ ಮೇರೆಗೆ ನಟಿ ಕಾಜಲ್ ರಾಘವಾನಿ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದಾರೆ. ಇತ್ತ ನಟಿ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ನಟಿ ನೋಡಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದಜ್ದಾರೆ. ಇದರ ನಡುವೆ ನಟಿ ನೇರವಾಗಿ ಜುವ್ಯೆಲ್ಲರಿ ಶೋ ರೂಂ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ನಟಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಹಾಗೂ ಇತರ ಕೆಲವರು ಆಕ್ರೋಶಗೊಂಡಿದ್ದಾರೆ. ತಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿಲ್ಲ, ಕೈಕುಲುಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇತ್ತ ನಟಿಯ ನೋಡಲು ಜನಸಾಗರವೇ ಹರಿದು ಬಂದಿದೆ. ಕಾರ್ಯಕ್ರಮ ಕೆಲ ಹೊತ್ತು ನಡೆದಿತ್ತು. ಈ ವೇಳೆ ಜ್ಯೂವೆಲ್ಲರಿ ಶೋ ರೂಂ ಹೊರಭಾಗದಲ್ಲಿ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಜನರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಕ್ರೋಶ, ಅಸಮಾಧಾನಗಳು ಹೆಚ್ಚಾಗಿದೆ.
ಕಾರ್ಯಕ್ರಮ ಮುಗಿಸಿ ಶೋರೂಂನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಕಾರ್ಯಕ್ರಮ ಆಯೋಜಕರು ನಟಿ ಕಾಜಲ್ ರಾಘವಾನಿಯನ್ನು ತಡೆದು ಬೇರೆ ಗೇಟ್‌ಮೂಲಕ ಕಾರಿನತ್ತ ತೆರಳಲು ಸೂಚಿಸಿದ್ದಾರೆ. ಸಿಬ್ಬಂದಿಗಳು ನಟಿಯನ್ನು ಮತ್ತೊಂದು ಗೇಟ್ ಮೂಲಕ ಕರೆದೊಯ್ದಿದ್ದಾರೆ. ಇತ್ತ ಜನಸಾಗರದ ನಡುವೆ ನಟಿ ಕಾರಿನತ್ತ ಬಂದಿದ್ದಾರೆ ಎಂದು ಕಾರಿನ ಗಾಜುಗಳನ್ನು ಉದ್ರಿಕ್ತರ ಗುಂಪು ಒಡೆದು ಹಾಕಿದೆ. ಆದರೆ ನಟಿ ಕಾರಿನಲ್ಲಿ ಇರಲಿಲ್ಲ. ಕಾರಿನ ಗಾಜು ಒಡೆದು ಗುಂಪು ನಟಿಗಾಗಿ ಹುಡುಕಾಡಿದ್ದಾರೆ.
ತಕ್ಷಣವೇ ಗುಂಪನ್ನು ಸಿಬ್ಬಂದಿಗಳು ಮತ್ತೊಂದೆಡೆ ಚದುರಿಸುವ ಪ್ರಯತ್ನ ಮಾಡಿದ್ದಾರೆ. ಬಳಿಕ ನಟಿಯನ್ನು ಬೇರೆ ಗೇಟಿನ ಮೂಲಕ ಕಾರಿನತ್ತ ತಂದಿದ್ದಾರೆ. ಇದೇ ವೇಳೆ ಕಾರಿನ ಚಾಲಕ ಕಾರು ಸ್ಟಾರ್ಟ್ ಮಾಡಿ ನಟಿ ಕಾಜಲ್ ರಾಘವಾನಿಯನ್ನು ಕೂರಿಸಿಕೊಂಡು ವೇಗವಾಗಿ ತೆರಳಿದ್ದಾರೆ. ಇತ್ತ ಉದ್ರಿಕ್ತರ ಗುಂಪು ಕಾರನ್ನು ಹಿಂಬಾಲಿಸಿಕೊಂಡು ಓಡಿದ್ದಾರೆ. ಅಷ್ಟರೊಳಗೆ ಕಾರು ವೇಗವಾಗಿ ಸ್ಥಳದಿಂದ ಸಾಗಿದೆ.
ಘಟನೆ ಬಳಿಕ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಘಟನೆಯಿಂದ ತನಗೆ ಯಾವುದೇ ಅಪಾಯ ಎದುರಾಗಿಲ್ಲ. ಕಾರಿನ ಮೇಲೆ ದಾಳಿಯಾಗಿದೆ.ಆದರೆ ನಾನು ಸುರಕ್ಷಿತವಾಗಿದ್ದೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.