ನಟ ಪ್ರಥಮ್ ಮೇಲೆ ಅಟ್ಯಾಕ್..? ದೊಡ್ಡಬಳ್ಳಾಪುರದಲ್ಲಿ ನಿಜವಾಗಿ ನಡೆದಿದ್ದೇನು?

Published : Jul 26, 2025, 12:17 PM ISTUpdated : Jul 26, 2025, 12:35 PM IST
Pratham Darshan

ಸಾರಾಂಶ

ಪ್ರಥಮ್ ಅವರಿಗೆ ಹೆದರಿಸಿದಂತೆ ಬಿಗ್ ಬಾಸ್ ಫೇಮ್ ಲಾಯರ್ ಜಗದೀಶ್ ಅವರಿಗೂ ಹೆದರಿಸಲಾಗಿದೆ ಎಂಬ ಸುದ್ದಿ ವೈರಲ್ ಆಗ್ತಿದೆ. ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

ಬಿಗ್ ಬಾಸ್ ವಿನ್ನರ್, ಕನ್ನಡ ನಟ 'ಒಳ್ಳೇ ಹುಡುಗ' ಖ್ಯಾತಿಯ ಪ್ರಥಮ್ (Olle Huduga Pratham) ಮೇಲೆ ಅಟ್ಯಾಕ್ ಆಗಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಸುದ್ದಿ ವೈರಲ್ ಅಗುತ್ತಿದ್ದು, ಇನ್ನಷ್ಟು ಮಾಹಿತಿ ಬರಬಬೇಕಿದೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ನಟ ಪ್ರಥಮ್ ಮೇಲೆ ದೊಡ್ಡಬಳ್ಲಾಪುರದಲ್ಲಿ ದಾಳಿ ಆಗಿದೆ ಎನ್ನಲಾಗುತ್ತಿದೆ. ಅಲ್ಲಿನ ದೇವಸ್ಥಾನವೊಂದಕ್ಕೆ ನಟ ಪ್ರಥಮ್ ಭೇಟಿ ನೀಡಿದ್ದು, ಅಲ್ಲಿ ನಟ ಪ್ರಥಮ್ ಅವರಿಗೆ ಡ್ರಾಗರ್ ತೋರಿಸಿ ಹೆದರಿಸಿದ್ದಾರೆ ಎನ್ನಲಾಗಿದೆ. ಪ್ರಥಮ್ ಹಾಗೆ ಲಾಯರ್ ಜಗದೀಶ್ ಮಾತನಾಡಿರೋ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಥಮ್ ಹಾಗೆ ಲಾಯರ್ ಜಗದೀಶ್ ಮಾತನಾಡಿರೋ ಆಡಿಯೋ ವೈರಲ್:

ಪ್ರಥಮ್ ಅವರಿಗೆ ಹೆದರಿಸಿದಂತೆ ಬಿಗ್ ಬಾಸ್ ಫೇಮ್ ಲಾಯರ್ ಜಗದೀಶ್ ಅವರಿಗೂ ಹೆದರಿಸಲಾಗಿದೆ ಎಂಬ ಸುದ್ದಿ ವೈರಲ್ ಆಗ್ತಿದೆ. ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ಸಿಕ್ಕ ಮಾಹಿತಿ ಪ್ರಕಾರ, ದೊಡ್ಡಬಳ್ಳಾಪುರದ ಬಳಿ ದೇವಸ್ಥಾನದ ಕಾರ್ಯಕ್ರಮವೊಂದಕ್ಕೆ ನಟ ಪ್ರಥಮ್ ತೆರಳಿದ್ದರಂತೆ. ಅವರ

ಜೊತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಇನ್ನೊಬ್ಬ ನಟ, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಇದ್ರೂ ಪ್ರಥಮ್ ಸಹಾಯಕ್ಕೆ ಬರ್ಲಿಲ್ವಂತೆ. ಇದಕ್ಕೆ ಕಾರಣ, ಇತ್ತೀಚೆಗೆ ನಟ ಪ್ರಥಮ್ 'ನಟ ದರ್ಶನ್' ಬಗ್ಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಅಟ್ಯಾಕ್ ಆಗಿದೆ ಎನ್ನಲಾಗುತ್ತಿದೆ. 'ನನ್ನ ಮಾತಿನಿಂದ ಬೇಸರಗೊಂಡಿದ್ದ ನಟ ದರ್ಶನ್ (Darshan Thoogudeepa) ಅಭಿಮಾನಿಗಳು ನನ್ನನ್ನು ಸುತ್ತುವರಿದಿದ್ದರು. ನನಗೆ ಡ್ರಾಗನ್ ತೋರಿಸಿ ಹೆದರಿಸಲಾಗಿದೆ' ಎಂದಿದ್ದಾರೆ ಪ್ರಥಮ್.

ಜೊತೆಗೆ, 'ನಾನು ಸಿನಿಮಾಗೆಂದು ಸಾಲ ಕೂಡ ಮಾಡಿಕೊಂಡಿದ್ದೇನೆ' ಎಂದಿದ್ದಾರೆ ನಟ ಪ್ರಥಮ್. ಒಂದು ಕಡೆ 'ನಾನು ಇತ್ತೀಚೆಗೆ ಆಡಿದ್ದ ಮಾತಿನಿಂದ ನಟ ದರ್ಶನ್ ಅಭಿಮಾನಿಗಳು ಬೇಸರಗೊಂಡಿದ್ದರು' ಎಂದಿರುವ ಪ್ರಥಮ್, ಮತ್ತೊಂದು ಕಡೆ 'ನಾನು ಸಿನಿಮಾಗೆಂದು ಸಾಲ ಮಾಡಿಕೊಂಡಿದ್ದೇನೆ' ಎಂದೂ ಕೂಡ ಹೇಳಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಹಾಗಿದ್ದರೆ 'ನಿಜವಾಗಿಯೂ ನಟ ಪ್ರಥಮ್ ಮೇಲೆ ಅಟ್ಯಾಕ್ಅಗಿದ್ದು ಏಕೆ?' ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಸದ್ಯದಲ್ಲಿಯೇ ಸೂಕ್ತ ಉತ್ತರ ದೊರಕಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?