ಶಾರೂಕ್ ಪುತ್ರ ಆರ್ಯ ಸಿನಿಮಾ ರಂಗಕ್ಕೆ | ದಿ ಲಯನ್ ಕಿಂಗ್ ನಲ್ಲಿ ಸಿಂಬಾಗೆ ಧ್ವನಿ ನೀಡಿದ ಆರ್ಯನ್ |
ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಪುತ್ರ ಆರ್ಯನ್ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ.
'ದಿ ಲಯನ್ ಕಿಂಗ್' ಸಿನಿಮಾದ ಸಿಂಬಾ ಪಾತ್ರಕ್ಕೆ ಆರ್ಯನ್ ವಾಯ್ಸ್ ನೀಡಿದ್ದಾರೆ. ಆರ್ಯ ವಾಯ್ಸ್ ಕೇಳಿದ್ರೆ ಥೇಟ್ ಶಾರೂಕ್ ವಾಯ್ಸ್ ಕೇಳಿದಂತೆ ಅನಿಸುತ್ತದೆ. ದಿ ಲಯನ್ ಕಿಂಗ್ ಟೀಸರ್ ರಿಲೀಸ್ ಆಗಿದ್ದು ಇದರಲ್ಲಿ ಮೊದಲ ಡೈಲಾಗ್ ಮೇ ಹೂಂ ಸಿಂಬಾ, ಮುಫಸಾ ಕ ಬೇಟಾ’ ಎಂದು ಬರುತ್ತದೆ. ಇದಕ್ಕೆ ಆರ್ಯನ್ ವಾಯ್ಸ್ ಕೊಟ್ಟಿದ್ದು ಥೇಟ್ ಶಾರೂಕ್ ವಾಯ್ಸ್ ಕೇಳಿದಂತಾಗುತ್ತದೆಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಟೀಸರನ್ನು ಶಾರೂಕ್ ಶೇರ್ ಮಾಡಿಕೊಂಡಿದ್ದು, ಮೇರಾ ಸಿಂಬಾ... ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
Mera Simba.. pic.twitter.com/kC66BMBOVE
— Shah Rukh Khan (@iamsrk)ಕರಣ್ ಜೋಹರ್ ಕೂಡಾ ಆರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
Pardon my excitement! But Aryan is the first born in our family!!! And even just hearing his voice has made me so so excited !!!!! And without a bias he sounds amazing!!!!!👍👍👍👍👍 https://t.co/9WEqM5LmVD
— Karan Johar (@karanjohar)ದಿ ಲಯನ್ ಕಿಂಗ್ ಇದೇ ಜುಲೈ 19 ರಂದು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.