
ಮುಂಬೈ (ಅ.19) ಪತಿ ನಿಧನದಿಂದ ತೀವ್ರ ನೋವಿನಲ್ಲಿದ್ದ ಹಿರಿಯ ನಟಿ ಅರುಣಾ ಇರಾನಿ ಎರಡು ತಿಂಗಳ ಬಳಿಕ ಶೂಟಿಂಗ್‌ಗ ಮರಳಿದ್ದಾರೆ. ಬಾಲಿವುಡ್ ನಿರ್ದೇಶಕ ಹಾಗೂ ಬರಹಗಾರ ಕುಕು ಕೊಹ್ಲಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಪತಿ ನಿಧನದಿಂದ ತೀವ್ರ ಆಘಾತಕ್ಕೊಳಗಾಗಿದ್ದ ಪತ್ನಿ ಹಾಗೂ ನಟಿ ಅರುಣಾ ಇರಾನಿ ಇದೀಗ ಎರಡು ತಿಂಗಳ ಬಳಿಕ ಶೂಟಿಂಗ್‌ಗೆ ಮರಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಅರುಣಾ ಇರಾನಿ ಭಾವುಕರಾಗಿದ್ದಾರೆ. ಪತಿಯನ್ನು ನೆನೆದು ಹಾಗೂ ಸಂಕಷ್ಟದ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತ ಅಭಿಮಾನಗಳ ನಡೆಗೆ ಅರುಣಾ ಇರಾನಿ ಭಾವುಕರಾಗಿದ್ದಾರೆ.
ಆಗಸ್ಟ್ 25ರಂದು ಕುಕು ಕೊಹ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. 77ರ ಹರೆಯದ ಕುಕು ಕೊಹ್ಲಿ ನಿಧನಕ್ಕೆ ಬಾಲಿವುಡ್ ದಿಗ್ಗಜರು, ಸೆಲೆಬ್ರೆಟಿಗಳು ಸೇರಿದಂತೆ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದರು. ಕಳೆದೆರಡು ತಿಂಗಳಿನಿಂದ ಶೂಟಿಂಗ್‌ಗಳಿಂದ ದೂರ ಉಳಿದಿದ್ದ ಕುಕು ಕೊಹ್ಲಿ ಪತ್ನಿ ಅರುಣಾ ಇರಾನಿ ಇದೀಗ ನಿಧಾನವಾಗಿ ಚೇತರಿಸಿಕೊಂಡಿದ್ದಾರೆ. 2 ತಿಂಗಳ ಬಳಿಕ ಶೂಟಿಂಗ್ ಸೆಟ್‌ಗೆ ಮರಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ವಿಡಿಯೋ ಮೂಲಕ ಮಾತನಾಡಿದ್ದಾರೆ. ಈ ವೇಳೆ ಭಾವುಕರಾಗಿದ್ದಾರೆ.
ಕುಕು ನಿಧನರಾದಾಗ ನೀವು ತೋರಿದ ಪ್ರೀತಿ, ನೆರವು, ಧೈರ್ಯಕ್ಕೆ ನಾನು ಆಭಾರಿಯಾಗಿದ್ದೇನೆ. ಜೀವನ ಪಯಣ ಆರಂಭಿಸಿ ಜೊತೆಯಾಗಿದ್ದ ಪತಿ ನಿಧನ ನನ್ನನ್ನು ತೀವ್ರ ಆಘಾತಕ್ಕೆ ತಳ್ಳಿತ್ತು. ನೋವಿನಿಂದ ನರಳಿದ್ದೆ. ಸಂಕಷ್ಟದ ಸಮಯದಲ್ಲಿ ನೀವೆಲ್ಲರು ನನ್ನ ಜೊತೆ ನಿಂತು ಧೈರ್ಯ ಹೇಳಿದ್ದೀರಿ.ನನ್ನ ಬೆಂಬಲಕ್ಕೆ ನಿಂತಿದ್ದೀರಿ. ಕಳೆದೆರಡು ತಿಂಗಳಲ್ಲಿ ಅತೀವ ಕಷ್ಟದ ದಿನಗಳನ್ನು ಎದುರಿಸಿದ್ದೇನೆ. ಇದೀಗ ನಿಮ್ಮ ಮುಂದೆ ಬಂದು ನಿಲ್ಲಲು ನೀವು ನೀಡಿದ ಧೈರ್ಯ, ಪ್ರೀತಿ, ಕಾಳಜಿ ಪ್ರಮುಖ ಕಾರಣ. ನಿಮ್ಮಿಂದ ನಾನು ಮತ್ತೆ ಕೆಲಸ ಮುಂದುವರಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲೂ ನನಗೆ ಪ್ರೀತಿ, ಸಹಕಾರ, ಬೆಂಬಲ ನೀಡುತ್ತೀರಿ ಎಂಬ ವಿಶ್ವಾಸವಿದೆ ಎಂದು ಅರುಣಾ ಇರಾನಿ ಹೇಳಿದ್ದಾರೆ. ಈ ವೇಳೆ ಅರುಣಾ ಇರಾನಿ ಭಾವುಕರಾಗಿದ್ದಾರೆ.
ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಅರುಣಾ ಇರಾನಿ ಬಳಿಕ ಬಾಲಿವುಡ್‌ನ ಕ್ಯಾರವಾನ್, ಬಾಬಿ, ಬೇಟಾ , ದಿಲ್ ತೋ ಪಾಗಲ್ ಹೇ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಪಾರ ಅಭಿಮಾನಿ ಬಳಗ ಸೃಷ್ಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.