
ಮುಂಬೈ(ಮೇ.28): ಬಾಲಿವುಡ್ ಪ್ರಸಿದ್ದ ನಟ ಅರ್ಜುನ್ ರಾಂಪಾಲ್ ತಮ್ಮ ಪತ್ನಿ ಮೆಹರ್ ಜೆಸಿಯಾ ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ಮೂಲಕ ಅರ್ಜುನ್ ಮತ್ತು ಜೆಸಿಯಾ ಅವರ 20 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಅರ್ಜುನ್ ಮತ್ತು ಜೆಸಿಯಾ, ಪರಸ್ಪರ ಒಮ್ಮತದ ನಿರ್ಧಾರದ ಮೇರೆಗೆ ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
45 ವಷರ್ಷದ ಅರ್ಜುನ್ ರಾಂಪಾಲ್ ಮತ್ತು 47 ವರ್ಷದ ಜೆಸಿಯಾ 20 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದು, ದಂಪತಿಗೆ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ವಿಚ್ಛೇದನಕ್ಕೆ ನಿಖರ ಕಾರಣ ತಿಳಿಸದ ಜೋಡಿ, ತಮ್ಮ 20 ವರ್ಷಗಳ ದಾಂಪತ್ಯ ಜೀವನ ಸುಂದರ ನೆನೆಪುಗಳ ಬುತ್ತಿ ಎಂದು ಬಣ್ಣಿಸಿದೆ.
ನಾವಿಬ್ಬರೂ ಹಲವಾರು ಸುಮಧುರ ಕ್ಷಣಗಳನ್ನು ಕಳೆದಿದ್ದು, ಪರಸ್ಪರರ ಮೇಲಿನ ಪ್ರೀತಿ ಎಂದು ಕಡಿಮೆತಾಗುವುದಿಲ್ಲ ಎಂದು ಅರ್ಜುನ್ ಭಾವನಾತ್ಮಕವಾಗಿ ಹೇಳಿದ್ದಾರೆ. ನಾವಿಬ್ಬರು ಬೇರೆಯಾಗಿದ್ದರೂ ಮಕ್ಕಳ ಭವಿಷ್ಯಕ್ಕಾಗಿ ಜೊತೆಯಾಗಿ ನಿಲ್ಲುತ್ತೇವೆ ಎಂದು ಜೆಸಿಯಾ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.