
ಬೆಂಗಳೂರು(ಮೇ.27): ಝೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ 14ನೇ ಆವೃತ್ತಿಯ ಚಾಂಪಿಯನ್ ಆಗಿ ವಿಶ್ವಪ್ರಸಾದ್ ಹೊರಹೊಮ್ಮಿದ್ದಾರೆ.
ಮೇ.26ರಂದು ನಾಗವಾರದ ಆರ್ಕೇಡ್ ಕಾನ್ವೆಷನ್ ಸೆಂಟರ್'ನಲ್ಲಿ ನಡೆದ ಗ್ರಾಂಡರ ಫಿನಾಲೆಯಲ್ಲಿ ವಿಶ್ವಪ್ರಸಾದ್ ಕಿರೀಟ ಧರಿಸಿದರು. ವಿಶ್ವಪ್ರಸಾದ್'ಗೆ ತಾನ್ಸೇನ್ ಜ್ಞಾನೇಶ್, ಕೀರ್ತನಾ ಅಭಿಜತ್ ಭಟ್ ಹಾಗೂ ತೇಜಸ್ ಶಾಸ್ತ್ರಿ ಸ್ಪರ್ಧೆಯ ಅಂತಿಮದವರೆಗೂ ಪೈಪೋಟಿ ನೀಡಿದ್ದರು.
ವಿಶ್ವಪ್ರಸಾದ್'ಗೆ ಟ್ರೋಫಿಯ ಜೊತೆ 5 ಲಕ್ಷ ರೂ ಬಹುಮಾನ ನೀಡಲಾಯಿತು. ರನ್ನರ್ ಅಪ್ ಪ್ರಸಸ್ತಿ ಪಡೆದ ಕೀರ್ತನಾ ಹಾಗೂ ಗಣೇಶ್ ಅವರಿಗೆ ತಲಾ 2 ಲಕ್ಷ ರೂ.ಪಡೆದುಕೊಂಡರು. ವಿಜೇತರನ್ನು ತೀರ್ಪುಗಾರರಾದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ಹಂಸಲೇಖ ಅವರು ಸಾರ್ವಜನಿಕ ಮತದಾನದ ಮೂಲಕ ಅಂತಿಮ ಸುತ್ತಿನಲ್ಲಿ ಆಯ್ಕೆ ಮಾಡಿದರು.
ಮೂರು ಹಾಗೂ ನಾಲ್ಕನೇ ಸ್ಥಾನಕ್ಕೆ ಕ್ರಮವಾಗಿ ತೇಜಸ್ ಹಾಗೂ ಅಭಿಜಿತ್ ತೃಪ್ತಿಪಟ್ಟುಕೊಂಡರು. ಕಳೆದ ವರ್ಷ ಡಿಸೆಂಬರ್ 9 ರಂದು 30 ಸ್ಪರ್ಧಿಗಳೊಂದಿಗೆ ಡಿಸೆಂಬರ್ 9 ರಂದು ಸ್ಪರ್ಧೆ ಆರಂಭವಾಗಿತ್ತು. ತೀರ್ಪುಗಾರರು 15 ಸ್ಪರ್ಧಿಗಳನ್ನು ಉತ್ತಮ ಹಾಡುಗಾರರೆಂದು ಮನ್ನಣೆ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.