
ವಾರದಲ್ಲಿ ಐದು ದಿನ ಟಿವಿ ಮುಂದೆ ಕೂತು ಮಜಾ ಮಾಡುವ ಕಾರ್ಯಕ್ರಮ 'ಮಜಭಾರತ'ಕ್ಕೆ ಬಿಗ್‌ಬಾಸ್ ಖ್ಯಾತಿಯ ಮೂಗುತಿ ಸುಂದರಿ ಅನುಪಮಾ ಗೌಡ ನಿರೂಪಣೆಗೆ ಆಯ್ಕೆ ಆಗಿದ್ದಾರೆ.
ಈ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಕನ್ನಡ ಕೋಗಿಲೆ' ರಿಯಾಲಿಟಿ ಶೋ ಮೂಲಕ ನಿರೂಪಣೆ ಆರಂಭಿಸಿದ ಕಿರುತರೆ ನಟಿ ಅನುಪಮಾ ಈಗ ಮತ್ತೊಂದು ಶೋಗೆ ನಿರೂಪಣೆ ಮಾಡಲು ಮುಂದಾಗಿದ್ದಾರೆ.
ತನ್ನ ತುಂಟ ಮಾತು ಅಲ್ಲೊಂದು, ಇಲ್ಲೊಂದು ಚಂದನ್ ಶೆಟ್ಟಿ ಜೊತೆಗಿನ ಕಾಮಿಡಿ ಕಾರ್ಯಕ್ರಮಕ್ಕೆ ಹೊಸದೊಂದು ಕಳೆ ಕೊಟ್ಟಿತ್ತು.
ಮಜಾಭಾರತ ಸೀಸನ್ 3 ತೀರ್ಪುಗಾರರಾದ ರಚಿತಾ ರಾಮ್ ಹಾಗು ಗುರುಕಿರಣ್ ಈ ಸೀಸನ್‌ನಲ್ಲೂ ತೀರ್ಪು ನೀಡಲಿದ್ದಾರೆ. ಆದರೆ ನಿರೂಪಕನಾಗಿ ನಿರಂಜನ್ ದೇಶಪಾಂಡೆ ಹೊರ ನಡೆದಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತುತ್ತ-ಮುತ್ತಾ ಶೋ ಅನ್ನು ನಿರೂಪಿಸಲಿದ್ದಾರೆ ದೇಶಪಾಂಡೆ.
ಇನ್ನು ಮೊದಲನೇ ಸೀಸನ್ ನಿರೂಪಕರಾಗಿ ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ ಕಾರ್ಯ ನಿರ್ವಹಿಸಿದ್ರು. ಇದಕ್ಕೆ ನಟಿ ಶ್ರುತಿ ಹಾಗು ಎನ್ ನಾರಾಯಣ್ ಪೀರ್ಪುಗಾರರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.