'ಜಮೀನ್ದಾರು' ಸಿನಿಮಾ ನಟಿ ಬಗ್ಗೆ ಮತ್ತೋರ್ವ ನಟಿಯೇ ಹೀಗೆ ಹೇಳಬಹುದಾ?; ವಿವಾದ ಹುಟ್ಟಿಸಿದ ರಾಶಿಫಲ!

Published : Jan 06, 2026, 04:29 PM IST
anasuya bharadwaj comments on actress raasi

ಸಾರಾಂಶ

Actress Raasi News: ಚಿತ್ರರಂಗದಲ್ಲೀಗ ಇಬ್ಬರು ನಟಿಯರು ಜಗಳ ಆಡಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ನಟಿ ಬಗ್ಗೆ ಮಾಡಿದ ಕಾಮೆಂಟ್‌ನಿಂದ ಜಡೆ ಜಗಳ ಆಗಿದೆ. ಹಾಗಾದರೆ ಏನಾಯ್ತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಜನಪ್ರಿಯ ನಿರೂಪಕಿ, ನಟಿ ಅನಸೂಯಾ ಭಾರದ್ವಾಜ್ ಅವರು ( Anasuya Bharadwaj ) ಇತ್ತೀಚೆಗೆ ಶೋವೊಂದರಲ್ಲಿ ಮಾತನಾಡುವಾಗ ಹಿರಿಯ ನಟಿಯ ಹೆಸರು ತಗೊಂಡು ಜೋಕ್‌ ಮಾಡಿದ್ದರು. ಅದೀಗ ಚರ್ಚೆಯಾಗಿತ್ತು. ಆಮೇಲೆ ಕ್ಷಮೆ ಕೂಡ ಕೇಳಿದ್ದಾರೆ. ಆರಂಭದಲ್ಲಿ ರಾಶಿ ( Raasi ) ಬಗ್ಗೆ ಅನುಸೂಯ ಕಾಮೆಂಟ್‌ ಮಾಡಿದ್ದು, ಆಮೇಲೆ ಮತ್ತೊಂದಿಷ್ಟು ವಾದಗಳು ಆಗಿವೆ, ಆ ಬಳಿಕ ಕ್ಷಮೆ ಕೇಳಿದ್ದಾರೆ.

ಏನು ಜೋಕ್?

90ರ ದಶಕದ ಖ್ಯಾತ ನಟಿ ರಾಶಿ ಅವರಿಗೆ ಮಂತ್ರ ಎಂದು ಕೂಡ ಹೆಸರಿದೆ. ಇವರಿಗೆ ಸಂಬಂಧಿಸಿದಂತೆ ಜೋಕ್‌ ಮಾಡಲಾಗಿತ್ತು. ಅನುಸೂಯಾ ಅವರು 'ಆಕ್ಷೇಪಾರ್ಹ' ಜೋಕ್ ಮಾಡಿದ್ದರು. ಹೀಗಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.‌

ಏನು ನಡೆಯಿತು?

ಶೋವೊಂದರಲ್ಲಿ ರಾಶಿಫಲ ಎಂದು ಇನ್ನೋರ್ವ ನಟ ಹೇಳಿದ್ದಾಗ, ಅನುಸೂಯ ಅವರು ರಾಶಿ ಬಗ್ಗೆ ಮಾತನಾಡುತ್ತಿದ್ದೀರಾ ಎಂದಿದ್ದಾರೆ. ಈ ಬಗ್ಗೆ ರಾಶಿ ಅವರು ಸಂದರ್ಶನದಲ್ಲಿ “ನನಗೆ ಅದು ಜೋಕ್‌ ಅಂತ ಅನಿಸಿಲ್ಲ. ಅಲ್ಲಿದ್ದವರು ಕೂಡ ನಕ್ಕಿದ್ದಾರೆ, ನಾನು ಆ ಜಾಗದಲ್ಲಿ ಇದ್ದಿದ್ರೆ ತಡೆಯುತ್ತಿದ್ದೆ” ಎಂದು ಹೇಳಿದ್ದಾರೆ.

ಜನರಿಂದ ಆಕ್ರೋಶ

ಈ ಜೋಕ್ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ, ಟೀಕೆಗೆ ಕಾರಣವಾಗಿತ್ತು. ವೀಕ್ಷಕರು ಅನಸೂಯಾ ಅವರ ಈ ವರ್ತನೆಯನ್ನು ಖಂಡಿಸಿದ್ದರು, ಇದು ಹಿರಿಯ ನಟಿಗೆ ಮಾಡಿದ ಅವಮಾನ ಎಂದು ಹೇಳಿದ್ದರು.

ಕ್ಷಮೆ ಕೇಳಿದ ಅನುಸೂಯ

ಈ ವಿವಾದದ ಬಳಿಕ ಅನಸೂಯ ಅವರು "ನಾನು ಆ ಟೈಮ್‌ನಲ್ಲಿ ಉದ್ದೇಶಪೂರ್ವಕವಾಗಿ ಯಾರಿಗೂ ನೋವು ಮಾಡಬೇಕು ಎಂದು ಆ ರೀತಿ ಹೇಳಲಿಲ್ಲ. ನನ್ನ ಮಾತಿನಿಂದ ನಟಿ ರಾಶಿಗೆ ಅಥವಾ ರಾಶಿ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಈಗಾಗಲೇ ಆಗಿರುವ ತಪ್ಪನ್ನು ಸರಿಪಡಿಸಲು (rectify) ಸಾಧ್ಯವಿಲ್ಲ, ಆದರೆ ಪ್ರಾಮಾಣಿಕವಾಗಿ ಕ್ಷಮೆ ಕೇಳುವೆ" ಎಂದು ಅವರು ಹೇಳಿದ್ದಾರೆ.

ರಾಶಿ ಅವರು ‘ಪ್ರೀತಿ ಮಾಡು ತಪ್ಪೇನಿಲ್ಲ’, ‘ರಾಜಾ ನರಸಿಂಹ’, ‘ಜಮೀನ್ದಾರು’, ‘ನಿನ್ನೇ ಪ್ರೀತಿಸುವೆ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಅನುಸೂಯ ಭಾರದ್ವಾಜ್‌ ಅವರು ಅಲ್ಲು ಅರ್ಜುನ್‌ ಅವರ ‘ಪುಷ್ಪ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ ಬಿಕಿನಿ ಬಟ್ಟೆ ಧರಿಸಿದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna serial : ಕರ್ಣನಿಗೆ ಮುತ್ತಿಟ್ಟ ನಿಧಿ , ಪ್ರೋಮೋ ನೋಡಿ ಕಳೆದುಹೋದ ಫ್ಯಾನ್ಸ್
Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?