ಹೊಸವರ್ಷಕ್ಕೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಆ್ಯಮಿ ಜಾಕ್ಸನ್

Published : Jan 03, 2019, 03:40 PM IST
ಹೊಸವರ್ಷಕ್ಕೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಆ್ಯಮಿ ಜಾಕ್ಸನ್

ಸಾರಾಂಶ

ಹೊಸ ವರ್ಷಕ್ಕೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಆ್ಯಮಿ ಜಾಕ್ಸನ್ | ಹೊಸವರ್ಷ ಇವರ ಬಾಳಲ್ಲಿ ತಂದಿದೆ ಹೊಸ ಹರುಷ | ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಆ್ಯಮಿ ಜಾಕ್ಸನ್ 

ಬೆಂಗಳೂರು (ಜ. 03): ಹೊಸ ವರ್ಷ ಎಲ್ಲರಿಗೂ ಹೊಸತನ ನೀಡಿದರೆ ಆ್ಯಮಿ ಜಾಕ್ಸನ್‌ಗೆ ತುಸು ಹೆಚ್ಚಿನ ಹೊಸತನ ನೀಡಿದೆ. ಅದು ತನ್ನ ಬಾಯ್ ಫ್ರೆಂಡ್, ಬ್ರಿಟನ್‌ನ ಆಗರ್ಭ ಶ್ರೀಮಂತ ಜಾರ್ಜ್ ಪನಯೌಟು ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ.

ಕನ್ನಡದ ‘ದಿ ವಿಲನ್’, ಬಹುಭಾಷೆಯಲ್ಲಿ ತೆರೆ ಕಂಡ ‘2.0’ ಚಿತ್ರದಲ್ಲಿ ನಟಿಸಿ ಸುದ್ದಿಯಲ್ಲಿದ್ದ ಆ್ಯಮಿ ಈಗ ಸಂಸಾರಿಯಾಗಲು ಹೊರಟು ಸುದ್ದಿಯಲ್ಲಿದ್ದಾರೆ. ಆ್ಯಮಿಯ ಬಾವಿ ಪತಿ ಜಾರ್ಜ್ ಪನಯೌಟು ಬ್ರಿಟನ್‌ನ ರಿಯಲ್ ಎಸ್ಟೇಟ್ ಉದ್ಯಮಿ. ಎಬಿಲಿಟಿ ಗ್ರೂಪ್‌ನ ಸಂಸ್ಥಾಪಕರಾದ ಇವರು ಡಬ್ಬಲ್ ಟ್ರೀ, ಪಾರ್ಕ್ ಪ್ಲಾಜಾ, ಹಿಲ್ಟನ್ ಮೊದಲಾದ ಪ್ರತಿಷ್ಟಿತ ಹೋಟೆಲ್‌ಗಳ ಮಾಲೀಕ ಮತ್ತು ಸುಮಾರು 3,600 ಕೋಟಿ ರುಪಾಯಿಗಳ ಆಸ್ತಿಯ ಒಡೆಯ.

ಕೆಲ ಕಾಲದಿಂದ ಒಟ್ಟಿಗೆ ಓಡಾಡಿಕೊಂಡಿದ್ದ ಈ ಜೋಡಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಅಲ್ಲಲ್ಲಿ ಓಡಾಡುತ್ತಲೇ ಇತ್ತು. ಈಗ ಆ್ಯಮಿ ಅದೆಲ್ಲಕ್ಕೂ ತನ್ನ ಇನ್ ಸ್ಟಾಗ್ರಾಂನಲ್ಲಿ ಜಾರ್ಜ್ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತೆರೆ ಎಳೆದಿದ್ದಾರೆ. ಸದ್ಯ ಜಾಂಬಿಯಾದಲ್ಲಿ ಹೊಸ ವರ್ಷದ ಸಂಭ್ರಮ ಹಾಗೂ ನಿಶ್ಚಿತಾರ್ಥದ ಸಡಗರದಲ್ಲಿ ಈ ಜೋಡಿ ತೇಲಾಡುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?