
ಹೈದ್ರಾಬಾದ್ [ಡಿ.18] ‘ಹೆಬ್ಬುಲಿ’ ಚಿತ್ರದ ಮೂಲಕ ಕಿಚ್ಚ ಸುದೀಪ್ ಜತೆ ಕಾಣಿಸಿಕೊಂಡಿದ್ದ ಅಮಲಾ ಪೌಲ್ ಫೋಟೋ ಒಂದು ವೈರಲ್ ಆಗಿದೆ. ಇದು ಯಾವ ಚಿತ್ರದ ಶೂಟಿಂಗ್‌ನಲ್ಲಿ ತೆಗೆದಿದ್ದೋ ಅಥವಾ ಅವರದ್ದೇ ಜೀವನ ಶೈಲಿಯೋ ಗೊತ್ತಿಲ್ಲ.
ಅಮಲಾ ಅವರ ಸೋಶಿಯಲ್ ಮೀಡಿಯಾದ ಪೇಜ್‌ನಲ್ಲಿ ಈ ಫೋಟೋ ಅಪ್ ಲೋಡ್ ಆಗಿದೆ. ಅಮಲಾ ಪೌಲ್, ಮೂಲತ: ಕೇರಳದವರು. ಮಲಯಾಳಂ, ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅಮಲಾ ಪೌಲ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
2014ರಲ್ಲಿ ನಿರ್ದೇಶಕ ಎ. ಎಲ್. ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದ ಅಮಲಾ ಪೌಲ್ 2 ವರ್ಷಗಳ ನಂತರ ಪರಸ್ಪರ ಇಬ್ಬರೂ ದೂರವಾದರು. ಆದಾದ ನಂತರ, ಅಮಲಾ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಸಿನಿಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೊಂದು ಹಾಟ್ ಫೋಟೋ ಶೂಟ್‌ಗೆ ಸಂಬಂಧಿಸಿದ ಫೋಟೋ ಎಂದು ಹೇಳಲಾಗಿದ್ದು ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದ ಬಿಸಿ ದೋಸೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.