‘ಆಡೈ’ ಚಿತ್ರದ ಬೆತ್ತಲೆ ಗುಟ್ಟು ರಟ್ಟು ಮಾಡಿದ ಅಮಲಾ ಪೌಲ್

By Web Desk  |  First Published Jul 9, 2019, 9:33 AM IST

ಆಡೈ ಸಿನಿಮಾದಲ್ಲಿ ಅಮಲಾ ಪೌಲ್ ಸಂಪೂರ್ಣ ಬೆತ್ತಲೆ ಸೀನ್ ವೈರಲ್ | ಬೆತ್ತಲೆಗೆ ಕಾರಣ ಕೊಟ್ಟ ಅಮಲಾ ಪೌಲ್ | 


ತಮಿಳಿನ ‘ಆಡೈ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ, ಅಲ್ಲಿ ಅಮಲಾ ಪೌಲ್ ಬೆತ್ತಲೆಯಾಗಿ ಕಾಣಿಸಿಕೊಂಡ ದೃಶ್ಯಗಳು ಬೆಳಕು ಹರಿದು ಕತ್ತಲಾಗುವಷ್ಟರಲ್ಲಿ ಎಲ್ಲೆಡೆ ಚರ್ಚೆಗೆ ಒಳಪಟ್ಟಿತ್ತು. ಟಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್‌ನ ಸಾಕಷ್ಟು ಮಂದಿ ಅಮಲಾ ಪೌಲ್ ಧೈರ್ಯವನ್ನು ಮೆಚ್ಚಿದ್ದರು.

ಹೆಬ್ಬುಲಿ ನಟಿ ಅವಳಲ್ಲ ಅವನು.!

Tap to resize

Latest Videos

ಪ್ರೇಕ್ಷಕರು ಅಮಲಾ ಎನ್ನುವ ಗಟ್ಟಿಗಿತ್ತಿಯನ್ನು ಒಪ್ಪಿದ್ದರು. ಈಗ ಇದೇ ಅಮಲಾ ಪೌಲ್ ಅಂದು ಆ ದೃಶ್ಯಗಳ ಚಿತ್ರೀಕರಣದ ವೇಳೆ ತಮಗಾಗಿದ್ದ ಅನುಭವವನ್ನು ಹೇಳಿಕೊಂಡಿದ್ದಾರೆ. 15 ಮಂದಿಯಷ್ಟೇ ಇದ್ದರು: ‘ನಿರ್ದೇಶಕ ರತ್ನ ಕುಮಾರ್ ನನಗೆ ಸೀನ್ ಬಗ್ಗೆ ಹೇಳಿದಾಗಲೇ ಭಯವಾಗಿತ್ತು. ಆದರೆ ಇಡೀ ಚಿತ್ರತಂಡ ಆ ದೃಶ್ಯಗಳನ್ನು ತುಂಬಾ ಸುರಕ್ಷಿತವಾಗಿ ಚಿತ್ರೀಕರಣ ಮಾಡಿತ್ತು.

ಕೇವಲ 15 ಮಂದಿ ತಂತ್ರಜ್ಞರು ಮಾತ್ರ ಆ ವೇಳೆ ಹಾಜರಿದ್ದರು. ನನಗೆ ಒಂದು ಹಂತದಲ್ಲಿ ತುಂಬಾ ಒತ್ತಡ ಏರ್ಪಟ್ಟರೂ ನಾನು ಅದನ್ನು ನಿರ್ವಹಿಸಿದೆ. ನಾನು ಆ 15 ಮಂದಿಯನ್ನು ನಂಬಿದ್ದಕ್ಕೆ ನನಗೆ ಆ ದೃಶ್ಯದಲ್ಲಿ ನಟಿಸಲು ಸಾಧ್ಯವಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

ನಟನೆಯನ್ನೇ ಬಿಡಲು ನಿರ್ಧರಿಸಿದ್ದೆ: ಇದೇ ವೇಳೆ ಮತ್ತೊಂದು ವಿಚಾರವನ್ನು ಅಮಲಾ ಹಂಚಿಕೊಂಡಿದ್ದಾರೆ. ‘ನಾನು ಒಮ್ಮೆ ನನ್ನ ಮ್ಯಾನೇಜರ್ ಬಳಿ ಚಿತ್ರರಂಗವನ್ನೇ ತೊರೆದು ಹೋಗುತ್ತೇನೆ ಎಂದು ಹೇಳಿದ್ದೆ. ನನ್ನ ಮನಸ್ಸಿನಲ್ಲಿ ಆ ರೀತಿಯ ಯೋಚನೆ ಬಂದಿದ್ದು ಹೌದು. ನನಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಲು ಇಷ್ಟ. ಹಾಗೆ ಮಹಿಳಾ ಪ್ರಧಾನ ಚಿತ್ರ ಎಂದು ತುಂಬಾ ಮಂದಿ ಸುಳ್ಳು ಹೇಳಿಕೊಂಡು ಬರುತ್ತಿದ್ದರು. ಹೆಣ್ಣು ಅತ್ಯಾಚಾರಕ್ಕೆ ಒಳಗಾಗುವುದು, ಅದರ ವಿರುದ್ಧ ಹೋರಾಡುವುದು, ಯಶಸ್ವಿ ಪುರುಷನ ಹಿಂದೆ ನಿಂತು ಕಷ್ಟಪಡುವುದು, ವ್ಯವಸ್ಥೆಯ ವಿರುದ್ಧ ಅಸಹಾಯಕಳಾಗಿ ಹೋರಾಟ ಮಾಡುವುದು ಇದೇ ಕಥೆಗಳನ್ನು ಇಟ್ಟುಕೊಂಡು ಇವು ಮಹಿಳಾ ಪ್ರಧಾನ ಎಂದು ನಂಬಿಸುತ್ತಿದ್ದರು. ಇದರಿಂದ ಬೇಸತ್ತು ಚಿತ್ರರಂಗವೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೆ’ ಎಂದು ಅಮಲಾ ಇದೇ ವೇಳೆ ಹೇಳಿದ್ದಾರೆ ಕೂಡ. 

click me!