ಯಶ್ 'ರಾಮಾಯಣ'ಕ್ಕೆ ಅಕ್ಷಯ್ ಕುಮಾರ್ ಟಕ್ಕರ್, 32 ವರ್ಷಗಳ ಹಳೆಯ ಸಿನಿಮಾ ಮತ್ತೆ ರಿಲೀಸ್‌ಗೆ ಪ್ಲಾನ್

Published : Oct 26, 2026, 11:11 PM IST
Akshay Kumars 1994 Blockbuster Re Release vs Ranbir Kapoor's Ramayana

ಸಾರಾಂಶ

ನವೆಂಬರ್ 5ರಂದು ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಬಿಡುಗಡೆಯಾಗುತ್ತಿದೆ. ಈ ಮೆಗಾ ಬಜೆಟ್ ಚಿತ್ರಕ್ಕೆ ಪೈಪೋಟಿ ನೀಡಲು ಅಕ್ಷಯ್ ಕುಮಾರ್ ಅವರ 1994ರ ಬ್ಲಾಕ್‌ಬಸ್ಟರ್ 'ಮೊಹ್ರಾ' ನವೆಂಬರ್ 6ರಂದು ಮರುಬಿಡುಗಡೆಯಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಎರಡು ಚಿತ್ರಗಳ ನಡುವಿನ ಹಣಾಹಣಿ ತೀವ್ರ ಕುತೂಹಲ ಮೂಡಿಸಿದೆ.

ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರವು ಭಾರೀ ಸೌಂಡ್ ಮಾಡ್ತಿದೆ. ಈ ಚಿತ್ರವು ನವೆಂಬರ್ 5 ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಈ ಮೆಗಾ ಬಜೆಟ್ ಸಿನಿಮಾಗೆ ಪೈಪೋಟಿ ನೀಡಲು ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ 1994ರ ಹಳೆಯ ಸೂಪರ್ ಹಿಟ್ ಸಿನಿಮಾ ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ.

ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಜೋಡಿಯ ಕ್ಲಾಸಿಕ್ ಬ್ಲಾಕ್‌ಬಸ್ಟರ್ ‘ಮೊಹ್ರಾ’ (Mohra) ಸಿನಿಮಾ ಡಿಜಿಟಲ್ ರೂಪದಲ್ಲಿ ನವೆಂಬರ್ 6 ರಂದು ರಿ-ರಿಲೀಸ್ ಆಗುತ್ತಿದೆ. ಈ ಮೂಲಕ ಯಶ್ ಅವರ ‘ರಾಮಾಯಣ’ ಚಿತ್ರಕ್ಕೆ 32 ವರ್ಷಗಳ ಹಳೆಯ ಸಿನಿಮಾ ಒಂದು ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧೆಯೊಡ್ಡಲು ಮುಂದಾಗಿದೆ.

1994ರಲ್ಲಿ ರಾಜೀವ್ ರೈ 'ಮೊಹ್ರಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆ ಕಾಲದ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಇದೂ ಒಂದು. ಸುನೀಲ್ ಶೆಟ್ಟಿ, ನಸೀರುದ್ದೀನ್ ಶಾ, ಪರೇಶ್ ರಾವಲ್ ಮುಂತಾದ ಘಟಾನುಘಟಿಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್ ಮತ್ತು ಟಿಪ್ ಟಿಪ್ ಬರ್ಸಾ ಪಾನಿ ಹಾಡುಗಳು ಇಂದಿಗೂ ಎವರ್‌ಗ್ರೀನ್ ಆಗಿಯೇ ಉಳಿದುಕೊಂಡಿವೆ.

ಈ ಚಿತ್ರವು 32 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ಅದೇ ನೆಪದಲ್ಲಿ ಈ ಚಿತ್ರವನ್ನು Restored ಆವೃತ್ತಿಯಲ್ಲಿ ನವೆಂಬರ್ 6 ರಂದು ರಿ-ರಿಲೀಸ್ ಮಾಡುತ್ತಿದೆ. ಇತ್ತೀಚೆಗಷ್ಟೇ ಚಿತ್ರತಂಡವು ಯೂಟ್ಯೂಬ್‌ನಲ್ಲಿ ಹೊಸ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತ್ತು.

ಕೋಟಿ, ಕೋಟಿ ಬಾಚಲು ರೆಡಿಯಾದ ರಾಮಾಯಣ

ಮತ್ತೊಂದು ಕಡೆ ನಿತೇಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ನಿರ್ಮಾಣದ ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ಸಜ್ಜಾಗಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಮನಾಗಿ ರಣಬೀರ್ ಕಪೂರ್ ನಟಿಸಿದ್ದಾರೆ. ಚಿತ್ರದ ಅಡ್ವಾನ್ಸ್ ಬುಕಿಂಗ್ ಜೋರಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಚಿತ್ರದ ಮುಂಗಡ ಟಿಕೆಟ್ ಮಾರಾಟ 2 ಸುಮಾರು ₹18.99 ಕೋಟಿ ದಾಟಿದೆ. ಉತ್ತರ ಅಮೆರಿಕ ಒಂದರಲ್ಲೇ ₹7.12 ಕೋಟಿ ಕಲೆಕ್ಷನ್ ಮಾಡಿದೆ.

ಭಾರತದಲ್ಲಿ ಮೊದಲ ದಿನವೇ ರಾಮಾಯಣ ₹110 ಕೋಟಿಗೂ ಹೆಚ್ಚು ನೆಟ್ ಕಲೆಕ್ಷನ್ ಗಳಿಸುವ ಅಂದಾಜು ಇದೆ. ಒಟ್ಟು ವಿಶ್ವದಾದ್ಯಂತ ಒಂದೇ ದಿನ 200 ಕೋಟಿ ಓಪನಿಂಗ್ ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ದೀಪಾವಳಿಯ ರಜಾ ದಿನಗಳಲ್ಲಿ ಯಶ್ ಮತ್ತು ರಣಬೀರ್ ಜೋಡಿಯ ಈ ಮಹಾಕಾವ್ಯಕ್ಕೆ, ಅಕ್ಷಯ್ ಕುಮಾರ್ ಅವರ ಹಳೆಯ ನಾಸ್ಟಾಲ್ಜಿಯಾ ಸಿನಿಮಾ ಎಷ್ಟು ಮಟ್ಟಿಗೆ ಪೈಪೋಟಿ ನೀಡಲಿದೆ ಎಂಬುದನ್ನು ಎಕ್ಸೈಟಿಂಗ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Anushka Sharma: ನಟಿ ಅನುಷ್ಕಾ ಶರ್ಮಾ 3ನೇ ಮಗುವಿಗೆ ಗರ್ಭಿಣಿಯಾಗಿದ್ದಾರಾ? ವಿಡಿಯೋ ವೈರಲ್!
'ಪ್ರೇಮದ ಊರಲಿ' ಅಬ್ಬರಕ್ಕೆ ದಾಸನ ಕುರುಕ್ಷೇತ್ರ, ಕಿಚ್ಚನ ವಿಕ್ರಾಂತ್ ರೋಣ ದಾಖಲೆ ಉಡೀಸ್! ಟಾಪ್-10 ಲಿಸ್ಟ್ ಇಲ್ಲಿದೆ