ಬಾಲಿವುಡ್​ ಸ್ಟಾರ್‌ಗೂ ತಟ್ಟಿದ LPG ಸಿಲಿಂಡರ್ ಅಭಾವ! ಹೀಗಾಗಿ ಅಕ್ಷಯ್ ಕುಮಾರ್ ಪತ್ನಿ ಮಾಡಿದ್ರು ಕಿಲಾಡಿ ಐಡಿಯಾ!

Published : Mar 18, 2026, 02:34 PM IST
Akshay Kumar Twinkle Khanna

ಸಾರಾಂಶ

ದೇಶಾದ್ಯಂತ ಎಲ್.ಪಿ.ಜಿ ಸಿಲಿಂಡರ್ ಅಭಾವ ತಲೆದೋರಿದ್ದು, ಇದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೂ ತಟ್ಟಿದೆ. ಅನಿಲ ಕೊರತೆಯಾದರೆ ಅಡುಗೆಗೆ ತೊಂದರೆಯಾಗಬಾರದೆಂದು, ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಈಗಾಗಲೇ ಎರಡು ಇಂಡಕ್ಷನ್ ಸ್ಟೌವ್‌ಗಳನ್ನು ತರಿಸಿಕೊಂಡಿದ್ದಾರೆ ಎಂದು ಅಕ್ಷಯ್ ಬಹಿರಂಗಪಡಿಸಿದ್ದಾರೆ.

ಬೆಂಗಳೂರು: ಸದ್ಯ ಯುದ್ಧದ ಪರಿಣಾಮ ಇಡೀ ದೇಶದ ಜನತೆಗೆ ಎಲ್.ಪಿ.ಜಿ ಸಿಲಿಂಡರ್ ಬಿಸಿ ತಟ್ಟಿದೆ. ಇದು ಬರೀ ಸಾಮಾನ್ಯರಿಗಷ್ಟೇ ಅಲ್ಲ ಸಿನಿಮಾ ಸೆಲೆಬ್ರಿಟಿಗಳಿಗೂ ತಪ್ಪಿದೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಎಲ್.ಪಿ.ಜಿ ಅಭಾವ ಎದುರಿಸೋಕೆ ಒಂದು ಕಿಲಾಡಿ ಐಡಿಯಾ ಮಾಡಿದ್ದಾರೆ. ಏನದು ಈ ಸ್ಟೋರಿ ನೋಡಿ.

LPG ಸಿಲಿಂಡರ್ ಅಭಾವ, ಬಾಲಿವುಡ್​ ಸ್ಟಾರ್‌ಗೂ ಟೆನ್ಷನ್​..!

ಯೆಸ್, ಸದ್ಯ ದೇಶಾದ್ಯಂತ ಸಿಲಿಂಡರ್ ಅಭಾವ. ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೀತಾ ಇದ್ದು, ಅದೇ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಎಲ್​ಪಿಜಿ ಸಿಲಿಂಡರ್ ಪೂರೈಕೆ ಆಗ್ತಾ ಇಲ್ಲ. ಸದ್ಯ ಹೊಟೆಲ್ ಉದ್ಯಮಕ್ಕೆ, ಜನಸಾಮಾನ್ಯರು ಬಳಸೋ ಸಿಲಿಂಡರ್ ಪೂರೈಕೆಗೆ​​ ಸಮಸ್ಯೆ ಆಗ್ತಿರೋದು ಗೊತ್ತೇ ಇದೆ. ಈ ಸಿಲಿಂಡರ್ ಸಮಸ್ಯೆ ಬರೀ ಸಾಮಾನ್ಯರಿಗೆ ಅಷ್ಟೇ ಅಲ್ಲ ಸ್ವಾಮಿ, ಸಿನಿಮಾ ತಾರೆಯರಿಗೂ ತಟ್ಟಿದೆ. ಇತ್ತೀಚಿಗೆ ಅಕ್ಷಯ್ ಕುಮಾರ್​ಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಕಿಲಾಡಿ ತಾವು ಮಾಡಿರೋ ಕಿಲಾಡಿ ಐಡಿಯಾ ಏನು ಅನ್ನೋದನ್ನ ಹೇಳಿದ್ದಾರೆ.

ಅಕ್ಷಯ್ ಕುಮಾರ್‌ಗಿಂತ ಕಿಲಾಡಿ ಟ್ವಿಂಕಲ್ ಖನ್ನಾ!

‘ನನಗೆ ಎಲ್ಪಿಜಿ ಕೊರತೆಯ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ, ಮನೆಯಲ್ಲಿ ಸದ್ಯಕ್ಕೆ ಅಡುಗೆ ಅನಿಲಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ನನ್ನ ಪತ್ನಿ ಟ್ವಿಂಕಲ್ ಈಗಾಗಲೇ ಎರಡು ಇಂಡಕ್ಷನ್ ಸ್ಟೌವ್ಗಳನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದಾರೆ’

ಹೌದು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಆಗಲೇ ಎರಡು ಇಂಡಕ್ಷನ್ ಸ್ಟವ್ ಆರ್ಡರ್ ಮಾಡಿದ್ದಾರಂತೆ. ಒಂದು ವೇಳೆ ಸಿಲಿಂಡರ್ ಸಿಗದೇ ಹೋದ್ರೂ ಮನೆಯಲ್ಲಿ ಕುಕಿಂಗ್​ಗೆ ತೊಂದರೆ ಆಗದಂತೆ ಪ್ಲಾನ್ ಮಾಡಿದ್ದಾರಂತೆ. ಅಕ್ಷಯ್ ಕುಮಾರ್ ಹೇಳಿ ಕೇಳಿ ಕಿಲಾಡಿ ಅಂತಾನೇ ಫೇಮಸ್. ಎಂಥದ್ದೇ ಸಮಸ್ಯೆ ಬಂದರೂ ಅದನ್ನ ಸಾಲ್ವ್ ಮಾಡಿ ಕಿಲಾಡಿ ಅಂತ ಕರೆಸಿಕೊಳ್ತಾರೆ ಅಕ್ಷಯ್.

ಆದ್ರೆ ಅಕ್ಷಯ್ ಪತ್ನಿ ಟ್ವಿಂಕಲ್ ಮಾಡಿರೋ ಐಡಿಯಾ ನೋಡಿ, ಅವರು ಕಿಲಾಡಿಗಿಂತ ಕಿಲಾಡಿ ಅಂತ ಜನ ತಮಾಷೆ ಮಾಡ್ತಾ ಇದ್ದಾರೆ. ಒಟ್ಟಾರೆ ಸಿಲಿಂಡರ್ ಮ್ಯಾಟರ್​ ಸದ್ಯ ಬಾಲಿವುಡ್‌ನಲ್ಲೂ ಸದ್ದು ಮಾಡ್ತಾ ಇದೆ.

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು
ಅಲ್ಲು ಅರ್ಜುನ್‌ ಸಿನಿಮಾವನ್ನು ಕಸದ ಬುಟ್ಟಿಗೆ ಹಾಕ್ರೀ...; ಮಗನ ಸಿನಿಮಾ ಬಗ್ಗೆ ಅಲ್ಲು ಅರವಿಂದ್‌ ಇಂಥ ಮಾತು.. ಛೇ