
ಭೋಜ್‌ಪುರಿ ಚಿತ್ರರಂಗದ ಫೇಮಸ್ ನಟಿ ಅಕ್ಷರಾ ಸಿಂಗ್, ತಮ್ಮ ಸಿನಿಮಾ ಮಾತ್ರವಲ್ಲದೆ ಪರ್ಸನಲ್ ಲೈಫ್ ವಿಚಾರವಾಗಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಅಭಿಮಾನಿಗಳು ಕೂಡ ಅಕ್ಷರಾ ಲೈಫ್‌ನಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಅಕ್ಷರಾ ಸಿಂಗ್ ಒಂದು ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ತಾನು ಒಬ್ಬರ ಜೊತೆ ಡೇಟಿಂಗ್ ಮಾಡ್ತಿರೋದಾಗಿ ಹೇಳಿಕೊಂಡಿದ್ದಾರೆ. ಆದರೆ, ಆ ವ್ಯಕ್ತಿ ಯಾರು ಅಂತ ಮಾತ್ರ ಸದ್ಯಕ್ಕೆ ಹೇಳಿಲ್ಲ. ಇದರಿಂದ, ಅಕ್ಷರಾ ತಮ್ಮ ಮಾಜಿ ಪ್ರಿಯಕರ ಪವನ್ ಸಿಂಗ್ ಅವರನ್ನು ಮರೆತು ಜೀವನದಲ್ಲಿ ಮುಂದೆ ಸಾಗಿದ್ದಾರೆ ಅಂತ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ವಿವಾದಗಳ ಬಗ್ಗೆ ಅಕ್ಷರಾ ಸಿಂಗ್ ಉತ್ತರ
ಒಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಕ್ಷರಾ ಸಿಂಗ್ ತಮ್ಮ ಹಳೆಯ ವಿವಾದಗಳ ಬಗ್ಗೆನೂ ಮಾತನಾಡಿದ್ದಾರೆ. ಪವನ್ ಸಿಂಗ್ ಜೊತೆಗಿನ ವಿವಾದಗಳ ಬಗ್ಗೆ ಕೇಳಿದಾಗ, 'ನನಗೆ ಇಂಥ ಸುದ್ದಿಗಳನ್ನು ಓದೋಕೆ ಟೈಮೇ ಸಿಗಲ್ಲ. ನಾನು ನನ್ನ ಕೆಲಸದ ಕಡೆ ಮಾತ್ರ ಗಮನ ಕೊಡ್ತೀನಿ. ಇದೆಲ್ಲಾ ನೆಗೆಟಿವಿಟಿ' ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, 'ಯಾವುದೇ ನೆಗೆಟಿವ್ ವಿಚಾರವನ್ನು ತಲೆಗೆ ಹಚ್ಚಿಕೊಳ್ಳಬಾರದು' ಅಂತಾನೂ ಹೇಳಿದ್ದಾರೆ.
ಹಳೆ ಸಂಬಂಧವನ್ನು ಮರೆತ ನಟಿ
ಹಳೆ ದಿನಗಳನ್ನು ನೆನಪಿಸಿಕೊಳ್ಳೋಕೆ ಇಷ್ಟಪಡ್ತೀರಾ ಅಂತ ಕೇಳಿದಾಗ, 'ನಾನು ಎಲ್ಲವನ್ನೂ ಮರೆತುಬಿಟ್ಟಿದ್ದೇನೆ. ನನ್ನ ಜೀವನದಲ್ಲಿ ಏನೆಲ್ಲಾ ನೆಗೆಟಿವ್ ಇತ್ತೋ, ಅದನ್ನೆಲ್ಲಾ ಹಿಂದೆ ಬಿಟ್ಟು ಬಂದಿದ್ದೇನೆ. ಈಗ ಅದರ ಬಗ್ಗೆ ಯೋಚನೆ ಮಾಡೋಕೂ ನನಗೆ ಇಷ್ಟ ಇಲ್ಲ' ಅಂತ ಖಡಕ್ಕಾಗಿ ಹೇಳಿದ್ದಾರೆ.
ಪವನ್ ಸಿಂಗ್ ಬಗ್ಗೆ ನಟಿ ಹೇಳಿದ್ದೇನು?
ಪವನ್ ಸಿಂಗ್ ಅವರಲ್ಲಿರೋ ಒಳ್ಳೆಯ ಗುಣಗಳ ಬಗ್ಗೆ ಹೇಳಿ ಅಂತ ಕೇಳಿದಾಗ, ಅಕ್ಷರಾ ಸಿಂಗ್ ಸ್ವಲ್ಪ ಬೇಸರದಿಂದಲೇ ಮಾತನಾಡಿದರು. 'ಅವರಿಂದ ಎಷ್ಟು ಒಳ್ಳೇದಾಯ್ತೋ, ಅದಕ್ಕಿಂತ ಹೆಚ್ಚಾಗಿ ಕೆಟ್ಟದ್ದೇ ಆಗಿದೆ. ಹಾಗಾಗಿ, ಈಗ ನನಗೆ ಅಂತಹ ಒಳ್ಳೆ ನೆನಪುಗಳೇನೂ ಇಲ್ಲ' ಅಂತ ಹೇಳಿದ್ದಾರೆ. ಆದರೆ, ಪವನ್ ಸಿಂಗ್ ಒಬ್ಬ ಒಳ್ಳೆ ಸಿಂಗರ್ ಅನ್ನೋದನ್ನ ಅವರು ಒಪ್ಪಿಕೊಂಡರು. ಆದರೆ, ನಟನಾಗಿ ದಿನೇಶ್‌ಲಾಲ್ ಯಾದವ್ ಅವರೇ ಬೆಸ್ಟ್ ಅಂತ ಅಕ್ಷರಾ ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಪ್ ನಂತರ ಜೀವನದಲ್ಲಿ ಬದಲಾವಣೆ
ಬ್ರೇಕಪ್ ಆದ್ಮೇಲೆ ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗಿದೆ ಅಂತ ಅಕ್ಷರಾ ಹೇಳಿಕೊಂಡಿದ್ದಾರೆ. 'ಮೊದಲೆಲ್ಲಾ ನಾನು ತುಂಬಾ ಸೈಲೆಂಟ್, ರಿಸರ್ವ್ಡ್ ಆಗಿದ್ದೆ. ಜನ ಏನು ಅಂದ್ಕೊಳ್ತಾರೋ ಅನ್ನೋ ಚಿಂತೆ ಇತ್ತು. ಆದ್ರೆ ಈಗ ನಾನು ಫುಲ್ ಬಿಂದಾಸ್ ಆಗಿ ಬದುಕ್ತಿದ್ದೀನಿ. ನನಗೆ ಈಗ ಯಾವ ಭಯನೂ ಇಲ್ಲ' ಅಂತ ಅವರು ವಿವರಿಸಿದ್ದಾರೆ.
ಪ್ರೀತಿಯ ಬಗ್ಗೆ ಸತ್ಯ ಒಪ್ಪಿಕೊಂಡ ಅಕ್ಷರಾ
ಇದೇ ಸಂದರ್ಶನದಲ್ಲಿ ಅಕ್ಷರಾ ಸಿಂಗ್ ತಾವು ಸದ್ಯ ರಿಲೇಶನ್‌ಶಿಪ್‌ನಲ್ಲಿ ಇರುವುದಾಗಿ ಮತ್ತು ಒಬ್ಬರ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅವರ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ. 'ನನಗೆ ಮತ್ತೆ ಪ್ರೀತಿಯಾಗಿದೆ, ಆ ಪ್ರೀತಿ ಈಗ ಚೆನ್ನಾಗಿ ನಡೀತಿದೆ. ಹಳೆದನ್ನೆಲ್ಲಾ ಮರೆತಿದ್ದೇನೆ, ಈಗ ಸದ್ಯದ ಜೀವನದ ಮೇಲೆ ಗಮನ ಕೊಡ್ತಿದ್ದೀನಿ' ಅಂತ ಅಕ್ಷರಾ ಹೇಳಿದ್ದಾರೆ. 'ನನ್ನ ಈ ಹೊಸ ಸಂಬಂಧಕ್ಕೆ ಸ್ವಲ್ಪ ಸಮಯ ಕೊಡಬೇಕು. ಸರಿಯಾದ ಟೈಮ್ ಬಂದಾಗ ನಾನೇ ನನ್ನ ಪಾರ್ಟ್‌ನರ್ ಯಾರು ಅಂತ ಹೇಳ್ತೀನಿ' ಅಂತಾನೂ ಸ್ಪಷ್ಟಪಡಿಸಿದ್ದಾರೆ.
ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ, 'ಅದರ ಬಗ್ಗೆ ಈಗಲೇ ಏನೂ ಹೇಳಕ್ಕಾಗಲ್ಲ. ನಾನೀಗ ಪ್ರೀತಿಯ ಆರಂಭದ ಹಂತದಲ್ಲಿದ್ದೇನೆ. ಸ್ವಲ್ಪ ಸಮಯ ಹೋಗಲಿ, ಆಮೇಲೆ ಮುಂದಿನದ್ದನ್ನು ಯೋಚನೆ ಮಾಡೋಣ' ಅಂತ ಅಕ್ಷರಾ ಉತ್ತರಿಸಿದ್ದಾರೆ. ಜೊತೆಗೆ, 'ಈಗಲೇ ನನ್ನ ಪಾರ್ಟ್‌ನರ್ ಹೆಸರನ್ನ ಹೇಳಿದ್ರೆ, ಎಲ್ಲಿ ದೃಷ್ಟಿ ಆಗುತ್ತೋ ಅನ್ನೋ ಭಯ. ಅದಕ್ಕೇ ಹೇಳುತ್ತಿಲ್ಲ' ಅಂತ ತಮಾಷೆಯಾಗಿಯೂ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.