
ಅಕ್ಕಿನೇನಿ ಕುಟುಂಬದ ಯುವ ವಾರಸುದಾರ ಅಖಿಲ್ ಅಕ್ಕಿನೇನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಅಖಿಲ್ ಮತ್ತು ಜೈನಬ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರೂ ಕೆಲಕಾಲ ಪ್ರೀತಿಸುತ್ತಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಅಖಿಲ್ ಮತ್ತು ಜೈನಬ್ ನಿಶ್ಚಿತಾರ್ಥ ಸರಳವಾಗಿ ನೆರವೇರಿತ್ತು.
ಶುಕ್ರವಾರ ನಡೆದ ಮದುವೆ ಅದ್ದೂರಿಯಾಗಿ ನೆರವೇರಿತು. ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾಗವಹಿಸಿ ನವದಂಪತಿಗಳಿಗೆ ಆಶೀರ್ವಾದ ಮಾಡಿದರು. ಜೂನ್ 8 ರಂದು ನಾಗಾರ್ಜುನ ಇನ್ನಷ್ಟು ಗ್ರ್ಯಾಂಡ್ ಆಗಿ ಆರತಕ್ಷತೆ ಏರ್ಪಡಿಸಿದ್ದಾರಂತೆ. ಈ ಸಮಾರಂಭಕ್ಕೆ ಟಾಲಿವುಡ್ ಮಂದಿ ಹಾಜರಾಗಲಿದ್ದಾರೆ ಎನ್ನಲಾಗಿದೆ. ಅದೇ ರೀತಿ ರಾಜಕೀಯ ಗಣ್ಯರೂ ಭಾಗವಹಿಸಲಿದ್ದಾರೆ.
ನಾಗಾರ್ಜುನ ಅಖಿಲ್ ಮದುವೆ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಗಾರ್ಜುನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಖಿಲ್ ಮದುವೆಯ ಬಗ್ಗೆ ನಾಗಾರ್ಜುನ ಸಂತೋಷದಿಂದ ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ.
ನಾಗಾರ್ಜುನ ಟ್ವಿಟ್ಟರ್‌ನಲ್ಲಿ, 'ನಾನು ಮತ್ತು ಅಮಲ ಉಕ್ಕಿ ಹರಿಯುವ ಸಂತೋಷದಿಂದ ಈ ಶುಭ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಮಗ ಅಖಿಲ್ ಅಕ್ಕಿನೇನಿ ಮತ್ತು ಜೈನಬ್ ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಒಂದಾಗಿದ್ದಾರೆ. ನಮ್ಮ ಮನೆಯಲ್ಲೇ ಈ ಸಮಾರಂಭ ನಡೆದಿದೆ. ಅಖಿಲ್ ಮದುವೆಯೊಂದಿಗೆ ನಮ್ಮ ಕನಸು ನನಸಾಗಿದೆ. ನವದಂಪತಿಗಳಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ಬರೆದುಕೊಂಡಿದ್ದಾರೆ.
ಅಖಿಲ್ ವಿವಾಹವಾದ ಜೈನಬ್ ಕುಟುಂಬದ ಹಿನ್ನೆಲೆಯ ಬಗ್ಗೆ ಕುತೂಹಲಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ. ಅವರ ತಂದೆ ಜುಲ್ಫಿ ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು ಎಂದು ತಿಳಿದುಬಂದಿದೆ. ವ್ಯಾಪಾರ ಕ್ಷೇತ್ರದಲ್ಲಿ ನಾಗಾರ್ಜುನ ಅವರ ಪರಿಚಯದಿಂದಾಗಿ ಜುಲ್ಫಿ ಮತ್ತು ಅಕ್ಕಿನೇನಿ ಕುಟುಂಬಗಳ ನಡುವೆ ಸಾಮೀಪ್ಯ ಬೆಳೆದಿದೆ ಎನ್ನಲಾಗಿದೆ. ಹೀಗೆ ಪರಸ್ಪರ ತಿಳಿದುಕೊಂಡ ಅಖಿಲ್ ಮತ್ತು ಜೈನಬ್ ಪ್ರೀತಿಸಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.