ಸ್ಮೃತಿ ಮಂಧನಾ ಜತೆ ಬ್ರೇಕ್‌ಅಪ್; ಪಲಾಶ್ ಮುಚ್ಚಲ್ ಒಳ್ಳೆಯ ವ್ಯಕ್ತಿ ಎಂದ ಬಾಲಿವುಡ್ ನಟಿ!

Published : Feb 28, 2026, 02:01 PM IST
Palash Muchhal Smriti Mandhana

ಸಾರಾಂಶ

ಸ್ಮೃತಿ ಮಂಧನಾ ಅವರೊಂದಿಗಿನ ವಿವಾಹವು ರದ್ದಾದ ನಂತರ, ಫಿಲ್ಮ್‌ ಮೇಕರ್ ಪಲಾಶ್ ಮುಚ್ಚಲ್‌ಗೆ ನಟಿ ಡೈಸಿ ಶಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಲಾಶ್ ಒಬ್ಬ ಸಂಭಾವಿತ ವ್ಯಕ್ತಿ ಮತ್ತು ಅವರ ಕುಟುಂಬವು ತುಂಬಾ ಒಳ್ಳೆಯದು ಎಂದು ಡೈಸಿ ಹೇಳಿದ್ದು, ಅವರ ಹೊಸ ನಿರ್ದೇಶನದ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ಬೆಂಗಳೂರು: ಸ್ಮೃತಿ ಮಂಧನಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಕೊನೆಯ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿತ್ತು. ಇದೀಗ ಫಿಲ್ಮ್‌ ಮೇಕರ್ ಹಾಗೂ ಮ್ಯೂಸಿಕ್ ಕಂಪೋಸರ್ ಆಗಿರುವ ಪಲಾಶ್ ಮುಚ್ಚಲ ಬೆಂಬಲಕ್ಕೆ ಸಲ್ಮಾನ್ ಖಾನ್ ಜತೆ ನಟಿಸಿರುವ ಡೈಸಿ ಶಾ ಬೆನ್ನಿಗೆ ನಿಂತಿದ್ದಾರೆ. ಪಲಾಶ್ ಮುಚ್ಚಲ್ ಓರ್ವ ಸಂಭಾವಿತ ವ್ಯಕ್ತಿ ಎಂದು ಡೈಸಿ ಶಾ ಹೇಳಿದ್ದಾರೆ.

ಪಲಾಶ್ ಮುಚ್ಚಲ್ ಹಾಗೂ ಆತನ ಸಹೋದರಿ ಪಲಾಕ್ ಮುಚ್ಚಲ್ ತುಂಬಾ ಒಳ್ಳೆಯ ಕುಟುಂಬ ಎಂದು ಹೇಳಿದ್ದಾರೆ. ಶ್ರೇಯಸ್ ತಲ್ಪಾಡೆ ಹಾಗೂ ಡೈಸಿ ಸ್ವತಃ ಲೀಡ್‌ ರೋಲ್‌ನಲ್ಲಿ ನಟಿಸಿರುವ ತಮ್ಮ ನಿರ್ದೇಶನದ ಹೊಸ ಯೋಜನೆಯಲ್ಲಿ ಪಲಾಶ್ ಇತ್ತೀಚೆಗಷ್ಟೇ ಘೋಷಿಸಿದ್ದರು. ಇದರ ಬೆನ್ನಲ್ಲೇ ಡೈಸಿ ಈ ರೀತಿಯ ಹೇಳಿಕೆ ನೀಡುವ ಮೂಲಕ ಪಲಾಶ್ ಬೆನ್ನಿಗೆ ನಿಂತಿದ್ದಾರೆ. ಕಳೆದ ವರ್ಷ ಸ್ಮೃತಿ ಅವರೊಂದಿಗಿನ ವಿವಾಹವು ನಾಟಕೀಯ ರೀತಿಯಲ್ಲಿ ರದ್ದಾದ ನಂತರ ಪಲಾಶ್ ಮಾಡುತ್ತಿರುವ ಮೊದಲ ಮಹತ್ವದ ವೃತ್ತಿಪರ ಘೋಷಣೆ ಇದಾಗಿದೆ.

ಪಲಾಶ್ ಬೆನ್ನಿಗೆ ನಿಂತ ಡೈಸಿ

ಇತ್ತೀಚೆಗಷ್ಟೇ ಫಿಲ್ಮಿಗ್ಯಾನ್‌ ಜೊತೆಗೆ ಸಂವಾದದಲ್ಲಿ ಭಾಗವಹಿಸಿದ ಡೈಸಿ, ಪಲಾಶ್ ಹಾಗೂ ಅವರ ಕುಟುಂಬದ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಡೈಸಿಯ ಚೊಚ್ಚಲ ಬಾಲಿವುಡ್‌ ಚಿತ್ರ 'ಜೈ ಹೋ'ದಲ್ಲಿ ಹಾಡನ್ನು ಹಾಡಿದ್ದ ತನ್ನ ಸಹೋದರಿ ಹಾಗೂ ಗಾಯಕಿಯಾಗಿ ಹೆಸರು ಮಾಡಿರುವ ಪಲಾಕ್ ಮುಚ್ಚಲ್ ಮೂಲಕ ಪಲಾಶ್ ಅವರನ್ನು ಭೇಟಿ ಮಾಡಿದೆ.

"ಪಲಾಶ್ ಒಬ್ಬ ಒಳ್ಳೆಯ ವ್ಯಕ್ತಿ. ನಿಜ ಹೇಳಬೇಕಂದ್ರೆ ನಾನು ಅವರನ್ನು ಒಂದೆರಡು ಬಾರಿ ಭೇಟಿಯಾಗಿದ್ದೇನೆ. ಪಾಲಕ್ ಜೈ ಹೋ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ್ದರು, ಆದ್ದರಿಂದ ಅಂದಿನಿಂದ ನಾನು ಅವರನ್ನು ತಿಳಿದಿದ್ದೇನೆ, ಆದ್ದರಿಂದ ನಾನು ಆಗಾಗ್ಗೆ ಪಾಲಕ್ ಅವರ ಮನೆಯಲ್ಲಿ ಹುಟ್ಟುಹಬ್ಬ ಮತ್ತು ಗಣಪತಿ ಪೂಜೆಗೆ ಪಾರ್ಟಿಗಳಿಗೆ ಹೋಗುತ್ತೇನೆ, ಮತ್ತು ನಾನು ಪಲಾಶ್ ಅವರನ್ನು ಭೇಟಿಯಾದದ್ದು ಹೀಗೆ. ಅವರು ಸಂಗೀತ ಸಂಯೋಜಕ ಮತ್ತು ನಿರ್ದೇಶಕ ಎಂದು ನನಗೆ ತಿಳಿದುಬಂದಿದ್ದು ಹೀಗೆ ಎಂದು ಡೈಸಿ ಹೇಳಿದ್ದಾರೆ.

"ನಾನು ಅವರ ಕುಟುಂಬವನ್ನು ಭೇಟಿಯಾದೆ, ಸುಂದರ ಕುಟುಂಬ, ಅವರು ತುಂಬಾ ನಿಷ್ಠಾವಂತರು. ಅವರು ದೇವರನ್ನು ತುಂಬಾ ನಂಬುತ್ತಾರೆ. ದೇವರನ್ನು ನಂಬುವವರು ಸಕಾರಾತ್ಮಕ ಜನರು" ಎಂದು ಡೈಸಿ ಹೇಳಿದ್ದಾರೆ.

ಸ್ಮೃತಿ-ಪಲಾಶ್ ಮದುವೆ ರದ್ದು:

ಪಲಾಶ್ ಮತ್ತು ಸ್ಮೃತಿ ನವೆಂಬರ್ 25, 2025 ರಂದು ವಿವಾಹವಾಗಬೇಕಿತ್ತು. ಆದಾಗ್ಯೂ, ಸಮಾರಂಭಕ್ಕೆ ಕೇವಲ ಒಂದು ದಿನ ಮೊದಲು ಮದುವೆಯನ್ನು ಹಠಾತ್ತನೆ ರದ್ದುಗೊಳಿಸಲಾಯಿತು. ಆ ಸಮಯದಲ್ಲಿ, ಸ್ಮೃತಿಯ ತಂದೆಯ ಅನಾರೋಗ್ಯದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸಲಾಯಿತು. ಆದರೆ ಇದಾದ ಕೆಲ ದಿನಗಳ ಬಳಿಕ ಪಲಾಶ್ ಬೇರೆ ಗರ್ಲ್‌ಫ್ರೆಂಡ್ ಜತೆ ಇದ್ದಾಗ ರೆಡ್‌ ಹ್ಯಾಂಡ್ ಆಗಿ ಕೆಲ ಮಹಿಳಾ ಕ್ರಿಕೆಟರ್‌ಗೆ ಸಿಕ್ಕಿಬಿದ್ದಿದ್ದರು. ಇದೇ ಕಾರಣಕ್ಕೆ ಮದುವೆ ರದ್ದಾಗಿದ್ದು ಎಂದು ಸ್ಮೃತಿ ಗೆಳೆಯರೊಬ್ಬರು ಗಂಭೀರ ಆರೋಪ ಮಾಡಿದ್ದರು. ಆದರೆ ಈ ವಿಚಾರವಾಗಿ ಸ್ಮೃತಿ ಮಂಧನಾ ಅವರಾಗಲಿ ಅಥವಾ ಪಲಾಶ್ ಮುಚ್ಚಲ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದಳಪತಿ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ನಟಿ ತ್ರಿಷಾ ಕೃಷ್ಣನ್ ವಿರುದ್ಧ ಭಾರೀ ಸೈಬರ್ ದಾಳಿ
ಕೆಜಿಗಟ್ಟಲೆ ಚಿನ್ನಾಭರಣ ಧರಿಸಿದ್ದ Rashmika Mandanna ಸ್ಲಿಪ್ಪರ್​ ಮೇಲೆ ಫ್ಯಾನ್ಸ್​ ಕಣ್ಣು: ಇಷ್ಟು ಕಡಿಮೆ ರೇಟಾ?