'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!

Published : Dec 05, 2025, 01:33 PM IST
Samantha Raj Nidhimoru

ಸಾರಾಂಶ

ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ ಸಮಂತಾ ಆಡಿದ್ದ ಮಾತುಗಳನ್ನು, ಅವರ ಕಾಮೆಂಟ್‌ಗಳನ್ನು ಮತ್ತೆ ವೈರಲ್ ಮಾಡುತ್ತಿದ್ದಾರೆ. 'ಆಹಾರ ಮತ್ತು ದೈಹಿಕ ಸಂಪರ್ಕದ ಬಗ್ಗೆ ನಿಮ್ಮ ಅಭಿಪ್ರಾಯವೇನು' ಎಂದು ನಿರೂಪಕಿಯೊಬ್ಬರು ಸಮಂತಾ ಅವರನ್ನು ಕೇಳಿದಾಗ, ನಟಿ ಬೋಲ್ಡ್‌ ಆಗಿ ‘ಹಾಗೆ’ ಹೇಳಿದ್ದರು. ಈ ಸಸ್ಟೋರಿ ನೋಡಿ..

ಸಮಂತಾ ಬೋಲ್ಡ್ ಹೇಳಿಕೆ

Samantha Ruth Prabhu: ನಟ ನಾಗಚೈತನ್ಯ ಅವರಿಂದ ವಿಚ್ಚೇದನ ಪಡೆದ ನಂತರ ನಟಿ ಸಮಂತಾ (Samantha Ruth Prabhu) ಇತ್ತೀಚೆಗೆ ಎರಡನೇ ಮದುವೆ ಮಾಡಿಕೊಂಡಿದ್ದು ಇದೀಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ಸ್ಯಾಮ್ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿ 01 ಡಿಸೆಂಬರ್ 2025ರಂದು, ಕೊಯಮುತ್ತೂರಿನ ಸದ್ಗುರು ಸನ್ನಿಧಿ ಈಶಾ ಯೋಗ ಸೆಂಟರ್‌ನಲ್ಲಿ ಸಮಂತಾ ವಿವಾಹವಾಗಿದ್ದಾರೆ.

ಇದೀಗ ಇಬ್ಬರೂ ತಮ್ಮ ಹನಿಮೂನ್ ಆನಂದಿಸುತ್ತಿರುವ ಸಮಯದಲ್ಲಿ 'ಪ್ರಣಯ'ದ ಬಗ್ಗೆ ಸಮಂತಾ ಈ ಹಿಂದೆ ಮಾಡಿರುವ ಕಾಮೆಂಟ್‌ಗಳು ಸಂಚಲನ ಮೂಡಿಸುತ್ತಿವೆ. ಹಾಗಿದ್ದರೆ ಅದೇನು ಅಂತೀರಾ? ಮುಂದೆ ನೋಡಿ..

ಹೌದು, ಕೆಲವರು ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ ಸಮಂತಾ ಆಡಿದ್ದ ಮಾತುಗಳನ್ನು, ಅವರ ಕಾಮೆಂಟ್‌ಗಳನ್ನು ಮತ್ತೆ ವೈರಲ್ ಮಾಡುತ್ತಿದ್ದಾರೆ. 'ಆಹಾರ ಮತ್ತು ದೈಹಿಕ ಸಂಪರ್ಕದ ಬಗ್ಗೆ ನಿಮ್ಮ ಅಭಿಪ್ರಾಯವೇನು' ಎಂದು ನಿರೂಪಕಿಯೊಬ್ಬರು ಸಮಂತಾ ಅವರನ್ನು ಕೇಳಿದಾಗ, ನಟಿ ಬೋಲ್ಡ್‌ ಆಗಿ 'ನಾನು ಆಹಾರವಿಲ್ಲದೆ ಬದುಕಬಲ್ಲೆ, ಆದರೆ ನಾನು ದೈಹಿಕ ಸಂಪರ್ಕವಿಲ್ಲದೇ ಬದುಕಲು ಸಾಧ್ಯವಿಲ್ಲ..' ಎಂದಿದ್ದರು.. ಸಖತ್ ವೈರಲ್ ಅಗಿದ್ದ ಅವರ ಈ ಕಾಮೆಂಟ್‌ಗಳು ಈಗ ಅವರ ಮದುವೆ ಬಳಿಕ ಮತ್ತೆ ವೈರಲ್ ಆಗಿವೆ.

ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಸರಳ ವಿವಾಹ

ಡಿಸೆಂಬರ್ 01ರಂದು ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ಅತ್ಯಂತ ಸರಳ ರೀತಿಯಲ್ಲಿ ವಿವಾಹವಾದರು. ವಿವಾಹ ಸಮಾರಂಭವು ಯಾವುದೇ ಮಾಧ್ಯಮ ಪ್ರಚಾರವಿಲ್ಲದೆ, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ, ಕೇವಲ 30 ಅತಿಥಿಗಳೊಂದಿಗೆ ನಡೆದಿದೆ. 'ಭೂತ ಶುದ್ಧಿ' ಸಂಪ್ರದಾಯದಂತೆ ನಡೆದ ಈ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸಮಂತಾ ಅವರ ಫೋಟೋಗಳಲ್ಲಿ, ಅವರು ಧರಿಸಿದ್ದ ಉಂಗುರವು ಹೈಲೈಟ್ ಆಗಿದೆ. ಮದುವೆಯಲ್ಲಿ ಕೆಂಪು ರೇಷ್ಮೆ ಸೀರೆಯಲ್ಲಿ ಸಮಂತಾ ಸುಂದರವಾಗಿ ಕಾಣುತ್ತಿದ್ದರು.

ಸಮಂತಾ- ರಾಜ್ ಇಬ್ಬರಿಗೂ ಎರಡನೇ ಮದುವೆ

  ನಿರ್ದೇಶಕ ರಾಜ್ ನಿಡಿಮೋರು ಈ ಹಿಂದೆ 2015 ರಲ್ಲಿ ಬರಹಗಾರ್ತಿ ಮತ್ತು ವೈದ್ಯ ಶ್ಯಾಮಲಿ ದೇ ಅವರನ್ನು ವಿವಾಹವಾಗಿದ್ದರು. ಆದರೆ ಅವರು 2022 ರಲ್ಲಿ ಬೇರ್ಪಟ್ಟರು ಎನ್ನಲಾಗಿದೆ. ಸಮಂತಾ ಈ ಹಿಂದೆ ನಾಗ ಚೈತನ್ಯ ಅವರನ್ನು ವಿವಾಹವಾಗಿ ಡಿವೋರ್ಸ ಮಾಡಿದ್ದರು. ಸಮಂತಾ ಮತ್ತು ರಾಜ್ 'ದಿ ಫ್ಯಾಮಿಲಿ ಮ್ಯಾನ್ 2' ಮತ್ತು 'ಸಿಟಾಡೆಲ್: ಹನಿ ಬನ್ನಿ ' ನಂತಹ ದೊಡ್ಡ ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2025 ರ ಆರಂಭದಲ್ಲಿ ಅವರ ಪ್ರೇಮ-ಸಂಬಂಧದ ಬಗ್ಗೆ ಹೊರಗಿನ ಪ್ರಪಂಚಕ್ಕೆ ತಿಳಿದು ಇದೀಗ ಮದುವೆಯವರೆಗೆ ಬಂದಿದೆ.

ಸಮಂತಾ ವೃತ್ತಿಜೀವನ: ಇತ್ತೀಚೆಗೆ 'ಸಿಟಾಡೆಲ್: ಹನಿ ಬನ್ನಿ' ಚಿತ್ರದ ಮೂಲಕ ಸುದ್ದಿ ಮಾಡಿದ್ದ ಸಮಂತಾ ಅವರ ಕೈಯಲ್ಲಿ ಪ್ರಸ್ತುತ ಹಲವು ಪ್ರಾಜೆಕ್ಟ್‌ಗಳಿವೆ. ಅವರು ಸ್ವತಃ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ತೆಲುಗು ಆಕ್ಷನ್ ಥಿಲ್ಲರ್ 'ಮಾ ಇಂತಿ ಬಂಗಾರಂ' ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೊತೆಗೆ, ಹಿಂದಿಯಲ್ಲಿ 'ರಕ್ತ ಬ್ರಹ್ಮಂದ್' ಎಂಬ ಬೃಹತ್ ವೆಬ್ ಸರಣಿಯಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈಗ ಸಮಂತಾ-ರಾಜ್ ಜೋಡಿ ಹನಿಮೂನ್ ಮೂಡ್‌ನಲ್ಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ