
ಮುಂಬೈ[ನ.18]:ಭಾರತೀಯ ಜಾಹೀರಾತು ನಿರ್ಮಾಣ ವಲಯದ ಭೀಷ್ಮ ಎಂದೇ ಪ್ರಖ್ಯಾತರಾಗಿದ್ದ ಖ್ಯಾತ ಜಾಹೀರಾತು ನಿರ್ದೇಶಕ, ರಂಗಕರ್ಮಿ ಅಲಿಕ್ ಪದಮ್‌ಸೀ (90) ಶನಿವಾರ ಇಲ್ಲಿ ನಿಧನರಾಗಿದ್ದರೆ.. ಪದಮ್‌ಸೀ ನಿಧನಕ್ಕೆ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಉದ್ಯಮ ವಲಯದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.
ಕಳೆದ 5-6 ದಶಕಗಳ ಅವಧಿಯಲ್ಲಿ ಭಾರತದಲ್ಲಿ 100ಕ್ಕೂ ಹೆಚ್ಚು ಉತ್ಪನ್ನಗಳನ್ನು ತಮ್ಮ ಖ್ಯಾತ ಜಾಹೀರಾತುಗಳ ಮೂಲಕವೇ ಜನಪ್ರಿಯರಾಗುವಂತೆ ಮಾಡಿದ್ದು, ಅವುಗಳಿಗೆ ದೊಡ್ಡ ಮಾರುಕಟ್ಟೆದೊರಕಿಸಿಕೊಟ್ಟಿದ್ದು ಪದಮ್‌ಸೀ ಅವರ ಹೆಗ್ಗಳಿಕೆ. ಬಜಾಜ್ ಕಂಪನಿಯ ಹಮಾರಾ ಬಜಾಜ್, ಜಲಪಾತದಲ್ಲಿ ಸ್ನಾನ ಮಾಡುವ ಲಿರಿಲ್ ಸೋಪ್‌ನ ಜಾಹೀರಾತು, ಎಂಆರ್‌ಎಫ್‌ನ ಮಸಲ್ ಮ್ಯಾನ್, ಸಫ್‌ರ್‍ನ ಲಲಿತಾಜಿ, ಕಾಮಸೂತ್ರದ ಪಾತ್ರಗಳು ಪದಮ್ಸೀ ಅವರಿಗೆ ಬಹುವಾಗಿ ಖ್ಯಾತಿ ತಂದುಕೊಟ್ಟಿದ್ದವು.
ಇನ್ನು ಆಸ್ಕರ್ ಪ್ರಶಸ್ತಿ ಪುರಸ್ಕೃತ ಡೇವಿಡ್ ಅಟೆನ್‌ಬರೋ ಅವರ ಗಾಂಧೀ ಚಿತ್ರದಲ್ಲಿ ಪದಮ್ಸೀ ಅವರು ಜಿನ್ನಾರ ಪಾತ್ರ ನಿರ್ವಹಿಸಿದ್ದರು. ಇವರ ಸೇವೆಯನ್ನು ಗಮನಿಸಿ 2000ನೇ ಇಸವಿಯಲ್ಲಿ ಪದ್ಮಶ್ರೀ ಗೌರವ ನೀಡಿ ಪುರಸ್ಕರಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.