‘ಪುಟ್ನಂಜ’ ಚಿತ್ರದಿಂದ ದೊಡ್ಡ ಸಂಭಾವನೆ; ಕಷ್ಟದ ದಿನಗಳನ್ನು ನೆನಪಿಸಿಕೊಂಡು ಮಕ್ಕಳ ಬೆಳವಣಿಗೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಉಮಾಶ್ರೀ!

Published : Nov 04, 2026, 09:56 AM IST
actress umashree 75 thousand remuneration savings for children

ಸಾರಾಂಶ

ಚಿತ್ರರಂಗದಲ್ಲಿ ದುಡಿದು ಕೈತುಂಬಾ ಸಂಭಾವನೆ ಸಿಕ್ಕಾಗ ಹೊಸ ಬಟ್ಟೆ, ಆಭರಣ ಖರೀದಿಸಬೇಕು, ಇಷ್ಟದ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬ ಆಸೆ ಸಹಜ. ಆದರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಹಣಕಾಸಿನ ವಿಚಾರದಲ್ಲಿನ ಶಿಸ್ತು ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಗಮನ ಸೆಳೆಯುತ್ತದೆ.

ಚಿತ್ರರಂಗದಲ್ಲಿ ದುಡಿದು ಕೈತುಂಬಾ ಸಂಭಾವನೆ ಸಿಕ್ಕಾಗ ಹೊಸ ಬಟ್ಟೆ, ಆಭರಣ ಖರೀದಿಸಬೇಕು, ಇಷ್ಟದ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬ ಆಸೆ ಸಹಜ. ಆದರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಹಣಕಾಸಿನ ವಿಚಾರದಲ್ಲಿನ ಶಿಸ್ತು ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ಕಾಳಜಿ ನಿಜಕ್ಕೂ ಗಮನ ಸೆಳೆಯುತ್ತದೆ. ತಾವು ದುಡಿದು ಸಂಪಾದಿಸಿದ ಹಣವನ್ನು ಸ್ವಂತ ಖರ್ಚಿಗೆ ಬಳಸುವುದಕ್ಕಿಂತ ಮಕ್ಕಳ ಭವಿಷ್ಯಕ್ಕಾಗಿ ಕೂಡಿಡುತ್ತಿದ್ದ ಸಂಗತಿಯನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

'ಪುಟ್ನಂಜ' ಚಿತ್ರಕ್ಕೆ ಸಿಕ್ಕಿತ್ತು 75 ಸಾವಿರ ರೂ. ಸಂಭಾವನೆ!

ಸಂದರ್ಶನದಲ್ಲಿ ನಿರೂಪಕರು, ಕೈತುಂಬಾ ಸಂಭಾವನೆ ಸಿಕ್ಕಾಗ ಅದನ್ನು ಖರ್ಚು ಮಾಡುವ ಖುಷಿ ಹೇಗಿರುತ್ತದೆ ಎಂದು ಉಮಾಶ್ರೀ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ತಮಗೆ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿದ್ದು 'ಪುಟ್ನಂಜ' ಚಿತ್ರದ ಸಂದರ್ಭದಲ್ಲಿ ಎಂದು ನೆನಪಿಸಿಕೊಂಡಿದ್ದಾರೆ. ಆ ಚಿತ್ರಕ್ಕಾಗಿ ಅವರಿಗೆ ಒಟ್ಟು 75 ಸಾವಿರ ರೂಪಾಯಿ ಸಂಭಾವನೆ ನೀಡಲಾಗಿತ್ತಂತೆ. ಅಂದು ಅದು ತಮಗೆ ದೊಡ್ಡ ಮೊತ್ತವಾಗಿತ್ತು ಎಂದು ಉಮಾಶ್ರೀ ಹೇಳಿದ್ದಾರೆ. ಆ ಹಣದಲ್ಲಿ ಏನು ಮಾಡಿದ್ದೀರಿ ಎಂಬ ಪ್ರಶ್ನೆಗೆ, ಏನು ಮಾಡಿದೆ ಎಂಬುದು ನೆನಪಿಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆದರೆ ಹಣವನ್ನು ಕೂಡಿಡುವ ಅಭ್ಯಾಸ ಮಾತ್ರ ಮೊದಲಿನಿಂದಲೂ ಇತ್ತು ಎಂಬುದನ್ನು ತಿಳಿಸಿದ್ದಾರೆ.

ಹೊಸ ಬಟ್ಟೆ ಖರೀದಿಸದೆ ಮಕ್ಕಳ ಖಾತೆಗೆ ಹಣ ಜಮೆ!

ತಮ್ಮ ಮಕ್ಕಳನ್ನು ಬೆಳೆಸಿದ ರೀತಿಯ ಬಗ್ಗೆಯೂ ಉಮಾಶ್ರೀ ಮನಬಿಚ್ಚಿ ಮಾತನಾಡಿದ್ದಾರೆ. ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗದಿದ್ದರೂ, ತಮ್ಮ ಕೈಲಾದಷ್ಟು ಚೆನ್ನಾಗಿ ಬೆಳೆಸಿದ್ದೇನೆ ಎಂದು ಹೇಳಿದ್ದಾರೆ. ತಮಗೆ ಬೇಕಾದ ಬಟ್ಟೆಗಳನ್ನು ಖರೀದಿಸುವ ಬದಲು, ಇದ್ದ ಬಟ್ಟೆಗಳನ್ನೇ ಬಳಸಿಕೊಳ್ಳುತ್ತಿದ್ದರಂತೆ. ಹೊಸ ಬಟ್ಟೆ ಖರೀದಿಸಲು ಖರ್ಚಾಗುವ ಹಣವನ್ನು ಮಕ್ಕಳ ಖಾತೆಗೆ ಜಮೆ ಮಾಡುತ್ತಿದ್ದರು. ಈ ಮೂಲಕ ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿಸುವುದಕ್ಕೆ ಆದ್ಯತೆ ನೀಡಿದ್ದರು.

ಮಕ್ಕಳು ಚಿಕ್ಕವರಿದ್ದಾಗಲೇ ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದ್ದಾಗಿ ಅವರು ಹೇಳಿದ್ದಾರೆ. ಒಂದು ಬಟ್ಟೆ ಖರೀದಿಸಿದರೆ ಇಷ್ಟು ಹಣ ಖರ್ಚಾಗುತ್ತದೆ, ಅದನ್ನು ಖರೀದಿಸದೆ ಉಳಿಸಿದರೆ ಆ ಹಣವನ್ನು ನಿಮ್ಮ ಖಾತೆಗೆ ಹಾಕಬಹುದು ಎಂದು ಮಕ್ಕಳಿಗೆ ತಿಳಿಸುತ್ತಿದ್ದರಂತೆ.

ಮಗನಿಗೆ 15ನೇ ವಯಸ್ಸಿನಿಂದಲೇ ಉಳಿತಾಯದ ಪಾಠ!

ಮಕ್ಕಳಲ್ಲಿ ಉಳಿತಾಯದ ಗುಣ ಬೆಳೆಸುವ ಬಗ್ಗೆ ಮಾತನಾಡಿದ ಉಮಾಶ್ರೀ, ತಮ್ಮ ಮಗ ಈ ಅಭ್ಯಾಸವನ್ನು ಚೆನ್ನಾಗಿ ರೂಢಿಸಿಕೊಂಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಣ ಮಾತ್ರವಲ್ಲದೆ, ಯಾವುದೇ ವಸ್ತುವಾಗಲಿ ಅಥವಾ ಆಸ್ತಿಯಾಗಲಿ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂಬುದನ್ನು ಮಗ ಕಲಿತಿದ್ದಾನೆ. ಚಿಕ್ಕ ವಯಸ್ಸಿನಿಂದಲೇ ಈ ಗುಣವನ್ನು ಬೆಳೆಸಿದ್ದರಿಂದ ಆತ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಯುತ್ತಾನೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.ಮಗಳಿಗಿಂತ ಮಗ ಹಣ ಮತ್ತು ವಸ್ತುಗಳನ್ನು ಉಳಿಸುವ ವಿಚಾರದಲ್ಲಿ ಹೆಚ್ಚು ಜಾಗರೂಕನಾಗಿದ್ದಾನೆ ಎಂದೂ ಅವರು ತಿಳಿಸಿದ್ದಾರೆ.

ಮಗಳಿಗೆ ಬಾಲ್ಯದಲ್ಲಿ ಸಿಗದಿದ್ದ ಸಂತೋಷವನ್ನೆಲ್ಲ ಈಗ ನೀಡಬೇಕು!

ಮಗನಿಗೆ ಉಳಿತಾಯದ ಗುಣ ಕಲಿಸಿದರೆ, ಮಗಳ ವಿಚಾರದಲ್ಲಿ ತಮ್ಮ ಮನಸ್ಥಿತಿ ಸ್ವಲ್ಪ ವಿಭಿನ್ನವಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ. ಬಾಲ್ಯದಲ್ಲಿ ತಮಗೆ ಕೆಲವು ಆಸೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ತಮಗೆ ಸಿಗದಿದ್ದ ಬಟ್ಟೆ, ಆಹಾರ ಮತ್ತು ಇತರ ಸಣ್ಣಪುಟ್ಟ ಸಂತೋಷಗಳನ್ನು ಈಗ ಮಗಳ ಮೂಲಕ ಅನುಭವಿಸಬೇಕು ಎಂಬ ಆಸೆ ಇದೆ ಎಂದು ತಿಳಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ತನಗೆ ಏನು ಸಿಗಲಿಲ್ಲವೋ ಅದನ್ನು ಈಗ ಮಗಳಿಗೆ ಕೊಡಬೇಕು, ಆಗ ತಿನ್ನಲು ಸಾಧ್ಯವಾಗದಿದ್ದ ಆಹಾರವನ್ನು ಈಗ ತಿನ್ನಬೇಕು, ಆಗ ಖರೀದಿಸಲು ಸಾಧ್ಯವಾಗದ ವಸ್ತುಗಳನ್ನು ಈಗ ಖರೀದಿಸಬೇಕು ಎಂಬ ಮನೋಭಾವ ಮಗಳಲ್ಲಿದೆ ಎಂದು ನಗುತ್ತಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಡುಗಡೆ ಹೊತ್ತಲ್ಲಿ 'ರಾಮಾಯಣ' ಚಿತ್ರತಂಡಕ್ಕೆ ನೆಮ್ಮದಿ; ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ಮಧ್ಯಂತರ ಆದೇಶ ಜಾರಿ
'ಮತ್ತೆ ರಾಮಾಯಣ ಯಾಕೆ?' ಭಾರತದಲ್ಲಿ ಕೇಳಿಬರುತ್ತಿರುವ ಪ್ರಶ್ನೆಗೆ 'ಅವತಾರ್', 'ದಿ ಒಡಿಸ್ಸಿ' ಸಿನಿಮಾಗಳ ಉದಾಹರಣೆ ಕೊಟ್ಟ ನಿರ್ಮಾಪಕ!