
ಕನ್ನಡ ಚಿತ್ರರಂಗದಲ್ಲಿ ದೊಡ್ಡ ತಾರೆಯರಿಲ್ಲದ ಸಿನಿಮಾವೊಂದು ಬಾಕ್ಸ್‌ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಅದುವೇ ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’. ಸೆಪ್ಟೆಂಬರ್ 25 ರಂದು ಬಿಡುಗಡೆಯಾದ ಈ ಸಿನಿಮಾ ಈಗ 150 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.
ಸಿನಿಮಾ ಬಿಗ್ ಸಕ್ಸಸ್ ಬೆನ್ನಲ್ಲೇ ದೊಡ್ಡ ದೊಡ್ಡ ಕಲಾವಿದರಲ್ಲೇ ಚಿತ್ರತಂಡವನ್ನು ಅಭಿನಂದಿಸುತ್ತಿದ್ದಾರೆ. ಅಂತೆಯೇ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಇತ್ತೀಚೆಗೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನ್ನಾಡಿದ್ದರು. ಅದು ಎಲ್ಲಕಡೆ ಸುದ್ದಿಯಾಗಿತ್ತು. ಅಷ್ಟೇ ಅಲ್ಲ, ರಶ್ಮಿಕಾ ಅವರು ಪ್ರೇಮದ ಊರಲಿ ಸಿನಿಮಾ ನಾಯಕಿ ತಪಸ್ವಿನಿ ಪೂಣಚ್ಚ ಅವರಿಗೆ ಖುದ್ದು ಕಾಲ್ ಮಾಡಿರೋದೂ ಗೊತ್ತೇ ಇದೆ. ಇದೀಗ ತಪಸ್ವಿನಿ ಪೂಣಚ್ಚ ಕಾಲ್ ಮಾಡಿದಾಗ ತಮಗೆ ಆಗಿರುವ ಅನುಭವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾವೊಂದು ಬೇರೆ ರಾಜ್ಯದಲ್ಲಿ, ದೇಶಾದ್ಯಂತ ಹೌಸ್ ಫುಲ್ ಆಗಿ ವಿದೇಶದಲ್ಲಿ ಓಡುತ್ತಿರೋದು, ಅದು ಕೂಡ ಕನ್ನಡದಲ್ಲಿ ಓಡುತ್ತಿದೆ ಅಂದರೆ ನಮಗೆ ಅದು ಹೆಮ್ಮೆಯ ಸಂದರ್ಭ. ರಶ್ಮಿಕಾ ಮಂದಣ್ಣ ಕಾಲ್ ಮಾಡಿದಾಗ ತುಂಬಾನೇ ಖುಷಿ ಆಯಿತು. ಯಾಕೆಂದರೆ ನಾವೆಲ್ಲ ಒಂದೇ ಫ್ಯಾಮಿಲಿ. ಇದೊಂದು ಚಿಕ್ಕ ಕ್ಷೇತ್ರ. ಹೇಗೋ ಒಮ್ಮೆ ಒಟ್ಟಿಗೆ ಸೇರಿಬಿಡುತ್ತೇವೆ.
ಅವರು ಫೋನ್ ಮಾಡಿದಾಗ ನನಗೆ ತುಂಬಾ ಖುಷಿ ಆಯಿತು. ಅದಕ್ಕೆ ಕಾರಣ ಕೂಡ ಇದೆ. ಯಾಕೆಂದರೆ ನನಗೆ ಕೂರ್ಗಿನಿಂದ ಯಾರೂ ಕಾಲ್ ಮಾಡುತ್ತಿರಲಿಲ್ಲ.ಸಿನಿಮಾ ಅಂತಾ ಬಂದರೆ ನಾರ್ಥ್ ಕರ್ನಾಟಕದಲ್ಲಿ ಇರೋ ಥರಾ ಫ್ಯಾನ್ಸ್ ನಮ್ಮ ಭಾಗದಲ್ಲಿ ಇರೋದಿಲ್ಲ. ಸಿನಿಮಾದಲ್ಲಿ ಮೊದಲಿನಿಂದಲೂ ಇದ್ದಾರೆ. ಆದರೆ ನನಗೆ ಕೂರ್ಗಿನಿಂದ ಸಪೋರ್ಟ್ ಸಿಕ್ಕಿರಲಿಲ್ಲ. ಕೂರ್ಗ್ ಜನರಿಂದ ಸಿಕ್ಕಿರಲಿಲ್ಲ. ಅದೇ ಸಂದರ್ಭದಲ್ಲಿ ಅವರಿಂದ ಫೋನ್ ಬಂದಾಗ ತುಂಬಾನೇ ಖುಷಿ ಆಯಿತು. ನಿಮಗೆ ಒಬ್ಬರು ಕಾಲ್ ಮಾಡಿ ದೇವರು ಒಳ್ಳೆಯದು ಮಾಡಲಿ ಎಂದಾಗ ತುಂಬಾನೇ ಖುಷಿ ಆಗುತ್ತಲ್ವಾ? ಹಾಗೆಯೇ ಆಯಿತು.
ಈಗ ಎಲ್ಲವೂ ಕೂಡ ಗ್ರಾಫ್ ಇದ್ದ ಹಾಗೆ. ಸಿನಿಮಾ ಇಂಡಸ್ಟ್ರಿ ಇರಬಹುದು, ಬ್ಯುಸಿನೆಸ್ ಇರಬಹುದು. ಕೆಲರು ಫೀಕ್ ಟೈಮ್ ಅಲ್ಲಿರುತ್ತಾರೆ. ಅದು ಅವರ ಲಕ್ ಇರಬಹುದು. ಕೆಲವೊಮ್ಮೆ ಡೌನ್‌ಫಾಲ್ ಆಗುತ್ತದೆ. ನನ್ನ ಪ್ರಕಾರ ಒಂದು ಯಶಸ್ಸನ್ನು ಒಳ್ಳೆಯ ರೀತಿಯಲ್ಲಿ ಅನುಭವಿಸಬೇಕು ಅಂದರೆ.. ಸಕ್ಸಸ್ ಗಿಂತ ಮೊದಲು ಫೇಲ್ ಆಗಬೇಕು. ಆಗ ಮಾತ್ರ ಯಶಸ್ಸಿನ ನಿಜವಾದ ಫೀಲ್ ಬರುತ್ತದೆ. ಸೋತಾಗ ಟೀಕಿಸೋರು ಎಲ್ಲರೂ ಇದ್ದಾರೆ. ಈಗಲೂ ಫೋನ್ ಮಾಡಿ ಕೆಲವರು ಅದೇ ರೀತಿ ಮಾತಾಡುತ್ತಾರೆ ಎಂದರು.
ನಟಿ ತಪಸ್ವಿನಿ ಪೂಣಚ್ಚ ಈಗ ಮತ್ತೊಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'MR ಜಾಕ್' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. 'MR ಜಾಕ್' ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ಡಿಸೆಂಬರ್ 4ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.