ದಿ ವಿಲನ್'ಗೆ ನಾಯಕಿಯಾಗಿ ತಾಪ್ಸಿ ಪನ್ನು?

By Suvarna Web DeskFirst Published May 5, 2017, 5:10 AM IST
Highlights

ಸುದೀಪ್ ಅಭಿನಯದ ದಿ ವಿಲನ್ ಚಿತ್ರದಲ್ಲಿ ನಾಯಕಿಯಾಗಿ ತಾಪಸಿ ಪನ್ನು ಅಭಿನಯಿಸ್ತಿದಾರಾ? ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ ಚಿತ್ರತಂಡ. ಚಿತ್ರದ ಕ್ಯಾಪ್ಟನ್ ಪ್ರೇಮ್ ನಾಯಕಿಯರ ವಿಚಾರದಲ್ಲಿ ದೊಡ್ಡ ದೊಡ್ಡ ಹೆಸರುಗಳನ್ನು ತೆಗೆದುಕೊಂಡಿದ್ದಾರೆ.

ರೋಬೋಟ್ 2 ಚಿತ್ರದ ಆ್ಮಮಿ ಜಾಕ್ಸನ್.?

ಇದು ಸುಳ್ಳೋ, ಸತ್ಯವೋ ಗೊತ್ತಿಲ್ಲ. ಸುದ್ದಿ ಹರಿದಾಡ್ತಾ ಇರೋದು ಮಾತ್ರ ಸತ್ಯ. ಆ್ಯಮಿ ಡೇಟ್ ಸಿಗೋದೇ ಕಷ್ಟ.  

ಸುದೀಪ್'ಗೆ ತಾಪ್ಸಿ ಪನ್ನು..??

ತಾಪಸಿ ಪನ್ನು ಸೌತಲ್ಲಿ ಆಗಲೇ ಗುರುತಿಸಿಕೊಂಡಿರುವ ನಟಿ. ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿ ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಕನ್ನಡಕ್ಕೆ ಬರಲು ಉತ್ಸಾಹ ತೋರುತ್ತಿದ್ದಾರೆ. ವಿಲನ್ ಗೆ ಹೀರೋಯಿನ್ ಆಗಿ ಬರೋದು ಹೆಚ್ಚು ಕಡಿಮೆ ಕನ್ಫರ್ಮ್ ಆಗಿದೆ. ಸದ್ಯ ಪ್ರೇಮ್ ಟ್ರೇನ್ ನಲ್ಲಿ ಕುಳಿತು ಲೊಕೇಶನ್ ಹಂಟಿಂಗ್ ಗೆ ಹೊರಟಿದ್ದಾರೆ. ಜಾಗಗಳ ಹುಡುಕಾಟ ಮುಗಿದ ನಂತರ ಆ್ಯಮಿ ಜಾಕ್ಸನ್ ಅಥವಾ ತಾಪಸಿನಾ ಇಬ್ಬರಲ್ಲಿ ಒಬ್ಬರು ಪೈನಲ್ ಆಗಲಿದ್ದಾರೆ. ಸುದೀಪ್ ಗೆ ತಾಪಸಿ ಆದರೆ ಶಿವರಾಜ್ ಕುಮಾರ್ ಗೆ ಯಾರು ಆಗ್ತಾರೆ ಅನ್ನೋದು ಕುತೂಹಲದ ಪ್ರಶ್ನೆಯಾಗಿದೆ.

click me!