
ಬಾಲಿವುಡ್ ಬೋಲ್ಡ್ ಆ್ಯಂಡ್ ಸ್ಮಾರ್ಟ್ ನಟಿ ತಾಪ್ಸಿ ಪನ್ನು ಸಮಯವಿಲ್ಲದಷ್ಟು ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಟ್ ಸಿನಿಮಾ ಜಗತ್ತಿಗೆ ಕಾಲಿಟ್ಟ ತಾಪ್ಸಿಯನ್ನು ತೆರೆ ಮೇಲೆ ನೋಡಿ ಮೆಚ್ಚಿದ ಜನ ನಿಜ ಜೀವನದಲ್ಲಿ ಪಕ್ಕ ವಾಸ ಮಾಡಲು ಅವಕಾಶ ನೀಡದಂತೆ ಮಾಡಿದ್ದೇಕೆ ಗೊತ್ತಾ?
ಸಿನಿ ಜಗತ್ತಿನ ದೊಡ್ಡ ಆಸೆ ಹೊತ್ತು ಬಂದ ತಾಪ್ಸಿ ಯಾರ ಸಹಾಯವಿಲ್ಲದೆ ಫೌಂಡೇಷನ್ ಕಟ್ಟಿಕೊಂಡವರು. ಮೊದಲ ಸಿನಿಮಾ ಮಾಡಿದ ನಂತರ ಮುಂಬೈನಲ್ಲಿ ಮನೆ ಮಾಡುವುದಾಗಿ ಪ್ಲಾನ್ ಮಾಡುವಾಗ ಯಾರೊಬ್ಬ ಮುಂಬೈ ನಿವಾಸಿಯೂ ಮನೆ ನೀಡುವುದಿಲ್ಲ. ನೀನೊಬ್ಬ ಒಂಟಿ ಮಹಿಳೆಯೆಂದು ದೂರ ಮಾಡಿದರಂತೆ.
ಸರ್ಜರಿ ಮಾಡಿಸಿಕೊಂಡ ಕೆಜಿಎಫ್ ನಟಿ; ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್!
'ಮುಂಬೈ ಹೆಚ್ಚು ಜನರು ಇರುವ ಸ್ಥಳ. ದೆಹಲಿ ಅಥವಾ ಹೈದ್ರಾಬಾದ್ ಅಷ್ಟು ಆತ್ಮೀಯತೆ ಹೊಂದಿರುವ ಜನರು ಸಿಗುವುದಿಲ್ಲ. ಒಂಟಿಯಾಗಿರುವ ಕಾರಣದಿಂದ ಯಾರೂ ಮನೆ ನೀಡುತ್ತಿರಲಿಲ್ಲ. ಆದರೆ ದೇವರ ದಯೆ ಈಗ ನನ್ನದೇ ಸ್ವಂತ ಮನೆ ಮಾಡಿಕೊಂಡು ಸಹೋದರಿ ಜೊತೆ ವಾಸ ಮಾಡುತ್ತಿದ್ದೇನೆ ' ಎಂದು ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ಹಳೆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.