ಭಟ್ಟರ ಹೊಸ ಸಿನಿಮಾಗೆ ಮಂಗಳೂರು ಬೆಡಗಿ ಸೋನಾಲ್ ಮಾಂಟೇರಿಯಾ ಆಯ್ಕೆ

Published : Jan 09, 2018, 11:25 AM ISTUpdated : Apr 11, 2018, 01:03 PM IST
ಭಟ್ಟರ ಹೊಸ ಸಿನಿಮಾಗೆ ಮಂಗಳೂರು ಬೆಡಗಿ ಸೋನಾಲ್ ಮಾಂಟೇರಿಯಾ ಆಯ್ಕೆ

ಸಾರಾಂಶ

ಮಲ್ಟಿಹೀರೋ ಸಿನಿಮಾಗಳನ್ನು ನಿರ್ದೇಶಿಸುವ ನಿರ್ದೇಶಕರಿರುವ ಹಾಗೆ, ಮಲ್ಟಿ ಹೀರೋಯಿನ್  ಸಿನಿಮಾಗಳ ಎಕ್ಸ್‌ಪರ್ಟ್ ನಿರ್ದೇಶಕರೂ ಅನೇಕರಿದ್ದಾರೆ. ಅವರ ಪೈಕಿ ಮೊದಲ ಸ್ಥಾನ ಯೋಗರಾಜ್ ಭಟ್ಟರಿಗೆ. ಅವರ ಇತ್ತೀಚಿನ ಚಿತ್ರಗಳಲ್ಲಿ ಇಬ್ಬರೋ ಮೂವರೋ ನಾಯಕಿಯರು. ಅಂಥ ಮತ್ತೊಂದು ಸಿನಿಮಾ ಇದೀಗ ತಯಾರಾಗುತ್ತಿದೆ. ಆ ಚಿತ್ರದ ಎರಡನೇ ನಾಯಕಿಯಾಗಿ  ಮಂಗಳೂರಿನ ಸೋನಾಲ್ ಮೊಂಟೇರಿಯೋ  ಆಯ್ಕೆಯಾಗಿದ್ದಾರೆ.

ಬೆಂಗಳೂರು (ಜ.09): ಮಲ್ಟಿಹೀರೋ ಸಿನಿಮಾಗಳನ್ನು ನಿರ್ದೇಶಿಸುವ ನಿರ್ದೇಶಕರಿರುವ ಹಾಗೆ, ಮಲ್ಟಿ ಹೀರೋಯಿನ್  ಸಿನಿಮಾಗಳ ಎಕ್ಸ್‌ಪರ್ಟ್ ನಿರ್ದೇಶಕರೂ ಅನೇಕರಿದ್ದಾರೆ. ಅವರ ಪೈಕಿ ಮೊದಲ ಸ್ಥಾನ ಯೋಗರಾಜ್ ಭಟ್ಟರಿಗೆ. ಅವರ ಇತ್ತೀಚಿನ ಚಿತ್ರಗಳಲ್ಲಿ ಇಬ್ಬರೋ ಮೂವರೋ ನಾಯಕಿಯರು. ಅಂಥ ಮತ್ತೊಂದು ಸಿನಿಮಾ ಇದೀಗ ತಯಾರಾಗುತ್ತಿದೆ. ಆ ಚಿತ್ರದ ಎರಡನೇ ನಾಯಕಿಯಾಗಿ  ಮಂಗಳೂರಿನ ಸೋನಾಲ್ ಮೊಂಟೇರಿಯೋ  ಆಯ್ಕೆಯಾಗಿದ್ದಾರೆ.

ಸೋನಾಲಿಗೆ ನಟನೆ ಹೊಸದಲ್ಲ. ಕನ್ನಡದಲ್ಲಿ ‘ಅಭಿಸಾರಿಕೆ’ ಚಿತ್ರಕ್ಕೂ ನಾಯಕಿಯಾದ ಸೋನಾಲಿ ತುಳು  ಭಾಷೆಯ ‘ಎಕ್ಕ ಸಕ್ಕ’, ‘ಜೈ ತುಳುನಾಡು’ ಚಿತ್ರಗಳ ಮೂಲಕ ನಟಿಯಾಗಿ ಹೆಸರು ಮಾಡಿದವರು. ಪ್ರಥಮ್ ನಟನೆಯ ‘ಎಂಎಲ್‌ಎ’ ಸಿನಿಮಾದಲ್ಲೂ ನಾಯಕಿ ಆಗಿದ್ದಾರೆ.

ಆದರೂ ಆಡಿಷನ್ ಮೂಲಕವೇ ನಿರ್ದೇಶಕ  ಯೋಗರಾಜ್ ಭಟ್ ಅವರು ತಮ್ಮ ಹೊಸ ಚಿತ್ರಕ್ಕೆ ನಾಯಕಿಯಾಗಿ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಸೋನಾಲಿ ‘ಸಾಜನ್ ಚಲೇ ಸಸೂರಾಲ್’ ಚಿತ್ರದ ಮುಂದುವರಿದ ಭಾಗದ ಚಿತ್ರದಲ್ಲೂ ನಟಿಸುತ್ತಿದ್ದಾರಂತೆ. ಹೊಸ ಹೀರೋ ಸಿನಿಮಾ ಆಗಿದ್ದರಿಂದ ಭಟ್ಟರು ಇಬ್ಬರು ನಾಯಕಿಯರನ್ನಿಟ್ಟುಕೊಂಡು ಕತೆ ಹೆಣೆದಿರಬಹುದಾ? ಭಟ್ಟರು ಹಾಗೆಲ್ಲ ಹೇಳುವುದಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮೊದಲು ನನ್ನ ಹನಿಮೂನ್‌ ಆಗಲಿ, ಆಮೇಲೆ ಹೆಂಡ್ತಿ ತಂದೆ ಜೊತೆ ಮಾತಾಡು; ಗಿಲ್ಲಿ ನಟ ಒಪನ್‌ ಟಾಕ್
ಬಿಗ್ ಬಾಸ್ ಮನೆಗಿಂತ ಹೆಚ್ಚು ಸದ್ದು ಮಾಡ್ತಿದೆ ಸೀಕ್ರೆಟ್ ರೂಮ್, ವೀಕ್ಷಕರಿಗೆ ಇಷ್ಟವಾಗ್ತಿದೆ ರಕ್ಷಿತಾ – ಧ್ರುವಂತ್ ಕ್ಯೂಟ್ ಜಗಳ