
ಕೈಯಲ್ಲಿ ಭಾರಿ ದೊಡ್ಡ ಹೀರೋಗಳ ಜೊತೆ ಭಾರಿ ದೊಡ್ಡ ಸಿನಿಮಾಗಳಿದ್ದರೂ ಅಚ್ಚರಿ ಎಂಬಂತೆ ರಶ್ಮಿಕಾ ಮಂದಣ್ಣ ಹೊಸ ನಿರ್ದೇಶಕ ಗೌತಮ್ ಅಯ್ಯರ್ ಪ್ರಥಮ ಪ್ರಯತ್ನಕ್ಕೆ ಎಸ್ ಎಂದಿದ್ದಾರೆ. ಅವರ ಮುಂದಿನ ಚಿತ್ರವನ್ನು ಗೌತಮ್ ಅಯ್ಯರ್ ನಿರ್ದೇಶನ ಮಾಡಲಿದ್ದಾರೆ.
ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕ್ರೈಂ ಬ್ರಾಂಚ್ ಸಬ್ ಇನ್‌ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ‘ಕ್ರೈ ಬ್ರಾಂಚ್ ಸೇರಿದ ಮೇಲೆ ಆಕೆಗೆ ಸಿಗುವ ಮೊದಲ ಕೇಸ್ ಆಕೆ ಜೀವನವನ್ನು ಹೇಗೆ ಬದಲಿಸುತ್ತದೆ ಅನ್ನುವುದು ಈ ಸಿನಿಮಾದ ತಿರುಳು’ ಎನ್ನುತ್ತಾರೆ
ಗೌತಮ್ ಅಯ್ಯರ್. ರಶ್ಮಿಕಾ ಈ ಚಿತ್ರದಲ್ಲಿ ಚೆಸ್ ಪ್ಲೇಯರ್ ಕೂಡ ಹೌದು. ಹಾಗಾಗಿ ಇದೊಂದು ಮೈಂಡ್ ಗೇಮ್ ಚಿತ್ರ ಎನ್ನಲಾಗಿದೆ. ರಶ್ಮಿಕಾ ಈ ಚಿತ್ರದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರೆ. ‘ತಂದೆಯವರಿಗೆ ತಾನು ಪೊಲೀಸ್ ಅಧಿಕಾರಿಯಾಗಿ ನೋಡುವ ಆಸೆ ಇತ್ತು. ಅವರಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದಿದ್ದಾರೆ.
ರಕ್ಷಿತ್ ಶೆಟ್ಟಿ ಪ್ರೋತ್ಸಾಹ: ಇದೇ ಮೊದಲು ನಿರ್ದೇಶನಕ್ಕಿಳಿದಿರುವ ಗೌತಮ್ ಅಯ್ಯರ್ ಈ ಮೊದಲು ರಕ್ಷಿತ್ ಶೆಟ್ಟಿ ಪರಮ್‌ವಾಹ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ‘೭೭೭ ಚಾರ್ಲಿ’ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದ ಈ ಬೆಂಗಳೂರಿನ ಪ್ರತಿಭೆ ಒಂದು ಕತೆಯನ್ನೂ ರೆಡಿ ಮಾಡಿಟ್ಟಿದ್ದರು.
ಒನ್ ಫೈನ್ ಡೇ ಎಲ್ಲವೂ ಸರಿ ಇದೆ ಅನ್ನುವ ಹೊತ್ತಿನಲ್ಲಿ ರಕ್ಷಿತ್ ಅವರಿಗೆ ಹೀಗೊಂದು ಕತೆ ರೆಡಿ ಮಾಡಿದ್ದೀನಿ ಎಂದರು. ರಕ್ಷಿತ್ ಶೆಟ್ಟಿ ತಕ್ಷಣ ರಶ್ಮಿಕಾ ಮಂದಣ್ಣ ಅವರನ್ನು ಕರೆಸಿ ಕತೆ ಹೇಳಿಸಿದರು. ರಶ್ಮಿಕಾಗೆ ಕತೆ ಇಷ್ಟವಾಯಿತು. ನಂತರ ಗೌತಮ್ ಅವರು ರಕ್ಷಿತ್ ಅವರಿಗೂ ಕತೆ ಕೇಳಿಸಿದ್ದಾರೆ. ರಕ್ಷಿತ್ ಅವರಿಗೆ ಕತೆ ಇಷ್ಟವಾಗಿದೆ. ಓಕೆ ಎಂದಿದ್ದಾರೆ. ಹೊಸ ಕತೆ ಶುರುವಾಗಿದ್ದು ಹೀಗೆ. ಆದರೆ ಪರಮ್‌ವಾಹ್ ಈ ಕತೆಯನ್ನು ನಿರ್ಮಿಸುತ್ತಿಲ್ಲ. ನಿರ್ಮಾಪಕರ ಹೆಸರು ಹೇಳುವ ಸಮಯ ಬಂದಿಲ್ಲ ಎನ್ನುತ್ತಾರೆ ಗೌತಮ್. ಇನ್ನು ಕೆಲವೇ ದಿನಗಳಲ್ಲಿ ಟೈಟಲ್ ಮತ್ತು ಪೋಸ್ಟರ್ ಲಾಂಚ್ ಆಗಲಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.