'ಫ್ಯಾಮಿಲಿ ವೀಕ್ನೆಸ್ ಬಳಸಿಕೊಂಡ್ರು': ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ನಟಿ ಪೂನಂ ಕೌರ್ ನೇರ ದಾಳಿ

Published : Oct 11, 2026, 09:00 AM IST
Poonam Kaur

ಸಾರಾಂಶ

ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಂ ಕೌರ್ ಇನ್‌ಸ್ಟಾಗ್ರಾಂನಲ್ಲಿ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಕುಟುಂಬದ ದೌರ್ಬಲ್ಯ ದುರ್ಬಳಕೆ ಮತ್ತು ‘ಮಾ’ ಅಸೋಸಿಯೇಷನ್‌ನ ಮೌನದ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.

ನಟಿ ಪೂನಂ ಕೌರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಆರೋಪ ಮಾಡಿದ್ದಾರೆ. ನಮ್ಮ ಕುಟುಂಬದ ದೌರ್ಬಲ್ಯವನ್ನು ಬಳಸಿಕೊಂಡು ಅವರು ಬಲವಂತವಾಗಿ ಹೇಳಿಕೆಗಳನ್ನು ಕೊಡಿಸಿದ್ದಾರೆ ಎಂದು ಪೂನಂ ಕಿಡಿಕಾರಿದ್ದಾರೆ. ಟಾಲಿವುಡ್ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ನಟಿ ಪೂನಂ ಕೌರ್ ನಡುವಿನ ವಿವಾದ ಮತ್ತೆ ಭುಗಿಲೆದ್ದಿದೆ. ಇಷ್ಟು ದಿನ ಪರೋಕ್ಷವಾಗಿ ಕಾಮೆಂಟ್ ಮಾಡುತ್ತಿದ್ದ ಪೂನಂ, ಇದೀಗ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತ್ರಿವಿಕ್ರಮ್ ಹೆಸರೇಳಿಯೇ ನೇರ ಆರೋಪ ಮಾಡಿದ್ದಾರೆ.

ಪೂನಂ ಕೌರ್ ಹಾಕಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಈಗ ವೈರಲ್ ಆಗುತ್ತಿದೆ. "ತ್ರಿವಿಕ್ರಮ್ ಶ್ರೀನಿವಾಸ್ ನಮ್ಮ ಕುಟುಂಬದ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಬಲವಂತವಾಗಿ ಹೇಳಿಕೆ ಕೊಡಿಸಿದ್ದಾರೆ. ರಾಜಕಾರಣಿಗಳ ಕೆಲಸಗಳಿಗೆ ನಾವು ಜವಾಬ್ದಾರರಲ್ಲ. ಸಮಸ್ಯೆ ಬಂದಾಗ ಓಡಿಹೋಗಿ, ಮತ್ತೆ ಸಹಾಯ ಬೇಕೆಂದಾಗ ನಮ್ಮನ್ನು ಬಳಸಿಕೊಳ್ಳುವುದು ಅವರ ನೀಚ ಬುದ್ಧಿ. 'ಮಾ' (MAA) ಅಸೋಸಿಯೇಷನ್ ಅವರನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಇನ್ನೆಷ್ಟು ಮುಗ್ಧರ ಜೀವನ ನಾಶವಾಗಬೇಕು?" ಎಂದು ಪೂನಂ ಆಕ್ರೋಶ ಹೊರಹಾಕಿದ್ದಾರೆ.

ಅತಿ ದೊಡ್ಡ ಮೋಸ

ತಮ್ಮ ಕುಟುಂಬದ ದೌರ್ಬಲ್ಯವನ್ನು ಅಸ್ತ್ರವಾಗಿ ಬಳಸಿಕೊಂಡು ತ್ರಿವಿಕ್ರಮ್ ಬಲವಂತದ ಹೇಳಿಕೆಗಳನ್ನು ಕೊಡಿಸಿದ್ದಾರೆ ಎಂದು ಪೂನಂ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಕುಟುಂಬದ ಮೂಲಕ ಎಷ್ಟೇ ಹೇಳಿಕೆಗಳನ್ನು ಕೊಡಿಸಿದರೂ ತಾನು ಅದಕ್ಕೆ ಬದ್ಧಳಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜಕಾರಣಿಗಳ ತಪ್ಪುಗಳಿಗೆ ತಮ್ಮ ಕುಟುಂಬ ಉತ್ತರದಾಯಿಯಲ್ಲ ಎಂದಿದ್ದಾರೆ. ಸಮಸ್ಯೆ ಎದುರಾದಾಗ ಜಾಗ ಖಾಲಿ ಮಾಡುವುದು, ಮತ್ತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮನ್ನು ಬಳಸಿಕೊಳ್ಳುವುದು ತ್ರಿವಿಕ್ರಮ್ ಮಾಡಿದ ಅತಿ ದೊಡ್ಡ ಮೋಸ ಎಂದು ಪೂನಂ ಕಿಡಿಕಾರಿದ್ದಾರೆ.

'ಮಾ' ಯಾಕೆ ಪ್ರಶ್ನೆ ಮಾಡುತ್ತಿಲ್ಲ?

ಇನ್ನು ಪೂನಂ ಅವರ ಈ ಮಾತುಗಳು ಈಗ ಫಿಲ್ಮ್‌ನಗರ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಈ ಇಡೀ ವಿವಾದದಲ್ಲಿ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ('ಮಾ') ಮೌನ ವಹಿಸಿರುವುದನ್ನು ಪೂನಂ ಕೌರ್ ತೀವ್ರವಾಗಿ ಖಂಡಿಸಿದ್ದಾರೆ. ತ್ರಿವಿಕ್ರಮ್ ಅವರನ್ನು 'ಮಾ' ಯಾಕೆ ಪ್ರಶ್ನೆ ಮಾಡುತ್ತಿಲ್ಲ? ಇನ್ನೆಷ್ಟು ಜನರ ಜೀವನ ಹಾಳಾಗುವುದನ್ನು ನೀವು ಕಾಯುತ್ತಿದ್ದೀರಿ ಎಂದು ಅವರು ನೇರವಾಗಿ ನಿಲುವಳಿ ಕೇಳಿದ್ದಾರೆ. ಈ ಬಗ್ಗೆ ತ್ರಿವಿಕ್ರಮ್ ಅಥವಾ 'ಮಾ' ಹೇಗೆ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada "ಪ್ರೋಮೋ ನಿಜವಾಗಿದ್ರೆ ಮಾತ್ರ ಕರ್ನಾಟಕ ನಿಮ್ಮನ್ನು ನಂಬುತ್ತೆ"
ಈ ಭಾಷೆಯ ಹುಡುಗರಂದ್ರೆ ನನಗೆ ಇಷ್ಟ, ಮದುವೆಯೂ ಆಗ್ತೀನಿ: ನಟಿ ನಿಧಿ ಕ್ರೇಜಿ ಕಾಮೆಂಟ್ಸ್ ವೈರಲ್