ಕನ್ನಡದಲ್ಲಿ ಇವರೇ ನನ್ನ ನೆಚ್ಚಿನ ನಟ: ದೈವ-ಭೂತಗಳ ಬಗ್ಗೆ ನಟಿ ಪೂಜಾ ಹೆಗ್ಡೆ ಮಾತು

Published : May 02, 2026, 04:32 PM IST
Pooja Hegde

ಸಾರಾಂಶ

ಚಿಕ್ಕಂದಿನಿಂದಲೂ ಭೂತ, ದೈವ ಹಾಗೂ ಆಚರಣೆಗಳನ್ನು ನೋಡುತ್ತಾ ಬೆಳೆದವಳು ನಾನು. ಹೀಗಾಗಿ ನನಗೆ ಅವುಗಳ ಮಹತ್ವ ಗೊತ್ತಿದೆ. ‘ಕಾಂತಾರ’ ಸಿನಿಮಾ ಭೂತ ಹಾಗೂ ದೈವಗಳ ಆರಾಧನೆಯನ್ನು ಇಡೇ ದೇಶಕ್ಕೆ ಪರಿಚಯಿಸಿತು.

‘ನನಗೆ ಕನ್ನಡದಲ್ಲಿ ರಾಜ್‌ ಬಿ ಶೆಟ್ಟಿ ತುಂಬಾ ಇಷ್ಟ. ಅವರು ನನ್ನ ನೆಚ್ಚಿನ ನಟ’. ಹೀಗೆ ಹೇಳಿರುವುದು ಬಹುಭಾಷಾ ನಟಿ ಪೂಜಾ ಹೆಗ್ಡೆ. ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಮಾತನಾಡಿರುವ ಪೂಜಾ, ‘ನನಗೆ ರಾಜ್‌ ಬಿ ಶೆಟ್ಟಿ ಅಭಿನಯ ಇಷ್ಟ. ಅವರು ತುಂಬಾ ಚೆನ್ನಾಗಿ ನಟಿಸುತ್ತಾರೆ. ಇತ್ತೀಚೆಗೆ ‘ಸು ಫ್ರಮ್‌ ಸೋ’ ಸಿನಿಮಾ ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿದೆ. ನನಗೆ ಇಷ್ಟವಾಯಿತು’ ಎಂದಿದ್ದಾರೆ.

‘ಚಿಕ್ಕಂದಿನಿಂದಲೂ ಭೂತ, ದೈವ ಹಾಗೂ ಆಚರಣೆಗಳನ್ನು ನೋಡುತ್ತಾ ಬೆಳೆದವಳು ನಾನು. ಹೀಗಾಗಿ ನನಗೆ ಅವುಗಳ ಮಹತ್ವ ಗೊತ್ತಿದೆ. ‘ಕಾಂತಾರ’ ಸಿನಿಮಾ ಭೂತ ಹಾಗೂ ದೈವಗಳ ಆರಾಧನೆಯನ್ನು ಇಡೇ ದೇಶಕ್ಕೆ ಪರಿಚಯಿಸಿತು. ಉತ್ತರ ಭಾರತದ ಜನ ಕೂಡ ತುಳು ನಾಡಿನ ದೈವಗಳ ಕತೆಗೆ ಕನೆಕ್ಟ್‌ ಆಗಿದ್ದಾರೆ ಎಂದರೆ ಅದಕ್ಕೆ ಕಾರಣ ‘ಕಾಂತಾರ’ ಸಿನಿಮಾ. ನಾನು ಮಂಗಳೂರು ಮೂಲದವಳಾಗಿರುವುದರಿಂದ ‘ಕಾಂತಾರ’ ಸಿನಿಮಾ ನಂತರ ಹಲವರು ನನಗೆ ದೈವ ಹಾಗೂ ಭೂತದ ಬಗ್ಗೆ ಕೇಳುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

ರೋಹನ್ ಮೆಹ್ರಾ ಡೇಟಿಂಗ್ ವದಂತಿ

ನಟಿ ಪೂಜಾ ಹೆಗ್ಡೆ ಇದೀಗ ಬಾಲಿವುಡ್‌ ನಟ ರೋಹನ್‌ ಮೆಹ್ರಾ ನಡುವೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಖ್ಯಾತ ಬಾಲಿವುಡ್‌ ನಟ ವಿನೋದ್‌ ಮೆಹ್ರಾ ಪುತ್ರನಾಗಿರುವ ರೋಹನ್‌ ‘ಬಜಾರ್‌’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ‘ಬಾಜಿರಾವ್‌ ಮಸ್ತಾನಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದರು. ಇದೀಗ ಪೂಜಾ ರೋಹನ್‌ ಜೋಡಿ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿ ಇದ್ದು, ಈ ಬಗ್ಗೆ ಮಾತನಾಡಲು ಪೂಜಾ ಹೆಗ್ಡೆ ನಿರಾಕರಿಸಿದ್ದಾರೆ.

ಇನ್ನೊಂದೆಡೆ ಪೂಜಾ ಹೆಗ್ಡೆ ತನ್ನ ಕುಟುಂಬದ ಮೂಲಸ್ಥಾನವಾದ ಉಡುಪಿ ಜಿಲ್ಲೆ ಕುತ್ಯಾರಿನ ಮೂಲದಬೆಟ್ಟು ನಾಗಬ್ರಹ್ಮಸ್ಥಾನದಲ್ಲಿ ಅದ್ದೂರಿಯಾಗಿ ಢಕ್ಕೆ ಬಲಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ನಟಿ, ‘ಇದು ನಮ್ಮ ಕುಟುಂಬದ ಮೂಲಸ್ಥಾನ. ಬಾಲ್ಯದಲ್ಲಿ ಬೇಸಿಗೆ ರಜೆ ಬಂದಾಗಲೆಲ್ಲ ಇಲ್ಲಿಗೆ ಭೇಟಿ ನೀಡುತ್ತಿದ್ದೆ’ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Malaika Arora :ವಯಸ್ಸಿನ ಬಗ್ಗೆ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ತೀರಾ? ಗಂಡಸರಿಗೊಂದು ನ್ಯಾಯ, ಹೆಂಗಸರಿಗೊಂದು ನ್ಯಾಯವೇ?
Annayya Serial: ಮಾಡಬಾರದ್‌ ಮಾಡೋಕೆ ಹೋಗಿ ಚಟ್ನಿಪುಡಿ ಆದ ಜಿಮ್‌ ಸೀನ; ರೌದ್ರಾವತಾರ ತಾಳಿದ ಮಾರಿಗುಡಿ ಶಿವು