
ಸೀರಿಯಲ್‌ಗಳ ಮೂಲಕ ಮನೆಮಾತಾದ ನಟಿ ಮೃದುಲಾ ವಿಜಯ್. ಇವರ ತಂಗಿ ಪಾರ್ವತಿ ಕೂಡಾ ಪ್ರೇಕ್ಷಕರಿಗೆ ಚಿರಪರಿಚಿತರು. ಪಾರ್ವತಿ ಓಡಿಹೋಗಿ ಮದುವೆಯಾಗಿದ್ದು ಸೀರಿಯಲ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸೀರಿಯಲ್ ಕ್ಯಾಮರಾಮ್ಯಾನ್ ಆಗಿದ್ದ ಅರುಣ್ ಎಂಬುವವರನ್ನು ಪಾರ್ವತಿ ಮದುವೆಯಾಗಿದ್ದರು. ಆದರೆ, ನಂತರ ಅವರಿಬ್ಬರೂ ಬೇರ್ಪಟ್ಟರು. ಈ ಘಟನೆಯ ಬಗ್ಗೆ ಮೃದುಲಾ ಈಗ ಮನಬಿಚ್ಚಿ ಮಾತನಾಡಿದ್ದಾರೆ.
ತಂಗಿ ಮದುವೆ ವಿಚಾರದಲ್ಲಿ ಅತಿ ಹೆಚ್ಚು ಬೈಗುಳ ಕೇಳಿದ್ದು ನಾನೇ. ಆ ದಿನಗಳಲ್ಲಿ ಬಂದ ಕಮೆಂಟ್‌ಗಳು ನನಗೆ ತುಂಬಾ ನೋವು ಕೊಟ್ಟಿದ್ದವು. ಅವಳು ಸೀರಿಯಲ್ ಕ್ಷೇತ್ರಕ್ಕೆ ಬಂದು ಮೂರೇ ತಿಂಗಳಿಗೆ ಈ ಮದುವೆ ನಡೀತು. ಅದು ನನ್ನ ಮದುವೆಗೂ ಮುಂಚೆ. ಅವಳಿಗೆ ಇಂತಹ ಕಮೆಂಟ್‌ಗಳನ್ನ ಹೆಚ್ಚು ಫೇಸ್ ಮಾಡಬೇಕಾಗಿ ಬರಲಿಲ್ಲ. ಆದರೆ, ಕೆಲವು ನಿರ್ದೇಶಕರು, ಕಲಾವಿದರು ಮತ್ತು ಕ್ಯಾಮರಾಮ್ಯಾನ್‌ಗಳು ನಾನೇನೋ ದೊಡ್ಡ ತಪ್ಪು ಮಾಡಿದ ಹಾಗೆ ನನ್ನ ಜೊತೆ ನಡೆದುಕೊಂಡರು.
ಆ ಸಮಯದಲ್ಲಿ ನಾನು ತುಂಬಾ ನೊಂದುಕೊಂಡು ಅತ್ತಿದ್ದೆ. ನಾನು ಮಾಡದ ತಪ್ಪಿಗೆ ಇವ್ರ್ಯಾಕೆ ನನ್ನನ್ನು ಹೀಗೆ ಆಡಿಕೊಳ್ಳುತ್ತಿದ್ದಾರೆ ಅಂತ ನನಗೆ ನಾನೇ ಹಲವು ಬಾರಿ ಕೇಳಿಕೊಂಡಿದ್ದೇನೆ ಎಂದು ಮೃದುಲಾ ತಮ್ಮ ನೋವನ್ನು ಹಂಚಿಕೊಂಡರು. ಆ ಘಟನೆ ಆದಮೇಲೆ, ಒಬ್ಬರು ನನ್ನ ಹತ್ತಿರ ಬಂದು, 'ಮದುವೆ ಎಲ್ಲಾ ಆಯ್ತಲ್ಲ, ಯಾವಾಗ ಟ್ರೀಟ್ ಕೊಡ್ತೀರಾ?' ಅಂತ ಕೇಳಿದ್ರು. 'ಯಾರ ಮದುವೆ ಆಯ್ತು?' ಅಂತ ನಾನು ಕೇಳಿದೆ.
ಅದಕ್ಕೆ ಅವರು, 'ನಿಮ್ಮ ಕುಟುಂಬದಲ್ಲೇ ಮದುವೆ ನಡೆದಿದೆಯಲ್ಲ' ಅಂದ್ರು. ಆ ಸಮಯದಲ್ಲಿ ನಾನು ನನ್ನ ತಂಗಿ ಜೊತೆ ಮಾತನ್ನೂ ಆಡುತ್ತಿರಲಿಲ್ಲ. ನಡೆದ ಘಟನೆ ಮತ್ತು ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಆದರೂ ನನ್ನ ಬಳಿ ಬಂದು ಆ ರೀತಿ ಪ್ರಶ್ನೆ ಕೇಳಿದರು. ಕೊನೆಗೆ ಪಾರ್ವತಿ ಆ ಸಂಬಂಧವನ್ನು ಮುರಿದುಕೊಂಡು ನಮ್ಮ ಮನೆಗೆ ವಾಪಸ್ ಬಂದಾಗ, ಅವಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿತ್ತು. ಆಗ ನಾವು ಅವಳ ಜೊತೆ ನಿಂತೆವು ಎಂದು ಮೃದುಲಾ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.