
ಸಿನಿಮಾ ಪ್ರಚಾರದ ವೇಳೆ ನಟಿ ಕಯಾದು ಲೋಹರ್ ಬಾಟಲಿಗೇ ಬಾಯಿ ಹಾಕಿ ನೀರು ಕುಡಿದ ವಿಡಿಯೋವೊಂದು ವೈರಲ್ ಆಗಿದೆ. ಇದಕ್ಕೆ ಕೆಲವರು 'ಕಾಮನ್ ಸೆನ್ಸ್ ಇಲ್ಲ' ಎಂದು ಟೀಕಿಸಿದರೆ, ಹಲವರು ನಟಿಯ ಬೆಂಬಲಕ್ಕೆ ನಿಂತು, ಇದೊಂದು ಅನಗತ್ಯ ವಿವಾದ ಎಂದಿದ್ದಾರೆ. ಮಲಯಾಳಂ ಪ್ರೇಕ್ಷಕರಿಗೆ ಚಿರಪರಿಚಿತ ಮುಖ ನಟಿ ಕಯಾದು ಲೋಹರ್. ಮೂಲತಃ ಕನ್ನಡದವರಾದ ಇವರು, ವಿನಯನ್ ನಿರ್ದೇಶನದ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟರು.
ಆ ಚಿತ್ರದಲ್ಲಿ ಅವರು ನಿರ್ವಹಿಸಿದ 'ನಂಗೇಲಿ' ಪಾತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು. ನಂತರ 'ಡ್ರ್ಯಾಗನ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಕಯಾದು, ಸದ್ಯ 'ಪಲ್ಲಿಚಟ್ಟಂಬಿ' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಟೊವಿನೋ ಥಾಮಸ್ ನಾಯಕರಾಗಿರುವ ಈ ಸಿನಿಮಾ ನಾಳೆ ವಿಷು ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ. ಇದರ ನಡುವೆಯೇ, ಕಯಾದು ಒಂದು ವಿವಾದದ ಮೂಲಕ ಸುದ್ದಿಯಾಗಿದ್ದಾರೆ.
'ಪಲ್ಲಿಚಟ್ಟಂಬಿ' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಕಯಾದು ಭಾಗವಹಿಸಿದ್ದರು. ಈ ವೇಳೆ ಅವರು ನೀರು ಕುಡಿಯುತ್ತಿರುವ ವಿಡಿಯೋ ಒಂದು ಈಗ ಟೀಕೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಕಯಾದು ಬಾಟಲಿಗೇ ಬಾಯಿ ಹಾಕಿ ನೀರು ಕುಡಿಯುತ್ತಾರೆ. ಅದೇ ವಿಡಿಯೋದಲ್ಲಿ ನಟ ಟೊವಿನೋ ಥಾಮಸ್ ಕೂಡ ನೀರು ಕುಡಿಯುತ್ತಿದ್ದು, ಅವರು ಬಾಟಲಿಯನ್ನು ಬಾಯಿಗೆ ತಾಗಿಸದೆ, ಮೇಲಿನಿಂದ ನೀರು ಸುರಿದುಕೊಳ್ಳುತ್ತಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಯಾದು ಅವರನ್ನು ಟೀಕಿಸಲು ಆರಂಭಿಸಿದ್ದಾರೆ. "ಇವಳಿಗೆ ಲುಕ್ ಮಾತ್ರ ಇದೆ, ಸಿವಿಕ್ ಸೆನ್ಸ್ ಇಲ್ವಾ?" ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆದರೆ, ಈ ಟೀಕೆಗಳ ಬೆನ್ನಲ್ಲೇ ಅನೇಕರು ಕಯಾದು ಬೆಂಬಲಕ್ಕೆ ನಿಂತಿದ್ದಾರೆ. "ಇದೆಲ್ಲಾ ಒಂದು ದೊಡ್ಡ ವಿಷಯವೇ? ಆ ಬಾಟಲಿ ನೀರನ್ನು ಅವರು ಬೇರೆಯವರಿಗೆ ಕೊಟ್ಟಿಲ್ಲ. ಹಾಗಿದ್ದ ಮೇಲೆ ಈ ಅನಗತ್ಯ ಟೀಕೆಗಳು ಯಾಕೆ?" ಎಂದು ಪ್ರಶ್ನಿಸಿದ್ದಾರೆ.
"ಬಹುಶಃ ಅವರು ಲಿಪ್‌ಸ್ಟಿಕ್ ಹಾಕಿರೋದ್ರಿಂದ ಹಾಗೆ ನೀರು ಕುಡಿದಿರಬಹುದು. ಇಂತಹ ಸಣ್ಣ ವಿಷಯವನ್ನು ಅರ್ಥಮಾಡಿಕೊಳ್ಳದೆ ದೊಡ್ಡದು ಮಾಡಬೇಕಾ?" ಎಂದು ಮತ್ತೊಬ್ಬರು ಕಮೆಂಟ್ ಮೂಲಕ ಸಮರ್ಥಿಸಿಕೊಂಡಿದ್ದಾರೆ. ನೀರು ಕುಡಿಯುವುದಕ್ಕೂ ಸಿವಿಕ್ ಸೆನ್ಸ್ ಬೇಕಾ ಎಂದು ಹಲವರು ಮರುಪ್ರಶ್ನಿಸಿದ್ದಾರೆ. ಡಿಜೋ ಜೋಸ್ ಆ್ಯಂಟನಿ ನಿರ್ದೇಶನದ 'ಪಲ್ಲಿಚಟ್ಟಂಬಿ' ಕಯಾದು ನಟನೆಯ ಎರಡನೇ ಮಲಯಾಳಂ ಚಿತ್ರ. 1950-60ರ ದಶಕದಲ್ಲಿ ವಲಸೆ ಬಂದ ರೈತರ ಜೀವನವನ್ನು ಹೇಳುವ ಪೀರಿಯಡ್ ಡ್ರಾಮಾ ಥ್ರಿಲ್ಲರ್ ಇದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.