
ಬಾಲ್ಯದಿಂದಲೂ ಸಾಕಷ್ಟುಕಷ್ಟದಿಂದಲೇ ಬಂದಿದ್ದ ಅವರ ಬಗ್ಗೆ ಸಿನಿಮಾ ಮಾಡಬೇಕು ಎಂದು ಸಾಕಷ್ಟುಮಂದಿ ಮುಂದೆ ಬಂದ್ದರು.
ಕಂಗನಾ ಏಕೆ ದೊಡ್ಡ ಹೀರೋಗಳ ಸಿನಿಮಾದಲ್ಲಿ ನಟಿಸೋದಿಲ್ಲ?
ಬಾಲಿವುಡ್ ಅಂಗಳವೇ ಅವಳ ಮನೆ ಬಾಗಿಲಿಗೆ ಹೋಗಿ ಬಂತು. ಈಗ ಸ್ವತಃ ದ್ಯುತಿ, ಕಂಗನಾ ರಾಣಾವತ್ ಅವರು ನನ್ನ ಪಾತ್ರ ಮಾಡಿದರೆ ಓಕೆ ಎಂದಿರುವುದು, ಕಂಗನಾ ಅದಕ್ಕೆ ಯಸ್ ಅಂದಿರುವುದು ಕಂಗನಾ ತೆರೆಯ ಮೇಲೆ ದ್ಯುತಿ ಚಂದ್ ಆಗಿ ಓಡುವುದನ್ನು ಪಕ್ಕಾ ಮಾಡಿದೆ.
‘ಜೀವನದಲ್ಲಿ ಸಾಕಷ್ಟುಏಳು-ಬೀಳು, ಅವಮಾನಗಳನ್ನು ಕಂಡು ಬಂದವಳು ನಾನು. ನನ್ನ ಜೀವನ ಕತೆಯನ್ನು ಕೇಳಿದ ಸಾಕಷ್ಟುನಿರ್ದೇಶಕರು, ನಿರ್ಮಾಪಕರು ನನ್ನ ಕುರಿತು ಚಿತ್ರ ಮಾಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಆದರೆ ನನ್ನ ಪಾತ್ರಕ್ಕೆ ಜೀವ ತುಂಬುವ ಶಕ್ತಿ ನನ್ನ ಇಷ್ಟದ ನಟಿ ಕಂಗನಾ ರಾಣಾವತ್‌ಗೆ ಇದೆ. ನನಗೆ ಅವಳೆಂದರೆ ಇಷ್ಟ. ಅವರು ನನ್ನ ಪಾತ್ರ ಮಾಡಿದರೆ ನಾನು ಅನುಮತಿ ನೀಡುವೆ’- ದ್ಯುತಿ ಚಂದ್, ಖ್ಯಾತ ಅಥ್ಲೆಟ್
ಸಾಕಷ್ಟುಕಷ್ಟದಿಂದಲೇ ಬಂದಿದ್ದ ಅವರ ಬಗ್ಗೆ ಸಿನಿಮಾ ಮಾಡಬೇಕು ಎಂದು ಸಾಕಷ್ಟುಮಂದಿ ಮುಂದೆ ಬಂದಿದ್ದಾರೆ.
‘ದ್ಯುತಿ ಚಂದ್, ತಮ್ಮ ಪಾತ್ರದಲ್ಲಿ ನಟಿಸಲು ನಾನು ಶಕ್ತ ಎಂದು ಹೇಳಿದ್ದು ನನಗೆ ತುಂಬಾ ಸಂತೋಷ ನೀಡಿದೆ. ಅವರ ಪಾತ್ರವನ್ನು ನಿಭಾಯಿಸಲು ನಾನು ಸಿದ್ಧಳಿರುವೆ. ಅವರು ಧೈರ್ಯ ಮತ್ತು ಶಕ್ತಿಯ ಪ್ರತೀಕ. ವೃತ್ತಿ ಜೀವನದಲ್ಲಿಯೂ ಸಾಕಷ್ಟುದೊಡ್ಡ ಸಾಧನೆ ಮಾಡಿದ್ದಾರೆ. ಅವಕಾಶ ಸಿಕ್ಕರೆ ಖಂಡಿತಾ ಅವರ ಪಾತ್ರದಲ್ಲಿ ನಾನು ನಟಿಸುವೆ’- ಕಂಗನಾ ರಾಣಾವತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.