ಮಿನುಗುತಾರೆ ಕಲ್ಪನಾ ಲವ್ ಸ್ಟೋರಿ, ದುರಂತ ಸಾವು; ಗೆಳತಿ ಜಯಲಕ್ಷ್ಮಿ ಪಾಟೀಲ್ ಬಿಚ್ಚಿಟ್ಟ ಕರಾಳ ನೆನಪು

Published : Nov 12, 2026, 12:28 PM IST
actress kalpana love story tragic death jayalakshmi patil

ಸಾರಾಂಶ

ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಟಿ ಕಲ್ಪನಾ ಬದುಕು ಮತ್ತು ದುರಂತ ಅಂತ್ಯ ಇಂದಿಗೂ ಚರ್ಚೆಯಾಗುವ ವಿಷಯ. ಇದೀಗ ಕನ್ನಡ ರಂಗಭೂಮಿ, ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಅವರು ಅವರೊಂದಿಗಿನ ಒಡನಾಟ ಮತ್ತುಕೊನೆಯ ದಿನಗಳ ಬಗ್ಗೆ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಟಿ ಕಲ್ಪನಾ ಅವರ ಬದುಕು ಮತ್ತು ದುರಂತ ಅಂತ್ಯ ಇಂದಿಗೂ ಚರ್ಚೆಯಾಗುವ ವಿಷಯ. ಅವರ ವೈಯಕ್ತಿಕ ಬದುಕು, ಪ್ರೇಮ ಸಂಬಂಧ ಹಾಗೂ ಸಾವಿನ ಸುತ್ತಲಿನ ಘಟನೆಗಳ ಬಗ್ಗೆ ಹಲವು ಕಥನಗಳು ಕೇಳಿಬಂದಿವೆ.

ಇದೀಗ ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರರಂಗದ ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಅವರು ಕಲಾಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ಕಲ್ಪನಾ ಅವರೊಂದಿಗಿನ ಒಡನಾಟ ಮತ್ತು ಅವರ ಕೊನೆಯ ದಿನಗಳ ಬಗ್ಗೆ ಕೆಲವು ಭಾವನಾತ್ಮಕ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಭೇಟಿಯಲ್ಲೇ ಅಕ್ಕ-ತಂಗಿಯ ಬಾಂಧವ್ಯ

ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಟಿ ಕಲ್ಪನಾ ಅವರ ಪರಿಚಯವಾಯಿತು ಎಂದು ಕಲಾವಿದೆ ನೆನಪಿಸಿಕೊಂಡಿದ್ದಾರೆ. ಮೊದಲ ಭೇಟಿಯಲ್ಲೇ ಕಲ್ಪನಾ ಅವರು, “ನನಗೆ ಒಬ್ಬ ತಂಗಿ ಸಿಕ್ಕಳು” ಎಂದು ಹೇಳಿದ್ದರಂತೆ. ಅದಕ್ಕೆ ಪ್ರತಿಯಾಗಿ ಕಲಾವಿದೆ, “ನನಗೆ ಒಬ್ಬ ಅಣ್ಣ ಸಿಕ್ಕರು” ಎಂದು ಪ್ರತಿಕ್ರಿಯಿಸಿದ್ದರಂತೆ. ಹೀಗೆ ಇಬ್ಬರ ನಡುವೆ ಆತ್ಮೀಯ ಒಡನಾಟ ಬೆಳೆದಿತ್ತು.

ಕಲ್ಪನಾ ಅವರ ಪ್ರೇಮ ಜೀವನದ ಬಗ್ಗೆ ಏನು ಹೇಳಿದರು?

ಸಂದರ್ಶನದಲ್ಲಿ ಕಲಾವಿದೆ, ಕಲ್ಪನಾ ಮತ್ತು ಎನ್. ಬಸವರಾಜ್ ಅವರ ನಡುವಿನ ಸಂಬಂಧದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಇಬ್ಬರ ನಡುವೆ ನಡೆದ ಕೆಲವು ಘಟನೆಗಳು ತಮಗೆ ಆಘಾತ ಉಂಟುಮಾಡಿದ್ದವು. ಒಂದು ಸಂದರ್ಭದಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದನ್ನೂ ತಾವು ಕಂಡಿದ್ದಾಗಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕಲ್ಪನಾ ಅವರನ್ನು ನೋಡಿದ ಆ ದೃಶ್ಯ ಮರೆಯಲು ಸಾಧ್ಯವಿಲ್ಲ!

ಗಲಾಟೆಯ ನಂತರ ಕಲ್ಪನಾ ಅವರು ಮೃತಪಟ್ಟ ಸುದ್ದಿ ತಿಳಿದು ಕಲಾವಿದರು ಆಘಾತಕ್ಕೊಳಗಾಗಿದ್ದರು. ಬೆಳಗಾವಿಯ ಆಸ್ಪತ್ರೆಗೆ ತೆರಳಿ ಅವರನ್ನು ನೋಡಿದಾಗಿನ ದೃಶ್ಯ ಇಂದಿಗೂ ಮನಸ್ಸಿನಲ್ಲಿ ಉಳಿದಿದೆ ಎಂದು ಅವರು ಹೇಳಿದ್ದಾರೆ. "ತಾಯಿ ಕೊಟ್ಟಿದ್ದ ಆರೆಂಜ್ ಬಣ್ಣದ ಬಾರ್ಡರ್ ಸೀರೆ ಉಟ್ಟಿದ್ದರು. ದೊಡ್ಡ ಕುಂಕುಮ ಹಚ್ಚಿದ್ದರು, ಲಿಪ್‌ಸ್ಟಿಕ್ ಕೂಡ ಹಾಕಿದ್ದರು. ಹಾಗೆಯೇ ಮಲಗಿದ್ದರು. ಒಂದು ಕಡೆ ರಕ್ತ ಬಂದಿತ್ತು. ಆ ದೃಶ್ಯವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಭಾವುಕರಾಗಿದ್ದಾರೆ.

ಕಲ್ಪನಾ ಅವರ ಸಾವಿನ ನಂತರ ನಾಟಕ ಕಂಪನಿಗೂ ಸಾಕಷ್ಟು ಸಮಸ್ಯೆಗಳು ಎದುರಾದವು. ಹಲವು ಊರುಗಳಲ್ಲಿ ಜನರು ನಾಟಕ ನೋಡಲು ಬರುತ್ತಿರಲಿಲ್ಲ. ಕಲ್ಪನಾ ಅವರ ಸಾವಿಗೆ ಸಂಬಂಧಿಸಿದ ಆರೋಪಗಳು ಕಂಪನಿಯ ಮೇಲೂ ಪರಿಣಾಮ ಬೀರಿದ್ದವು. ಇದರಿಂದ ಮನೆ ಬಾಡಿಗೆ ನೀಡಲು ಕೂಡ ಕಷ್ಟವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಬೆಂಕಿಗೆ ಆಹುತಿಯಾದ ನಾಟಕ ಕಂಪನಿ, ಕಳೆದುಹೋದ ಬದುಕಿನ ಆಸ್ತಿ!

ರಂಗಭೂಮಿಯ ಮತ್ತೊಂದು ಆಘಾತಕಾರಿ ಘಟನೆಯನ್ನೂ ಅವರು ನೆನಪಿಸಿಕೊಂಡಿದ್ದಾರೆ. ಬಾದಾಮಿಯಲ್ಲಿ ನಾಟಕ ಕಂಪನಿಯ ಥಿಯೇಟರ್‌ಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ನಾಟಕದ ಸೆಟ್‌ಗಳು, ಸಾಗುವಾನಿ ಮರದ ಫ್ರೇಮ್‌ಗಳು, ಕಲಾವಿದರ ಬಟ್ಟೆಗಳು, ಆಭರಣಗಳು ಸೇರಿದಂತೆ ಎಲ್ಲವೂ ಬೆಂಕಿಗೆ ಆಹುತಿಯಾಗಿದ್ದವು. ಅಂದು ತಮ್ಮ ಬಳಿ ಉಳಿದಿದ್ದು ಕೇವಲ ಎರಡು ಸೀರೆಗಳು ಮಾತ್ರ ಎಂದು ಹೇಳಿದ್ದಾರೆ. ಕಂಪನಿಯ ವಿದ್ಯುತ್ ವೈರ್‌ನಿಂದ ಬೆಂಕಿ ಸಂಭವಿಸಿರಬಹುದು ಎಂಬ ಆರಂಭಿಕ ಅನುಮಾನಗಳಿದ್ದರೂ, ನಂತರ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಈ ಆರೋಪವನ್ನು ಅವರು ತಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಎಲ್ಲವನ್ನೂ ಕಳೆದುಕೊಂಡರೂ ಕಂಪನಿಯ ಮಾಲೀಕರು ಮತ್ತೆ ಧೈರ್ಯದಿಂದ ನಾಟಕ ಕಂಪನಿಯನ್ನು ಆರಂಭಿಸಿದ್ದರು. ಎರಡು ತಿಂಗಳಲ್ಲೇ ಹೊಸ ಸೆಟ್‌ಗಳನ್ನು ನಿರ್ಮಿಸಿ ನಾಟಕ ಪ್ರದರ್ಶನ ಮುಂದುವರಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟಿ ಶರ್ಮಿಳಾ ಟ್ಯಾಗೋರ್ ಮತಾಂತರ, ಕೊ*ಲೆ ಬೆದರಿಕೆ: ದಶಕಗಳ ಬಳಿಕ ಮೌನ ಮುರಿದ ಪುತ್ರಿ ಸಬಾ ಖಾನ್​
'ನಾನು ಸತ್ತಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸಿದರು' ಯೂಟ್ಯೂಬ್‌ನಲ್ಲಿ ಯಶಸ್ಸು, ಬದುಕಲ್ಲಿ ಸಂಕಷ್ಟ; ಕಣ್ಣೀರಿಟ್ಟ ರೇಖಾ ಅಡುಗೆ