
ಬೆಂಗಳೂರು (ಮಾ. 14): ಪುನೀತ್ ರಾಜ್‌ಕುಮಾರ್ ಹೊಸ ಚಿತ್ರದ ಚಿತ್ರೀಕರಣದ ಮೊದಲ ದಿನವೇ ಚಿತ್ರತಂಡಕ್ಕೆ ಆಘಾತ ಎದುರಾಗಿದೆ. ರಾತ್ರೋರಾತ್ರಿ ನಾಯಕಿ ಬದಲಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ ಚಿತ್ರಕ್ಕೆ ರಾತ್ರೋರಾತ್ರಿ ನಾಯಕಿ ಬದಲಾಗಿದ್ದಾರೆ. ಪ್ರಿಯಾಂಕ ಜವಾಲ್’ಕರ್ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ. ಪ್ರಿಯಾಂಕ ಜವಾಲ್’ಕರ್ ಚಿತ್ರತಂಡದಿಂದ ಆಚೆ ಹೋಗಿದ್ದಾರೆ. ಆ ಜಾಗಕ್ಕೆ ಡಿಂಪಲ್ ಕ್ವೀನ್ ರಚಿತಾರಾಮ್ ಬಲಗಾಲಿಟ್ಟು ಒಳಗೆ ಬಂದಿದ್ದಾರೆ.
‘ಅರ್ಜುನ್ ರೆಡ್ಡಿ’ ಚಿತ್ರ ಖ್ಯಾತಿಯ ವಿಜಯ್ ದೇವರಕೊಂಡ ನಟನೆಯ ‘ಟ್ಯಾಕ್ಸಿ ಡ್ರೈವರ್’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕ ಜವಾಲ್‌ಕರ್ ಆ ಚಿತ್ರ ಬಿಡುಗಡೆಗೆ ಮುನ್ನವೇ ಪುನೀತ್ ಚಿತ್ರಕ್ಕೆ ಆಯ್ಕೆಯಾಗಿದ್ದರು. ತನ್ನ ಆಸೆಯಂತೆಯೇ
ತನಗೆ ಕನ್ನಡದಲ್ಲಿ ಡ್ರೀಮ್ ಪ್ರೊಜೆಕ್ಟ್ ಸಿಕ್ಕಿದೆ ಎಂದು ಹೇಳಿಕೊಂಡು ಖುಷಿಪಟ್ಟಿದ್ದ ಪ್ರಿಯಾಂಕ ಈಗ ಈ ಚಿತ್ರದಿಂದ ಆಚೆ ಹೋಗಿದ್ದಾರೆ. ಯಾವ ಕಾರಣಕ್ಕೆ ನಾಯಕಿ ಬದಲಾದರು ಎಂಬುದು ಸದ್ಯಕ್ಕಂತೂ ನಿಗೂಢ. ನಿರ್ದೇಶಕರನ್ನು
ಕೇಳೋಣವೆಂದರೆ ಅವರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಪ್ರಿಯಾಂಕ ಜಾಗಕ್ಕೆ ತಕ್ಷಣ ರಚಿತಾರಾಮ್ ಬಂದಿದ್ದು.
ಈ ಹಿಂದೆ ಪುನೀತ್ ಜೊತೆ ‘ಚಕ್ರವ್ಯೆಹ’ ಚಿತ್ರದಲ್ಲಿ ನಟಿಸಿದ್ದ ರಚಿತಾ ಈಗ ಈ ಚಿತ್ರದಲ್ಲೂ ಅಪ್ಪು ಜೊತೆಯಾಗಿದ್ದಾರೆ. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ರಾಕ್’ಲೈನ್ ವೆಂಕಟೇಶ್ ಅವರ ನೆಚ್ಚಿನ ಪ್ರೊಜೆಕ್ಟ್ ಇದಾಗಿದ್ದು, ನಿರ್ದೇಶಕರು ಕೇಳಿದ್ದನ್ನೆಲ್ಲಾ ಪೂರೈಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರದ ಮತ್ತೊಂದು ನಾಯಕಿ ಪಾತ್ರಕ್ಕೆ ಸದ್ಯದಲ್ಲೇ ಆಯ್ಕೆ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.