ಅಮ್ಮಂದಿರ ದಿನದಂದೇ ಸಿಎಂ ಆದ ಮಗ ವಿಜಯ್: ತಾಯಿ ಶೋಭಾಗೆ ಇದಕ್ಕಿಂತ ದೊಡ್ಡ ಉಡುಗೊರೆ ಬೇಕೇ?

Published : May 10, 2026, 04:14 PM IST
Thalapathy Vijay

ಸಾರಾಂಶ

ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಟಿವಿಿಕೆ ಪಕ್ಷ 120 ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೇರಿದೆ. ಅಮ್ಮಂದಿರ ದಿನದಂದೇ ನಡೆದ ಈ ಕಾರ್ಯಕ್ರಮ, ತಾಯಿ ಶೋಭಾ ಚಂದ್ರಶೇಖರ್‌ಗೆ ಸಿಕ್ಕ ಅತಿದೊಡ್ಡ ಉಡುಗೊರೆಯಾಗಿದೆ.

ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯವಾಗಿದೆ. ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ 'ದಳಪತಿ' ವಿಜಯ್ ಅಲಿಯಾಸ್ ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು 120 ಶಾಸಕರ ಬೆಂಬಲದೊಂದಿಗೆ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಂದು ಬೆಳಗ್ಗೆ 10 ಗಂಟೆಗೆ ವಿಜಯ್ ಅವರ ಪ್ರಮಾಣವಚನ ಸಮಾರಂಭ ನಡೆಯಿತು.

ಇಂದಿನ ಈ ವಿಶೇಷ ದಿನಕ್ಕೆ ಮತ್ತೊಂದು ವಿಶೇಷವಿದೆ. ಅದೇನಂದ್ರೆ, ಇವತ್ತು 'ಅಮ್ಮಂದಿರ ದಿನ'. ಈ ದಿನದಂದು ತನ್ನ ತಾಯಿ ಶೋಭಾ ಚಂದ್ರಶೇಖರ್ ಅವರಿಗೆ ವಿಜಯ್ ಇದಕ್ಕಿಂತ ದೊಡ್ಡ ಉಡುಗೊರೆ ಕೊಡಲು ಸಾಧ್ಯವಿರಲಿಲ್ಲ. ಇದೇ ವಿಚಾರವಾಗಿ ಲೇಖಕಿ ಮತ್ತು ಸಿನಿಮಾ ವಿಮರ್ಶಕಿ ಅನು ಚಂದ್ರ ಅವರು ಬರೆದ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ಆದ ಆ ಪೋಸ್ಟ್ ಇಲ್ಲಿದೆ ನೋಡಿ

"ಇವತ್ತು ಅಮ್ಮಂದಿರ ದಿನ. ಆದರೆ ಈ ಫೋಟೋದಲ್ಲಿ ಇರೋದು ನನ್ನ ಅಮ್ಮ ಅಲ್ಲ. ಇವರು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ತಾಯಿ. ಬಹುಶಃ ಈ ಬಾರಿಯ ಅಮ್ಮಂದಿರ ದಿನ ಈ ತಾಯಿಗೆ ಅತ್ಯಂತ ವಿಶೇಷವಾಗಿರಬೇಕು. ಯಾಕಂದ್ರೆ, ತಾನು ಹೆತ್ತ ಮಗ ಅಮ್ಮಂದಿರ ದಿನದಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸೋದನ್ನು ನೋಡೋದು ಸಾಮಾನ್ಯ ವಿಷಯವೇ? ಖಂಡಿತ ಅಲ್ಲ.

ಇದು ಜಗತ್ತಿನಲ್ಲೇ ಅತ್ಯಂತ ಅಪರೂಪಕ್ಕೆ ನಡೆಯುವ ಘಟನೆ. ಅದೃಷ್ಟವಶಾತ್ ಆ ಭಾಗ್ಯ ಈ ತಾಯಿಗೆ ಸಿಕ್ಕಿದೆ. ಒಬ್ಬ ತಾಯಿಯ ಜೀವನದಲ್ಲಿ ಮಾತುಗಳಿಗೆ ಮೀರಿದ ಹೆಮ್ಮೆ, ಸಂತೋಷ, ಆನಂದಭಾಷ್ಪ ಎಲ್ಲವೂ ಒಟ್ಟಿಗೆ ಬರುವ ಕ್ಷಣವಿದು. ತ್ರಿಷಾ ಹುಟ್ಟುಹಬ್ಬಕ್ಕೆ ಇಡೀ ರಾಜ್ಯವನ್ನೇ ಉಡುಗೊರೆಯಾಗಿ ಕೊಟ್ಟ ವಿಜಯ್ ಬಗ್ಗೆ ನಾವು ಹಾಡಿ ಹೊಗಳಿದ್ದೆವು. ಈಗ ಅಮ್ಮಂದಿರ ದಿನದಂದು ಅಧಿಕಾರ ಸ್ವೀಕರಿಸಿ, ತನ್ನ ತಾಯಿಯನ್ನು ಹೆಮ್ಮೆಯ ಉತ್ತುಂಗಕ್ಕೆ ಕೊಂಡೊಯ್ದ ವಿಜಯ್ ಅವರನ್ನೂ ನಾವು ಕೊಂಡಾಡಬೇಕು.

ರಾಜಕೀಯವನ್ನು ಬದಿಗಿಟ್ಟು ನೋಡಿದರೂ, ಇದು ಆ ತಾಯಿಯ ಜೀವನದ ಸಾರ್ಥಕ ಕ್ಷಣ. ಹಲವು ವರ್ಷಗಳ ಪ್ರಾರ್ಥನೆ, ತ್ಯಾಗ, ಕಷ್ಟಗಳೆಲ್ಲಾ ಕೊನೆಗೆ ಹೆಮ್ಮೆಯಾಗಿ ಮರಳಿ ಬಂದ ದಿನವಿದು. ಹಾಗಾಗಿ, ಈ ಅಮ್ಮಂದಿರ ದಿನದಂದು ಅತ್ಯಂತ ಸಂತೋಷದಿಂದ ನಗುವ ಹಕ್ಕು ಈ ತಾಯಿಗಿದೆ. ಹೌದು, ಈ ಅಮ್ಮಂದಿರ ದಿನದಂದು ಕೇವಲ ವಿಜಯ್ ರಾಜಕೀಯ ಗೆಲುವನ್ನಷ್ಟೇ ಅಲ್ಲ, ಆ ತಾಯಿಯನ್ನೂ ಸಂಭ್ರಮಿಸಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

9.25 ಕೋಟಿ ರೂ ವಂಚನೆ ಕೇಸ್ ನಡುವೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಬಿಗ್ ಬಾಸ್ ಮಾಜಿ ಸ್ಪರ್ಧಿ?
ದಳಪತಿ ವಿಜಯ್ 13 ವರ್ಷಗಳ ಸೇಡಿಗೆ ಸಿಎಂ ಆಗಿ ಪ್ರತೀಕಾರ; ಕೂರಲು ಅವಕಾಶ ಕೊಡದವರಿಂದ ಸೆಲ್ಯೂಟ್ ಹೊಡೆಸಿಕೊಂಡ ರಿಯಲ್ ಹೀರೋ