ಪುನೀತ್ ಚಾಲೆಂಜ್ ಸ್ವೀಕರಿಸಿದ ಶ್ರೀಮುರುಳಿ

Published : Jun 08, 2018, 09:27 PM ISTUpdated : Jun 08, 2018, 09:28 PM IST
ಪುನೀತ್ ಚಾಲೆಂಜ್ ಸ್ವೀಕರಿಸಿದ ಶ್ರೀಮುರುಳಿ

ಸಾರಾಂಶ

ಪುನೀತ್ ರಾಜಕುಮಾರ್ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಶ್ರೀಮುರುಳಿ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ವಿಡಿಯೋ ಅಪ್ಲೋಡ್ ನಟ ದರ್ಶನ್‌ಗೆ ಚಾಲೆಂಜ್ ನೀಡಿದ ಶ್ರೀಮುರುಳಿ 

ಬೆಂಗಳೂರು(ಜೂ.8): ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ರಾಠೋಡ್ ಅವರು ಪ್ರಾರಂಭಿಸಿದ್ದ #humfittohindiafit ಅಭಿಯಾನ ಭಾರೀ ಯಶಸ್ವಿಯಾಗಿದೆ. ದೇಶದ ಖ್ಯಾತನಾಮರೆಲ್ಲಾ ಈ ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ. 

#humfittohindiafit ಅಭಿಯಾನಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಗಳೂ ಕೂಡ ಸಾಥ್ ನೀಡಿದ್ದಾರೆ. ಸುದೀಪ್, ಯಶ್, ಪುನೀತ್ ರಾಜಕುಮಾರ್ ಸೇರಿದಂತೆ ಹಲವು ನಟರು ಈಗಾಗಲೇ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೀಡಿದ್ದ ಫಿಟ್ನೆಸ್ ಚಾಲೆಂಜ್ ನ್ನು ಸ್ಯಾಂಡಲ್ ವುಡ್ ನಟ ಶ್ರೀಮುರುಳಿ ಸ್ವೀಕರಿಸಿದ್ದಾರೆ. ತಮ್ಮ ಫಿಟ್ನೆಸ್ ವಿಡಿಯೋ ಬಿಡುಗಡೆ ಮಾಡಿರುವ ಮುರುಳಿ, ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೇ ಶ್ರೀಮುರುಳಿ ಮತ್ತೋರ್ವ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದು, ದರ್ಶನ್ ಕಸರತ್ತು ಮಾಡುವ ವಿಡಿಯೋ ನೋಡುವ ಭಾಗ್ಯ ಶೀಘ್ರದಲ್ಲೇ ದೊರೆಯಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!