ನಟಿ ಶ್ರುತಿ ಅವರ ಅಣ್ಣ ಶರಣ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬೈ ಮಿಸ್ ಆಗಿಯೇ ಹೊರತು ಇದೇ ಕನಸು ಕಟ್ಟಿಕೊಂಡವರಲ್ಲ. ಗುಬ್ಬಿ ವೀರಣ್ಣ ಕಂಪನಿಯಲ್ಲಿ ತಾತ ಕೆಲಸ ಮಾಡಿದ್ದು ತಂದೆ ಸ್ವಂತಃ ನಾಟಕ ಕಂಪನಿ ನೆಡೆಸುತ್ತಿದ್ದರು. ಮಗನೂ ಅದೇ ಹಾದಿಯಲ್ಲಿ ನಡೆಯಲಿ ಎಂಬುವುದು ಶರಣ್ ತಂದೆ ಕನಸಾಗಿತ್ತು.
ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!
ಜೀವನದಲ್ಲಿ ಅಪಾರ ಕನಸು ಕಂಡು ಏನೋ ಮಾಡಲು ಹೋಗಿ, ಏನೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸುತ್ತಾರೆ ಶರಣ್. ಸತತ ಹಿಟ್ ಸಿನಿಮಾಗಳನ್ನು ನೀಡುತ್ತಾ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಲಾವಿದ ಶರಣ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ತಂದೆ ನಾಟಕ ಕಂಪನಿ ಹೊಂದಿದ ಕಾರಣ ಸಣ್ಣ ವಯಸ್ಸಿನಲ್ಲಿಯೇ ಶರಣ್ ತಂದೆಯೊಂದಿಗೆ ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದರಂತೆ. ನಾಟಕ ನೋಡಲು ಬಂದಿದ್ದ ನಿರ್ದೇಶಕ ಹಾಗೂ ನಟ ದ್ವಾರಕೀಶ್, ಆ ಚಿಕ್ಕವಯಸ್ಸಿಗೇ ಶರಣ್‌ಗಿದ್ದ ಕಾಮಿಡಿ ಸೆನ್ಸ್ ನೋಡಿ ಕೈಯಿಗೆ 10 ರೂಪಾಯಿ ನೀಡಿದ್ದರಂತೆ. ಆಗ ಕೇವಲ 10 ರೂ. ಪಡೆದು ಸಂತೋಷ ಪಟ್ಟ ನಟನಿಗೆ ಈಗ ಲಕ್ಷಾಂತರ ಸಂಭಾವನೆ ಪಡೆಯುವಂತಾಗಿರುವುದೂ ಸಾಧನೆಯಲ್ಲವೇ?
ಮಂಡ್ಯದ ಸ್ವಾಭಿಮಾನಿ ಜನತೆಗೆ ರಾಕ್ ಲೈನ್ ವೆಂಕಟೇಶ್ ಗಿಫ್ಟ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.