
ಬೆಂಗಳೂರು(ಆ.19): ನೆನಪಿರಲಿ ಪ್ರೇಮ್ ಕನ್ನಡದ ಹ್ಯಾಂಡ್ಸಮ್ ನಾಯಕ ನಟ. ಚಿತ್ರ ಜೀವನದಲ್ಲಿ ಬಂದು ಹೋದ ಸಿನಿಮಾಗಳಲ್ಲೂ ಲವ್ಲಿತನ ಉಳಿಸಿದವರು. ಆದರೆ, ಈಗ ಈ ಸ್ಟಾರ್'ಗೆ 2 ನೇ ಸಲ ಮದುವೆ ಆಗಿದ್ದಾರೆ. ಹಾಗಂತ ಅದು ಅಷ್ಟು ಈಸಿಯಾಗಿ ಧಕ್ಕಿದ್ದಲ್ಲ.
ಹೌದು..! ಇದು ಡ್ರಾಮಾ ಅಲ್ಲ.ಗಿಮಿಕ್ಕೂ ಅಲ್ಲವೇ ಅಲ್ಲ. ಸ್ಟಾರ್ ಸುವರ್ಣ ವಾಹಿನಿಯ ಡಾನ್ಸ್ ಡಾನ್ಸ್ ಜ್ಯೂನಿಯರ್ಸ್ ಷೋದಲ್ಲಿ ನಡೆದಿರುವುದು. ಈ ವೇದಿಕೆಯಲ್ಲಿ ಭಾವನೆಗಳಿಗೆ ಬೆಲೆ ಕೊಡಲಾಗಿದೆ. ಮದುವೆ ಮಾಡುವ ಮೂಲಕ ಸಂಬಂಧಕ್ಕೆ ಮಹತ್ವ ಕೊಡಲಾಗಿದೆ. ಅದಕ್ಕೆ ಸಾಕ್ಷಿ ಪ್ರೇಮ್-ಜ್ಯೋತಿ ಮರು ಮದುವೆ.
ನೆನಪಿರಲಿ ಪ್ರೇಮ್ ಮದುವೆ ಆಗಿದ್ದಾರೆ. ಎರಡನೇ ಸಲ ಎನ್ನುವುದು ವಿಶೇಷ. ಅದೇ ಹುಡ್ಗಿನೇ ಎನ್ನುವುದು ನ್ನೋದು ಇನ್ನೊಂದು ಸತ್ಯ. ರಿಯಲ್ ಲೈಫ್'ನಲ್ಲಿ ಪ್ರೀತಿಸಿ ರಿಜಿಸ್ಟರ್ ಮದುವೆ ಆಗಿದ್ದ ಲವ್ಲಿ ಸ್ಟಾರ್ ಪ್ರೇಮ್, ಈ ಡಾನ್ಸಿಂಗ್ ವೇದಿಕೆಯಲ್ಲಿ ರಿಯಲ್ ಆಗಿಯೇ ಮ್ಯಾರೇಜ್ ಆಗಿದ್ದಾರೆ.
ಸ್ಟಾರ್ ಸುವರ್ಣ ಮಾಹಿನಿಯಲ್ಲಿ ಪ್ರಸಾರವಾಗುವ ಡಾನ್ಸ್ ಡಾನ್ಸ್ ಜ್ಯೂನಿಯರ್ಸ್ ನ ಈ ಷೋದಲ್ಲಿ ಫ್ಯಾಮಿಲಿ ರೌಂಡ್ಸ್ ಆಯೋಜಿಸಲಾಗಿತ್ತು. ಆ ಷೋದಲ್ಲಿಯೇ ಕಾರ್ಯಕ್ರಮದ ಜಡ್ಜ್ ಸ್ಥಾನದಲ್ಲಿದ್ದ ನೆನಪಿರಲಿ ಪ್ರೇಮ್ ಅವರಿಗೆ ಮರು ಮದುವೆ ಆಗುವ ಚಾನ್ಸ್ ಸಿಕ್ಕಿದೆ.
ಈ ಎಪಿಸೋಡ್ ಇಂದು ಮತ್ತು ನಾಳೆ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.
ವಿಡಿಯೋ ಕೃಪ: ಸ್ಟಾರ್ ಸುವರ್ಣ ವಾಹಿನಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.