ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಮಗನಿಂದ ಸ್ಪೆಷಲ್ ಗಿಫ್ಟ್..!

By Web DeskFirst Published Dec 16, 2018, 7:42 PM IST
Highlights

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು [ಭಾನುವಾರ] ತಮ್ಮ 59ನೇ ವಸಂತಕ್ಕೆ ಕಾಲಿಟ್ಟಿದ್ದು, ಇವರಿಗೆ ಪುತ್ರ ನಿಖಿಲ್ ಗೌಡ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಏನದು?

ಬೆಂಗಳೂರು, [ಡಿ. 16]: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು [ಭಾನುವಾರ] ತಮ್ಮ 59ನೇ ಹುಟ್ಟುಹಬ್ಬವನ್ನು ಸರಳವಾಗಿ ಫ್ಯಾಮಿಲಿ ಜೊತೆ ಆಚರಿಸಿಕೊಂಡಿದ್ದಾರೆ.

ಜೆ.ಪಿ.ನಗರದಲ್ಲಿರುವ ಮನೆಯಲ್ಲಿ ಪತ್ನಿ ಅನಿತ ಹಾಗೂ ನಿಖಿಲ್ ಜೊತೆ ಸರಳವಾಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.  ಈ ವೇಳೆ ನಿಖಿಲ್ ಅಪ್ಪನಿಗಾಗಿ ಸೂಪರ್ ಗಿಫ್ಟ್ ನೀಡಿದ್ದಾರೆ.  ತಮ್ಮ ಮುಂದಿನ ಸಿನಿಮಾ ಸೀತಾರಾಮ ಕಲ್ಯಾಣ ಲಿರಿಕಲ್ ಸಾಂಗ್ ರಿಲೀಸ್ ಮಾಡಿ, ವಿಶ್ ಮಾಡಿದರು. 

ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬಹುನಿರೀಕ್ಷಿತ ಚಿತ್ರ ‘ಸೀತಾರಾಮ ಕಲ್ಯಾಣ’ದ ಓ ಜಾನು ಬಿಡುಗಡೆ ಮಾಡಿದ್ದು, ಈ ಹಾಡಿನ ಆರಂಭದಲ್ಲಿ ಎಚ್​ಡಿಕೆಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಓ ಜಾನು’ ಲಿರಿಕಲ್​ ವಿಡಿಯೋ ಯೂ ಟ್ಯೂಬ್​ನಲ್ಲಿ ಬಿಡುಗಡೆಗೊಂಡಿರುವ ಚಿತ್ರದ ಎರಡನೇ ಹಾಡಾಗಿದೆ.

click me!