ಯಶ್ ನಟನೆಗೆ ಮನಸೋತ ಮಹೇಶ್ ಬಾಬು ಪುತ್ರ: ರಾಮಾಯಣಕ್ಕೆ ಕೊಟ್ಟ ರೇಟಿಂಗ್ ಬಗ್ಗೆ ಚರ್ಚೆ!

Published : Nov 14, 2026, 10:15 PM IST
Ramayana movie review

ಸಾರಾಂಶ

ಮಹೇಶ್ ಬಾಬು ಪುತ್ರ ಗೌತಮ್ ಘಟ್ಟಮನೇನಿ ‘ರಾಮಾಯಣ’ ಸಿನಿಮಾಗೆ ರೇಟಿಂಗ್ ನೀಡಿದ್ದಾರೆ. ರಣಬೀರ್ ಕಪೂರ್ ಅಭಿನಯದ ಜೊತೆಗೆ ರಾವಣನ ಪಾತ್ರದಲ್ಲಿ ಯಶ್ ಅವರ ನಟನೆಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ ಸದ್ಯ ಸಿನಿಮಾಗಳಲ್ಲಿ ನಟಿಸುವುದಕ್ಕೂ ಮೊದಲೇ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮ್ಮದೇ ಸ್ಟೈಲ್‌ನಲ್ಲಿ ಸಿನಿಮಾಗಳಿಗೆ ರೇಟಿಂಗ್ ನೀಡುತ್ತಾ, ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿರುವ ಗೌತಮ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರಕ್ಕೆ ಶಾಕಿಂಗ್ ರೇಟಿಂಗ್ ನೀಡಿ ಗಮನ ಸೆಳೆದಿದ್ದ ಅವರು, ಇದೀಗ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಲ್ಲಿಯವರೆಗೆ ಹಲವು ಸಿನಿಮಾಗಳಿಗೆ ಕಡಿಮೆ ರೇಟಿಂಗ್ ನೀಡಿದ್ದ ಗೌತಮ್, ‘ರಾಮಾಯಣ’ ಚಿತ್ರಕ್ಕೆ ಮಾತ್ರ ಬರೋಬ್ಬರಿ 4.5 ರೇಟಿಂಗ್ ನೀಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡಿದ ಬಳಿಕ ತಾನು ಸಂಪೂರ್ಣವಾಗಿ ಬೆರಗಾಗಿರುವುದಾಗಿ ಹೇಳಿ ಚಿತ್ರತಂಡವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಗೌತಮ್ ಅವರ ಈ ವಿಮರ್ಶೆ ಇದೀಗ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.

‘ರಾಮಾಯಣ’ ಸಿನಿಮಾ ವೀಕ್ಷಿಸಿದ ಬಳಿಕ ತಮ್ಮ ಮನಸ್ಸು ಸಂಪೂರ್ಣವಾಗಿ ಕರಗಿಹೋಗಿದೆ. ಚಿತ್ರವನ್ನು ನೋಡಿದ ನಂತರ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಗೌತಮ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾದ ಸಿಜಿಐ, ಕಥೆ, ನಿರ್ದೇಶನ ಹಾಗೂ ಕಲಾವಿದರ ಅಭಿನಯ ಎಲ್ಲವೂ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶ್ ನಟನೆಗೆ ಫಿದಾ ಆದ ಮಹೇಶ್ ಬಾಬು ಪುತ್ರ!

ಇನ್ನು ‘ರಾಮಾಯಣ’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಅಭಿನಯವನ್ನೂ ಗೌತಮ್ ಪ್ರಶಂಸಿಸಿದ್ದಾರೆ. ಆದರೆ, ರಾವಣನ ಪಾತ್ರದಲ್ಲಿ ನಟಿಸಿರುವ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯ ಅವರಿಗೆ ಇನ್ನಷ್ಟು ಇಷ್ಟವಾಗಿದೆಯಂತೆ. ಯಶ್ ಅವರ ನಟನೆ ಅಸಾಧಾರಣ ಹಾಗೂ ಅದ್ಭುತವಾಗಿದೆ ಎಂದು ವಿಶೇಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರತಿಯೊಬ್ಬರೂ ತಪ್ಪದೇ ನೋಡಬೇಕಾದ ಸಿನಿಮಾ ಇದಾಗಿದೆ. ಭಾರತೀಯ ಚಿತ್ರರಂಗದ ಸಾಮರ್ಥ್ಯ ಏನೆಂಬುದನ್ನು ಜಗತ್ತಿಗೆ ತೋರಿಸುವ ನಿಜವಾದ ಸಾಕ್ಷಿ ‘ರಾಮಾಯಣ’ ಎಂದು ಗೌತಮ್ ತಮ್ಮ ವಿಮರ್ಶೆಯಲ್ಲಿ ಬರೆದುಕೊಂಡಿದ್ದಾರೆ. ವಿಶೇಷವಾಗಿ ಯಶ್ ಅವರ ಅಭಿನಯವನ್ನು ಮುಕ್ತಕಂಠದಿಂದ ಹೊಗಳಿರುವುದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಸದ್ಯ ಸಾಮಾನ್ಯವಾಗಿ ಸಿನಿಮಾಗಳಿಗೆ ಕಡಿಮೆ ರೇಟಿಂಗ್ ನೀಡುತ್ತಾ ಸುದ್ದಿಯಾಗುತ್ತಿದ್ದ ಮಹೇಶ್ ಬಾಬು ಪುತ್ರ ಗೌತಮ್, ‘ರಾಮಾಯಣ’ ಚಿತ್ರಕ್ಕೆ 4.5 ರೇಟಿಂಗ್ ನೀಡಿರುವುದು ಕುತೂಹಲ ಮೂಡಿಸಿದೆ. ಅದರಲ್ಲೂ ಯಶ್ ಅವರ ನಟನೆಗೆ ಮನಸೋತಿರುವ ಅವರ ವಿಮರ್ಶೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಾಯಿಯಾಗುವ ಸಂಭ್ರಮದಲ್ಲಿರುವ ‘ಸಂಘರ್ಷ’ ನಟಿ ತೇಜಸ್ವಿನಿ ಆಚಾರ್ ಅದ್ದೂರಿ ಸೀಮಂತ
ಕ್ರಿಕೆಟರ್ ದೀಪಕ್ ಚಾಹರ್ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ? ಸಹೋದರಿ ಮಾಲ್ತಿ ಜನ್ಮದಿನದಂದೇ ಸಿಕ್ತು ಸೂಚನೆ